/newsfirstlive-kannada/media/post_attachments/wp-content/uploads/2024/11/BGM_POLICE.jpg)
ಬೆಳಗಾವಿ: ಸಾರ್ವಜನಿಕರಿಗೆ ಸಮಸ್ಯೆ, ಅಹಿತಕರ ಘಟನೆಗಳು, ಅಪರಾಧಗಳು, ಸುಲಿಗೆ, ದರೋಡೆ ಕಳ್ಳತನ ಇಂತಹವು ನಡೆಯದಂತೆ ಸಮಾಜವನ್ನು ಕಾಪಾಡುವುದು ಪೊಲೀಸರ ಕರ್ತವ್ಯ. ಸರ್ಕಾರದಿಂದ ನೇಮಕ ಆಗುವ ಪೊಲೀಸರಿಗೆ ಇಡೀ ಸಮಾಜದ ರಕ್ಷಣೆ ಹೊಣೆ ಇರುತ್ತೆ. ನಿರ್ದಿಷ್ಟ ಸ್ಥಳದಲ್ಲಿ ಏನು ನಡೆಯಬಾರದು ಎಂದು ಇವರನ್ನು ನೇಮಕ ಮಾಡಲಾಗುತ್ತದೆ. ಆದರೆ ರಕ್ಷಣೆ ಮಾಡಬೇಕಾದವರೆ ಪೊಲೀಸ್ ಠಾಣೆಯಲ್ಲಿ ಹೋಮ- ಹವನ ಮೊರೆ ಹೋದರೆ ಹೇಗೆ?.
ಬೆಳಗಾವಿಯ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಪೊಲೀಸರು ಹೋಮ-ಹವನದ ಮೊರೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಲು ಸಾಲು ಪ್ರಕರಣಗಳು ಠಾಣೆಗೆ ಬರುತ್ತಿದ್ದಂತೆ ಪೊಲೀಸರು ಈ ಪೂಜೆ ಮಾಡಿಸಿದ್ದಾರೆ. ಠಾಣೆಯ ವ್ಯಾಪ್ತಿಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂದು ಈ ಹೋಮ ಹವನ ಮಾಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: RCB ಫ್ರಾಂಚೈಸಿಗೆ ಟಿ.ಎ ನಾರಾಯಣಗೌಡ ಎಚ್ಚರಿಕೆ.. ಕರವೇ ಅಧ್ಯಕ್ಷರು ಹೇಳಿದ್ದು ಏನು?
/newsfirstlive-kannada/media/post_attachments/wp-content/uploads/2024/11/BGM_POLICE_STATION_HOMA.jpg)
ಬೆಳಗಾವಿ ನಗರದ ಶಿವ ಬಸವನಗರದಲ್ಲಿ ಇರುವ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿ ಸಾಲು ಸಾಲು ಅಪರಾಧ ಪ್ರಕರಣಗಳು ನಡೆದಿವೆ. ಕಳೆದ ಎರಡು ವಾರದಿಂದ ಈ ಠಾಣೆಯಲ್ಲಿ ಕ್ರೈಂ ಪ್ರಕರಣಗಳು ದಾಖಲು ಆಗಿವೆ. ಮಹಿಳೆ ಮೇಲೆ ವಿವಸ್ತ್ರಗೊಳಿಸಿ ಹಲ್ಲೆ, ಫೋಟೋಗ್ರಾಫರ್ ಕಿಡ್ನಾಪ್, ಪ್ರೀತಿ ವಿಚಾರಕ್ಕೆ ಸಂಬಂಧಪಟ್ಟಂತೆ ಶೂಟೌಟ್ ಹೀಗೆ ಪ್ರಕರಣಗಳು ಒಂದರ ಹಿಂದೆ ಒಂದು ನಡೆಯುತ್ತಿವೆ. ಹೀಗಾಗಿಯೇ ಪೊಲೀಸರು ಠಾಣೆಯಲ್ಲಿ ಹೋಮ, ಹವನ ಮಾಡಿಸಿದ್ದಾರೆ. ಮಾಳಮಾರುತಿ ಸಿಪಿಐ ಜೆಎಂ ಕಾಲಿಮಿರ್ಜಿ ನೇತೃತ್ವದಲ್ಲಿ ಪೂಜೆ ನಡೆದಿದೆ ಎನ್ನಲಾಗಿದೆ.
ಪೂಜೆಯಲ್ಲಿ ತೆಂಗಿನ ಕಾಯಿ, ಕುಂಕುಮ, ಭಂಡಾರ, ಬಾಳೆ ಹಣ್ಣುಗಳು, ಕರ್ಪೂರ, ಸ್ವೀಟ್ಸ್​, ಅರಿಶಿಣ ಕೊಂಬು, ಅಡಿಕೆ, ಎಲೆಗಳು ಸೇರಿ ಇತರೆ ವಸ್ತುಗಳು ಇರುವುದು ಕಂಡು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us