newsfirstkannada.com

ನಟ ದರ್ಶನ್​ ಬಾಳಲ್ಲಿ ಸುಂಟರಗಾಳಿ ಎಬ್ಬಿಸಿದ ಚಾರ್ಜ್‌ಶೀಟ್​​; ಇದರಲ್ಲಿರೋ ಆ 8 ಸೀಕ್ರೆಟ್ಸ್​ ಏನು?

Share :

Published September 3, 2024 at 6:12am

    ದರ್ಶನ್ ಬಾಳಿನಲ್ಲಿ ಕೆಲವೇ ದಿನಗಳಲ್ಲಿ ಬೀಸಲಿವೆ ಆ ಎಂಟು ಸುಂಟರಗಾಳಿ

    ದರ್ಶನ್ ವಿರುದ್ಧ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಲ ಖಾಕಿ ಪಡೆ ರೆಡಿಯಾಗಿದೆ

    ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿರುವ ಅಂಶಗಳು ಏನೇನು?

ಬೆಂಗಳೂರು: ದರ್ಶನ್ ರಿಲೀಸ್ ಆಗ್ತಾರಾ? ದರ್ಶನ್ ರಿಲೀಸ್ ಯಾವಾಗ ಆಗ್ತಾರೆ? ಈ ಎರಡು ಪ್ರಶ್ನೆಗಳು ಸದ್ಯ ಅಭಿಮಾನಿಗಳ ಮುಂದೆ ನಿಂತಿವೆ. ಕರ್ನಾಟಕದ ಕುತೂಹಲವು ಈ ಎರಡು ಪ್ರಶ್ನೆಗಳೇ ಆಗಿವೆ. ಆದ್ರೆ ಇದಕ್ಕೆ ಉತ್ತರ ಆ ಒಂದೇ ಒಂದು 4 ಸಾವಿರ ಪುಟಗಳ ರಾಶಿಯಲ್ಲಿ ಅಡಗಿದೆ. ಆ ಪುಟಗಳೇ ದರ್ಶನ್ ಮುಂದಿನ ಬಾಳಿನ ಭವಿಷ್ಯ ಬರೆಯಲಿವೆ. ಆ ಪುಟಗಳೇ ದರ್ಶನ್​ ಮುಂದಿನ ದಿನಗಳನ್ನು ನಿರ್ದರಿಸಲಿವೆ. ಆ ಪುಟಗಳೇ ದರ್ಶನ್ ಬಾಳಿನಲ್ಲಿ ನೂರೆಂಟು ಬಿರುಗಾಳಿಯನ್ನೂ ಬೀಸಲಿವೆ

ದರ್ಶನ್​​ ದಿಕ್ಕು ಬದಲಿಸುತ್ತಾ ಚಾರ್ಜ್​​ಶೀಟ್​​ ಸುಂಟರಗಾಳಿ!?

ದರ್ಶನ್​​​​ ರಿಲೀಸ್​​ ಬಗ್ಗೆ ಯೋಚಿಸುತ್ತಿದ್ದ ಅಭಿಮಾನಿಗಳಿಗೆ ಅರ್ಧ ಗುಡ್​ ನ್ಯೂಸ್​ ಮತ್ತರ್ಧ ಬ್ಯಾಡ್​​ನ್ಯೂಸ್​​. ಅದೇನು ಅಂದ್ರೆ , ಕೊನೆಗೂ ಪೊಲೀಸರು ಚಾರ್ಜ್​​ಶೀಟ್​​ ಸಲ್ಲಿಸೋದಕ್ಕೆ ಸಜ್ಜಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​​ ಗ್ಯಾಂಗ್​​ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸೋದಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ, ಚಾರ್ಜ್​​ಶೀಟ್​ ಅನ್ನೋ ಸುಂಟರಗಾಳಿ ಎಬ್ಬಿಸೋ ಎಫೆಕ್ಟ್​​ ದರ್ಶನ್​​ ಪಾಲಿಗೆ ವರವೂ ಆಗಬಹುದು. ಶಾಪವೂ ಆಗಬಹುದು. ಆದರೆ, ದರ್ಶನ್​​​ಗೆ ಕೊನೆಯ ಪಕ್ಷ ಬೇಲ್ ಸಿಗುತ್ತೋ? ಇಲ್ಲವೋ? 4000 ಪುಟಗಳ ಚಾರ್ಜ್​​ಶೀಟ್​ ಅನ್ನೋ ಬೃಹತ್​ ಪುಸ್ತಕ ಇದಕ್ಕೆ ಉತ್ತರ ನೀಡಲಿದೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ 5 ಬುದ್ಧಿವಾದ? ಕಿಚ್ಚನ ಪಂಚಿಂಗ್ ಡೈಲಾಗ್‌ ಬಳ್ಳಾರಿ ಜೈಲಿಗೂ ತಲುಪಿತಾ?

4000 ಪುಟಗಳ ಜಾರ್ಜ್​​ಶೀಟ್​ ಬೃಹತ್​ ಪುಸ್ತಕದಲ್ಲಿದೆ 8 ಸೀಕ್ರೆಟ್ಸ್​!

ಬರೋಬ್ಬರಿ 4000 ಪುಟಗಳ ಚಾರ್ಜ್​​ಶೀಟ್ ಸಿದ್ಧಗೊಂಡಿದೆ. 24ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದೆ ತನಿಖಾ ತಂಡ. ಇದೇ ಬೃಹತ್​ ಚಾರ್ಜ್​​ಶೀಟ್​ ಪುಸ್ತಕದಲ್ಲೇ ಎಂಟು ರಹಸ್ಯಗಳು ಅಡಗಿವೆ. ಆ ಎಂಟೂ ರಹಸ್ಯಗಳನ್ನು ದರ್ಶನ್ ಪರ ವಕೀಲರು ಭೇದಿಸಿದರೇ ಜೈಲೋ? ಬೇಲೋ? ಅನ್ನೋ ಪ್ರಶ್ನೆಗೆ ಉತ್ತರ ಸಿಗಲಿದೆ. ಅದೂ ಸಹ ಕೋರ್ಟ್​​ ಕೊಡಲಿದೆ. ಭಯಾನಕ ಸಂಗತಿ ಏನೆಂದರೇ, 4000 ಪುಟಗಳ ದೋಷಾರೋಪಣ ಪಟ್ಟಿಯಲ್ಲಿ ಡಿ ಗ್ಯಾಂಗ್ ಪ್ರದರ್ಶಿಸಿರೋ ಕ್ರೂರತ್ವದ ರಕ್ತಸಿಕ್ತ ಅಧ್ಯಾಯ ಎದ್ದು ಕಾಣುತ್ತಿದೆ. ಇಲ್ಲಿ ಸೂಕ್ಷ್ಮಾತಿಸೂಕ್ಷ್ಮ ಕಾಯ್ದೆಗಳನ್ನೂ ಉಲ್ಲೇಖಿಸಿ ಪ್ರತೀ ಪುಟದಲ್ಲೂ ಸಾಧ್ಯವಾದಷ್ಟು ಕೇಸ್​​ಗಳನ್ನು ಜಡಿದಿರುವದ ಸಾಧ್ಯತೆ ಇದೆ. ಹಾಗಾಗಿಯೇ ಜಾರ್ಜ್​​ಶೀಟ್​ ಅನ್ನೋ ಸುಂಟರಗಾಳಿ ದರ್ಶನ್​​ ಪಾಲಿಗೆ ಬಹುದೊಡ್ಡ ಬದಲಾವಣೆಯ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 3 ಸಿಸಿಟಿವಿ, 3 ಬಾಡಿ ವೋರ್ನ್ ಕ್ಯಾಮೆರಾ; ಅಬ್ಬಾಬ್ಬ..! ದರ್ಶನ್ ಮೇಲೆ 24 ಗಂಟೆ ನಿಗಾ ಇಡಲು ಏನೆಲ್ಲ ವ್ಯವಸ್ಥೆ ಗೊತ್ತಾ?

ಸುಂಟರಗಾಳಿ ಸೀಕ್ರೆಟ್​ 1: ರೇಣುಕಾಸ್ವಾಮಿ ಹತ್ಯೆ FIR ಪ್ರತಿ

ಜಾರ್ಜ್​​ಶೀಟ್​​ನಲ್ಲಿ ಮೊದಲಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಥಮ ಪ್ರಾಥಮಿಕ ವರದಿಯ ಪ್ರತಿ ದಾಖಲಾಗಿರುತ್ತೆ. ಮೊದಲಿಗೆ ಜೂನ್ 9ರಂದು ಸುಮನಹಳ್ಳಿ ಬಳಿಯ ಅಪಾರ್ಟ್​​ಮೆಂಟ್​ ಸೆಕ್ಯೂರಿಟಿ ಗಾರ್ಡ್​​ ಕೇವಲ್ ರಾಮ್​ ದೋರ್​ಜೀ ಕೊಟ್ಟ ದೂರಿನ ಮೇಲೆ ಪೊಲೀಸರು ದಾಖಲಿಸಿದ ಎಫ್​​ಐಆರ್​​ ವರದಿಯ ಸಾರಾಂಶದ ಮಾಹಿತಿ ಅಡಗಿರುತ್ತದೆ. ಬೆಳಗ್ಗೆ 8 ಗಂಟೆಗೆ ಅಪಾರ್ಟ್​​ಮೆಂಟ್​​ ಕೆಲಸಕ್ಕೆ ಹೋಗುತ್ತಿದ್ದ ಸೆಕ್ಯೂರಿಟಿಗೆ ಕಂಡಿದ್ದ ಅಪರಿಚಿತ ಮೃತ ದೇಹದ ಆಧಾರದ ಮೇಲೆ ತನಿಖೆ ಆರಂಭವಾಗಿತ್ತು. ಈ ಸಂದರ್ಭ ಮೃತ ದೇಹದ ಮೇಲಿದ್ದ ಚಹರೆಗಳು ಬಿಚ್ಚಿಟ್ಟ ಸತ್ಯಗಳ ಆಧಾರದಲ್ಲೇ ಪೊಲೀಸರು ಅಸಲಿ ಗೇಮ್ ಆರಂಭಿಸಿದ್ದು. ಈ ಎಫ್​​ಐಆರ್​​ನಲ್ಲಿ ಪೊಲೀಸರು ಯಾಮಾರಿದರೆ ಇಲ್ಲಿಂದ್ಲೇ ದರ್ಶನ್​​ ಪರ ವಕೀಲರು ಪಾಯಿಂಟ್ ಟು ಪಾಯಿಂಟ್​​ ಲೆಕ್ಕ ಹಾಕಬಹುದು. ಈ ಕ್ಷಣಕ್ಕೂ ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಸಿಕ್ತಿರೋ ದಾಖಲೆ ಇದೇ ಎಫ್​ಐಆರ್​.

ಇದನ್ನೂ ಓದಿ: ಬಳ್ಳಾರಿಯಲ್ಲಿದ್ರೂ ಬಿಡದ ಪವಿತ್ರಾ ಗೌಡ.. ಕೊಲೆ ಕೇಸ್‌ಗೆ ಅತಿ ದೊಡ್ಡ ಟ್ವಿಸ್ಟ್; ದರ್ಶನ್‌ಗೆ ಹೊಸ ಟೆನ್ಷನ್‌; ಏನಾಯ್ತು?

ಸುಂಟರಗಾಳಿ ಸೀಕ್ರೆಟ್​ 2 : 17 ಬಂಧಿತರ ಸಂಪೂರ್ಣ ಜಾತಕ

ರೇಣುಕಾಸ್ವಾಮಿ ಕೊಲೆ ಕೇಸ್​​ನ ಜಾರ್ಜ್​​ಶೀಟ್​ ಸುಂಟರಗಾಳಿಯ ಎರಡನೇ ಸೀಕ್ರೆಟ್​ 17 ಮಂದಿ ಬಂಧಿತರ ಸಂಪೂರ್ಣ ಜಾತಕ. ಈ ಪ್ರಕರಣದಲ್ಲಿ ಒಟ್ಟು 17 ಆರೋಪಿಗಳಿದ್ದು, ಅಷ್ಟೂ ಆರೋಪಿಗಳ ಹೆಸರು, ವಿಳಾಸ, ಅಪರಾಧ ಹಿನ್ನೆಲೆ, ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅವರ ಪಾತ್ರ ಏನು ಅನ್ನೋ ಕಂಪ್ಲೀಟ್​​ ಮಾಹಿತಿಯನ್ನೊಳಗೊಂಡ ಬೃಹತ್​ ಮಾಹಿತಿಯ ವರದಿಯೂ ಸಹ ಜಾರ್ಜ್​​ಶೀಟ್​​ನಲ್ಲಿ ದಾಖಲಾಗಿದೆ.

ಸುಂಟರಗಾಳಿ ಸೀಕ್ರೆಟ್​ 3 :200ಕ್ಕೂ ಅಧಿಕ ಸಾಕ್ಷಿಗಳ ಪಟ್ಟಿ

ರೇಣುಕಾಸ್ವಾಮಿ ಕೊಲೆ ಕೇಸ್​​ ಸಂಬಂಧ ಪೊಲೀಸರು ಚಾರ್ಜ್​​ಶೀಟ್​​ನಲ್ಲಿ 200ಕ್ಕೂ ಅಧಿಕ ಸಾಕ್ಷಿಗಳ ಪಟ್ಟಿಯನ್ನೇ ನೀಡಲಿದ್ದಾರೆ. ಪ್ರಕರಣ ಸಂಬಂಧ ಭೌತಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷಿ ಸಂಗ್ರಹ ಆಗಿದೆ. ಅಲ್ಲದೆ, ಪ್ರತ್ಯಕ್ಷ, ಪರೋಕ್ಷ ಸಾಕ್ಷಿ ಹೊರತುಪಡಿಸಿ 200 ಗಡಿದಾಟಿದೆ. ಪ್ರಕರಣ ಸಂಬಂಧ ದಿನದಿಂದ ದಿನಕ್ಕೆ ಸಾಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದರಿಂದಲೇ ಚಾರ್ಜ್​​ಶೀಟ್​​ ಸಂಖ್ಯೆ 4000 ಗಡಿ ಮುಟ್ಟಿದೆ. ಇವುಗಳ ಜೊತೆಗೆ ದರ್ಶನ್​​ ಗ್ಯಾಂಗ್​​ಗೆ ಬಹುದೊಡ್ಡ ಭಯವೂ ಶುರುವಾಗಿದೆ. ಈ ಕೇಸ್​ ಸಂಬಂಧ 30ಕ್ಕೂ ಹೆಚ್ಚು ಸಿಸಿಟಿವಿ ಫೂಟೇಜ್​​ಗಳನ್ನ ಸಂಗ್ರಹಿಸಿದ್ದಾರೆ. 400ಕ್ಕೂ ಅಧಿಕ ಸಿಡಿಆರ್​ ಅನಾಲಿಸಿಸ್ ಆಗಿದೆ. 13 ಮೊಬೈಲ್ ಡೇಟಾ ರಿಟ್ರಿವಲ್ ಆಗಿದೆ. 190 ಕ್ಕೂ ಹೆಚ್ಚು ಟೆಕ್ನಿಕಲ್ ಡಿಜಿಟಲ್ ಸೇರಿ ಸೆಕೆಂಡರಿ ಎವಿಡೆನ್ಸ್ ರೇಣುಕಾಸ್ವಾಮಿ ಕೇಸ್ ನಲ್ಲಿ ಪತ್ತೆ ಮಾಡಲಾಗಿದೆ.

ಸುಂಟರಗಾಳಿ ಸೀಕ್ರೆಟ್​ 4: 164, 161 ತಪ್ಪೊಪ್ಪಿಗೆ ಹೇಳಿಕೆಗಳು

ತನಿಖಾ ಕಾಲದಲ್ಲಿ‌ ಸಂಗ್ರಹಿಸಿದ ಸಾಕ್ಷಿಗಳ ಲಿಸ್ಟ್, ಬಂಧಿತ ಆರೋಪಿಗಳು ಕೊಲೆ‌ ಪ್ರಕರಣದಲ್ಲಿ ನಿರ್ವಹಿಸಿರೋ ಪಾತ್ರ, ಜೊತೆಗೆ ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯ ಪ್ರತಿಗಳು ಜಾರ್ಜ್​​ಶೀಟ್​​ನಲ್ಲಿ ಇರಲಿವೆ. ಇದಲ್ಲದೇ, ಪ್ರತ್ಯಕ್ಷದರ್ಶಿಗಳ ಸಾಕ್ಷಿ ಹೇಳಿಕೆ ಬಹುಮುಖ್ಯ ಆಗಲಿದೆ. 20ಕ್ಕೂ ಅಧಿಕ ಮಂದಿಯಿಂದ ನ್ಯಾಯಾಧೀಶರ ಮುಂದೆ ದಾಖಲಿಸುವಂತಹ 164ರ ಅಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 50ಕ್ಕೂ ಅಧಿಕ ಮಂದಿಯಿಂದ 161ರ ಅಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ 70ಕ್ಕೂ ಅಧಿಕ ತಪ್ಪೊಪ್ಪಿಗೆ ಹೇಳಿಕೆಗಳೂ ಸಹ ಇದೀಗ ದರ್ಶನ್​​ ಪಾಲಿಗೆ ಸುಂಟರಗಾಳಿಯನ್ನೇ ಎಬ್ಬಿಸಲಿದೆ.

ಸುಂಟರಗಾಳಿ ಸೀಕ್ರೆಟ್​ 5:52 ಜಾಗಗಳ ಮಹಜರ್​ ವರದಿ

ರೇಣುಕಾಸ್ವಾಮಿ ಕೊಲೆ ಕೇಸ್​​ನ ಜಾರ್ಜ್​​ಶೀಟ್​ ಸುಂಟರಗಾಳಿಯ ಐದನೇ ಸೀಕ್ರೆಟ್​ ತುಂಬಾನೇ ಮಹತ್ವದಾಗಿದೆ. ದರ್ಶನ್ ಭವಿಷ್ಯ ನಿರ್ಧರಿಸೋ ಬಹುಮುಖ್ಯ ಅಂಶವೂ ಇದೇ ಆಗಿದೆ ಅಂದ್ರೂ ತಪ್ಪಿಲ್ಲ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಸಂಬಂಧಿಸಿದ ಪ್ರತೀ ಮೂಮೆಂಟ್ ಕೂಡ ಮಹಜರ್ ಆಗಿದೆ. ರೇಣುಕಾಸ್ವಾಮಿ ಹತ್ಯೆ ಸಂಬಂಧ ಒಟ್ಟಾರೆ 52 ಕಡೆಗಳಲ್ಲಿ ಸ್ಥಳ ಮಹಜರ್ ಮಾಡಲಾಗಿದೆ.

ಇದನ್ನೂ ಓದಿ: 3 ದಿನ ಸ್ನಾನವಿಲ್ಲ, ಒಂದೇ ಟೀ ಶರ್ಟ್​​.. ಬಳ್ಳಾರಿ ಜೈಲಲ್ಲಿ ನಟ ದರ್ಶನ್‌ಗೆ 5 ದುಸ್ಥಿತಿ; ಏನದು?

ರೇಣುಕಾಸ್ವಾಮಿ ಕಿಡ್ನ್ಯಾಪ್ ಆದ ಚಿತ್ರದುರ್ಗದಿಂದ ಹಿಡಿದು ಆಟೋದಿಂದ ಇಳಿದು ಕಾರು ಹತ್ತುವ ಸ್ಥಳ, ಆರೋಪಿಗಳು ಮಾರ್ಗಮಧ್ಯೆ ಬಿಡದಿ ಬಳಿ ಕಾರು ನಿಲ್ಲಿಸಿ ಊಟ ಮಾಡಿದ್ದ ಸ್ಥಳ, ಪಟ್ಟಣಗೆರೆ ಶೆಡ್, ಮೃತದೇಹ ಬಿಸಾಡಿದ್ದ ಸುಮ್ಮನಹಳ್ಳಿ ರಾಜಕಾಲುವೆ, ಆರೋಪಿಗಳು ಬಟ್ಟೆ ಬಿಸಾಡಿದ್ದ ಕೆಂಗೇರಿ ಬಳಿಯ ವೃಷಭಾವತಿ ನದಿ, ಆರ್.ಆರ್.ನಗರದ ಐಡಿಯಲ್ ಹೋಂಸ್ ರಸ್ತೆ, ಆರ್.ಆರ್.ನಗರದ ಹೋಟೆಲ್, ಮೈಸೂರಿನ ಹೋಟೆಲ್, ದರ್ಶನ್​​ ಮನೆ ಎಲ್ಲಾ ಸ್ಥಳಗಳನ್ನು ಮಹಜರ್​ ಮಾಡಲಾಗಿದೆ.. ಹಾಗಾಗಿಯೇ ದರ್ಶನ್ ಪವಿತ್ರಗೌಡ ಸೇರಿ 17 ಮಂದಿ ಆರೋಪಿಗಳ ಮನೆ ಸೇರಿ 52 ಮಹಜರ್ ಆಗಿದೆ.

ಸುಂಟರಗಾಳಿ ಸೀಕ್ರೆಟ್​ 6 :66 ಫ್ಲೋರೆನ್ಸಿಕ್ ಎವಿಡೆನ್ಸ್​ಗಳು

ರೇಣುಕಾಸ್ವಾಮಿ ಕೊಲೆಗೆ ಬಳಸಿದ್ದ ವಸ್ತುಗಳು, ಆತನ ಶವ ಪರೀಕ್ಷೆ ವೇಳೆ ಸಂಗ್ರಹಿಸಿದ ಹಾಗೂ ಆರೋಪಿಗಳಿಂದ ವಶಕ್ಕೆ ಪಡೆದ ವಸ್ತುಗಳನ್ನೂ ಪೊಲೀಸರು ಎಫ್ಎಸ್ಎಲ್‌ಗೆ ಕಳುಹಿಸಿಕೊಟ್ಟಿದ್ರು.. ರೇಣುಕಾಸ್ವಾಮಿಯ ಬಟ್ಟೆಗಳು ಸೇರಿ ಇನ್ನಿತರ ವಸ್ತುಗಳು, ಸಿಸಿಟಿವಿ ಫೂಟೇಜ್, ಮೊಬೈಲ್ ಫೋನ್‌ಗಳು ಸೇರಿ 66 ವಸ್ತುಗಳನ್ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿತ್ತು. ಪ್ರಕರಣದಲ್ಲಿ ಆರೋಪಿಗಳ ಪಾತ್ರ ತಿಳಿಯಲು ಅವರಿಗೆ ಸಂಬಂಧಿಸಿದ ಪ್ರತಿಯೊಂದು ವಸ್ತುವಿನ ರಿಪೋರ್ಟ್​ಗಾಗಿ ಕಾಯಲಾಗಿತ್ತು..ಇದೀಗ ಅಷ್ಟೂ ವಸ್ತುಗಳ ವರದಿ ಪೊಲೀಸರ ಕೈಗೆ ಸಿಕ್ಕಿದೆ. ಇವೆಲ್ಲವೂ ಇದೀಗ ದರ್ಶನ್ ವಿರುದ್ಧದ ಫ್ಲೋರೆನ್ಸಿಕ್ ಎವಿಡೆನ್ಸ್​ಗಳಾಗಿವೆ. ಇದೆಲ್ಲಾ ವಿಧಿವಿಜ್ಞಾನ ಪ್ರಯೋಗಾಲಯದ ಸಾಕ್ಷಿಗಳೂ ಸಹ ಜಾರ್ಜ್​​ಶೀಟ್​ ಸುಂಟರಗಾಳಿಯಲ್ಲಿ ಇರಲಿವೆ ಎನ್ನಲಾಗ್ತಿದೆ.

ಸುಂಟರಗಾಳಿ ಸೀಕ್ರೆಟ್​ 7 :ಪಿತೂರಿಗಳ ಕಂಪ್ಲೀಟ್​​ ರಿಪೋರ್ಟ್

ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಅತಿ ದೊಡ್ಡ ಪಿತೂರಿಗಳ ಪಟ್ಟಿಯನ್ನೇ ಪೊಲೀಸರು ಜಾರ್ಜ್​​ಶೀಟ್​​ನಲ್ಲಿ ಸೇರಿಸಿದ್ದಾರೆ. ಆರಂಭದಲ್ಲಿ ಸಾಕ್ಷಿ ನಾಶಪಡಿಸೋದಕ್ಕೆ ಮಾಡಿದ ಪಿತೂರಿಗಳ ಬಗ್ಗೆ ಉಲ್ಲೇಖಿಸಿದ್ದಾರೆ. ವರದಿಯಲ್ಲಿ ಆರೋಪಿಗಳ ಪ್ಲ್ಯಾನ್ ಸಂಬಂಧ ಸಂಪೂರ್ಣ ಮಾಹಿತಿಯನ್ನೇ ದಾಖಲಿಸಿದ್ದಾರೆ. ಇದು ದರ್ಶನ್​​ ಪಾಲಿಗೆ ವರವಾಗೋದಕ್ಕಿಂತ ಹೆಚ್ಚು ಶಾಪವಾಗಲಿದೆ. ಎಲ್ಲೋ ಒಂದು ಕಡೆ ಬೇಲ್ ಸಿಗಬಹುದು ಅನ್ನೋ ಲೆಕ್ಕಾಚಾರವನ್ನೂ ಈ ಪಿತೂರಿಗಳ ರಿಪೋರ್ಟ್​​ ಬುಡಮೇಲು ಮಾಡೋ ಸಾಧ್ಯತೆ ಇದೆ.

ಸುಂಟರಗಾಳಿ ಸೀಕ್ರೆಟ್​ 8 :ತನಿಖಾಧಿಕಾರಿಗಳ ಅಸಲಿ ರಿಪೋರ್ಟ್

ಎಲ್ಲಕ್ಕಿಂತಲೂ ಮಿಗಿಲಾಗಿ ಇದುವೇ ದರ್ಶನ್​​ ಪಾಲಿಗೆ ಸುಂಟರಗಾಳಿಯಂತೆ ಅಲ್ಲೋಲ ಕಲ್ಲೋಲ ಸೃಷ್ಟಿಸುವಂಥಾದ್ದು. ರೇಣುಕಾಸ್ವಾಮಿ ಕೊಲೆ ಕೇಸ್​​​ನ ತನಿಖಾಧಿಕಾರಿ ಎಸಿಪಿ ಚಂದನ್ ಅಂಡ್​​ ಟೀಮ್ ಅಚ್ಚುಕಟ್ಟಾಗಿ ಕಟ್ಟುನಿಟ್ಟಿನಿಂದ ಅಂತಿಮ ವರದಿ ಸಿದ್ಧಪಡಿಸಿದೆ. 4000 ಪುಟಗಳ ಬೃಹತ್​ ಜಾರ್ಜ್​​ಶೀಟ್​​ ಪುಸ್ತಕ ರೂಪಿಸೋದಕ್ಕಾಗಿ ಹಲವು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಪ್ರತೀ ಠಾಣೆಯ ಇನ್ಸ್​ಪೆಕ್ಟರ್​ಗೆ, ಪಿಎಸ್​​ಐಗಳಿಗೆ ಒಂದೊಂದು ಹೊಣೆ ವಹಿಸಲಾಗಿತ್ತು. ಸುಮಾರು 20ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿ ಬಳಸಿಕೊಂಡು ಜಾರ್ಜ್​​ಶೀಟ್​ ಸಿದ್ಧಗೊಂಡಿದೆ. ಇದೇ ಅಂತಿಮ ವರದಿಯ ಬೃಹತ್​ ಪುಸ್ತಕ ದರ್ಶನ್​​ ಬದುಕಿನ ದಿಕ್ಕು ದೆಸೆ ಬದಲಿಸಬಲ್ಲ ಅಸ್ತ್ರದಂತೆ ಕಾಣುತ್ತಿದೆ. ತುಸು ಹೆಚ್ಚುಕಮ್ಮಿ ಆದರೂ ದರ್ಶನ್​​​ಗೆ ಬೇಲ್ ಸಿಗೋ ಸಾಧ್ಯತೆಯೇ ಇರೋದಿಲ್ಲ. ದರ್ಶನ್​​ ಪರ ವಕೀಲರು ಸದ್ಯ, ಇದೇ 4000 ಪುಟಗಳಲ್ಲಿ ಇನ್ನೂ ಏನೇನಿದೆ ಅನ್ನೋ ಕೌತುಕದಲ್ಲಿದ್ದಾರೆ. ಬಹುಮುಖ್ಯವಾಗಿ 17 ಜನರ ಮಾಡಿದ್ದೇನು ಅನ್ನೋ ಮಾಹಿತಿಯೇ ದರ್ಶನ್​​ ರಿಲೀಸ್​​​ ಭವಿಷ್ಯ ನುಡಿಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್​ ಬಾಳಲ್ಲಿ ಸುಂಟರಗಾಳಿ ಎಬ್ಬಿಸಿದ ಚಾರ್ಜ್‌ಶೀಟ್​​; ಇದರಲ್ಲಿರೋ ಆ 8 ಸೀಕ್ರೆಟ್ಸ್​ ಏನು?

https://newsfirstlive.com/wp-content/uploads/2024/06/Darshan-Arrest-Case-6.jpg

Load More