newsfirstkannada.com

ಬಳ್ಳಾರಿ ಜೈಲಿಗೆ ದರ್ಶನ್‌.. ದಿಢೀರ್ ರೂಟ್ ಮ್ಯಾಪ್‌ ಬದಲಿಸಿದ್ದೇಕೆ ಪೊಲೀಸರು? ಕಾರಣ ಡಿಬಾಸ್ ಫ್ಯಾನ್ಸ್‌!

Share :

Published August 29, 2024 at 3:32pm

    ಮೊದಲು ಪೊಲೀಸ್ ಜೀಪ್​ನಲ್ಲಿ ನಟ ದರ್ಶನ್ ಕರೆದೊಯ್ದಿದ್ದ ಪೊಲೀಸರು

    ಏಕಾಏಕಿ ಚಿಕ್ಕಬಳ್ಳಾಪುರ, ಆನಂತಪುರ ಮಾರ್ಗದಲ್ಲಿ ಪೊಲೀಸರು ಹೋಗಿದ್ದೇಕೆ?

    ಮುನ್ನೆಚ್ಚರಿಕೆ ಸಲುವಾಗಿ ಕೊನೆಯ ಕ್ಷಣದಲ್ಲಿ ಪೊಲೀಸರಿಂದ ಮಾರ್ಗ ಬದಲಾವಣೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆಗಿರುವ ದರ್ಶನ್ ಸದ್ಯ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬಂದಿದ್ದಾರೆ. ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವಾಗ ಕೊನೆಯ ಕ್ಷಣದಲ್ಲಿ ಪೊಲೀಸರು ರೂಟ್ ಬದಲಿಸಿದ್ದಾರೆ. ಈ‌ ಹಿಂದಿನ ಘಟನೆ ಅರಿತ ಪೊಲೀಸ್​ ಅಧಿಕಾರಿಗಳು ದಿಢೀರ್ ಅಂತ ಮಾರ್ಗವನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜೀನ್ಸ್​ ಪ್ಯಾಂಟ್​​, PUMA ಟೀ-ಶರ್ಟ್​, ಕತ್ತಲ್ಲಿ ಕೂಲಿಂಗ್​​ ಗ್ಲಾಸ್​.. ಬಳ್ಳಾರಿಗೆ ಬಂದ ಭಲೇ ಭೂಪತಿ ಹೊಸ ವಿವಾದ..!

ಈ ಮೊದಲು ತುಮಕೂರು, ಚಿತ್ರದುರ್ಗ ಕಡೆಯಿಂದ ಹೋಗಲು ನಿರ್ಧರಿಸಿದ್ದ ಪೊಲೀಸರು ಏಕಾಏಕಿ ಚಿಕ್ಕಬಳ್ಳಾಪುರ, ಆನಂತಪುರ ಮಾರ್ಗದಲ್ಲಿ ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಿಂದ ಹೊರಡುವ ಕೆಲವೇ ಹೊತ್ತಲ್ಲಿ ಮಾರ್ಗ ಬದಲಿಸಲು ಸೂಚನೆ ನೀಡಲಾಗಿತ್ತು. ಹೀಗಾಗಿ ಮೇಖ್ರಿ ಸರ್ಕಲ್ ಬಳಿ ಮಾರ್ಗ ಬದಲಿಸಿದ್ದಾರೆ. ಮೊದಲು ಅಧಿಕಾರಿಗಳು ಪೊಲೀಸ್ ಜೀಪ್​ನಲ್ಲಿ ದರ್ಶನ್​ರನ್ನ ಕರೆದುಕೊಂಡು ಹೋಗಿದ್ದರು. ನಂತರ ಯಲಹಂಕ ಬಳಿ ಜೀಪ್ ನಿಲ್ಲಿಸಿ ವಾಹನ ಬದಲಾಯಿಸಿದ್ದಾರೆ. ಅದೇ ಜೀಪ್​ನಿಂದ ದರ್ಶನ್​ನನ್ನು ಇಳಿಸಿದ ಪೊಲೀಸರು ಟಿಟಿ ವಾಹನಕ್ಕೆ ಹತ್ತಿಸಿ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದಾರೆ.

ರಾಜ್ಯಾದ್ಯಂತ ನಟ ದರ್ಶನ್​ಗೆ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ದರ್ಶನ್​ ಅಧಿಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ದರ್ಶನ್ ಅರೆಸ್ಟ್ ಮಾಡಿ ಕರೆ ತರುವ ವೇಳೆ ಅಭಿಮಾನಿಗಳು ಹಿಂಬಾಲಿಸಬಹುದು ಅಂತ ಮುನ್ನೆಚ್ಚರಿಕೆಯಿಂದ ಕೊನೆ ಕ್ಷಣದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಮುಂಚೆ ಮೈಸೂರಿನಲ್ಲಿ ದರ್ಶನ್ ಅವರನ್ನು ಬಂಧಿಸಿದಾಗ ಮಂಡ್ಯ ಹಾಗೂ ರಾಮನಗರ ಬಳಿ ಫ್ಯಾನ್ಸ್ ಹಿಂಬಾಲಿಸಿ ಬಂದಿದ್ದರು. ಮೈಸೂರಿನಿಂದ ಬರುವಾಗಲೂ ಕೂಡ ಕಾರು ಅಡ್ಡ ಹಾಕಲು ಯತ್ನಿಸಿದ್ದರಂತೆ. ಹೀಗಾಗಿ ಪೊಲೀಸರು ರಾಮನಗರದಲ್ಲಿ ಜೀಪ್ ನಿಲ್ಲಿಸಿ ಅಭಿಮಾನಿಗಳನ್ನು ತಡೆದಿದ್ದರು. ಇಂದು ಕೂಡ ಫ್ಯಾನ್ಸ್ ಹಿಂಬಾಲಿಸಬಹುದು ಎಂದು ಮುನ್ನಚೆರಿಕೆಯಿಂದ ಚಿಕ್ಕಬಳ್ಳಾಪುರ, ಆನಂತಪುರ ಮಾರ್ಗವಾಗಿ ದರ್ಶನ್​ನನ್ನು ಬಳ್ಳಾರಿ ಜೈಲಿಗೆ ತಲುಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿ ಜೈಲಿಗೆ ದರ್ಶನ್‌.. ದಿಢೀರ್ ರೂಟ್ ಮ್ಯಾಪ್‌ ಬದಲಿಸಿದ್ದೇಕೆ ಪೊಲೀಸರು? ಕಾರಣ ಡಿಬಾಸ್ ಫ್ಯಾನ್ಸ್‌!

https://newsfirstlive.com/wp-content/uploads/2024/08/darshan6.jpg

Load More