newsfirstkannada.com

ಬೈಕ್​ಗೆ ಗುದ್ದಿದ ಸಿಎಂ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪೊಲೀಸ್​​ ಜೀಪ್​; ಇಬ್ಬರಿಗೆ ಗಾಯ, ಮತ್ತೋರ್ವ ಗಂಭೀರ

Share :

11-11-2023

  ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪೊಲೀಸ್​ ವಾಹನ

  ರಾಷ್ಟೀಯ ಹೆದ್ದಾರಿ 75ರಲ್ಲಿ ನಡೆದ ಅಪಘಾತ, ರಸ್ತೆಗೆ ಬಿದ್ದ ಸವಾರರು

  ಬೆಂಗಳೂರಿನಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಪೊಲೀಸ್​​ ವಾಹನ

ಕೋಲಾರ: ಪೊಲೀಸ್ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಘಟನೆ ಕೋಲಾರದ ಬೆತ್ತನಿ ಗೇಟ್ ಬಳಿ ನಡೆದಿದೆ. ರಾಷ್ಟೀಯ ಹೆದ್ದಾರಿ 75ರಲ್ಲಿ ಈ ಅಪಘಾತ ನಡೆದಿದ್ದು, ಪರಿಣಾಮ ದ್ವಿಚಕ್ರ ವಾಹನ ಸವಾರರಿಬ್ಬರು ಗಾಯಗೊಂಡಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಪೊಲೀಸ್ ವಾಹನ ಬೈಕ್​ಗೆ ಡಿಕ್ಕಿ ಹೊಡೆದಿದೆ. ಕೋಲಾರದ ಬಂಗಾರಪೇಟೆಯಲ್ಲಿಂದು ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪೊಲೀಸ್ ಜೀಪ್ ಬೈಕ್​ಗೆ ಗುದ್ದಿದೆ.

ಇದನ್ನು ಓದಿ: ಭಯಾನಕ ಅಪಘಾತ.. ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಹೊತ್ತಿ ಉರಿದ ಕಾರು; ಮೂವರು ಸುಟ್ಟು ಕರಕಲು

ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೈಕ್​ಗೆ ಗುದ್ದಿದ ಸಿಎಂ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪೊಲೀಸ್​​ ಜೀಪ್​; ಇಬ್ಬರಿಗೆ ಗಾಯ, ಮತ್ತೋರ್ವ ಗಂಭೀರ

https://newsfirstlive.com/wp-content/uploads/2023/11/Kolar-Accident.jpg

Load More