newsfirstkannada.com

ವಿಜಯಲಕ್ಷ್ಮಿ ಫ್ಲಾಟ್​ನಲ್ಲಿ ದರ್ಶನ್​ ಬಟ್ಟೆಗಳು ಪತ್ತೆ.. ಕಾಸ್ಟ್ಯೂಮ್ ಡಿಸೈನರ್​ನಿಂದ ಕೇಸ್​​ಗೆ ಬಿಗ್ ಹಿಂಟ್

Share :

Published June 17, 2024 at 4:43pm

  ಕೊಲೆ ದಿನ ಧರಿಸಿದ್ದ ಆ ಡ್ರೆಸ್​ಗಳನ್ನು ಮನೆಯಲ್ಲಿ ಬಚ್ಚಿಡಲಾಗಿತ್ತಾ?

  ವಿಜಯಲಕ್ಷ್ಮಿ ಮನೆಗೆ ಹೋಗಿ ಬಟ್ಟೆ ಜಪ್ತಿ ಮಾಡಿರುವ ಪೊಲೀಸರು

  ಪೊಲೀಸರು ವಿಚಾರಣೆ ನಡೆಸುವಾಗ ದರ್ಶನ್ ಏನು ಹೇಳಿದ್ದರು?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಅವರ ಗ್ಯಾಂಗ್ ಅನ್ನು ಅರೆಸ್ಟ್ ಮಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಸ್ಥಳ ಮಹಜರು, ಕೆಲ ಸಾಕ್ಷಿಗಳ ಮಾಹಿತಿಯನ್ನು ತನಿಖೆ ವೇಳೆ ಸಂಗ್ರಹ ಮಾಡಲಾಗಿದೆ. ಸದ್ಯ ಇದೀಗ ರೇಣುಕಾಸ್ವಾಮಿ ಹತ್ಯೆಯ ವೇಳೆ ದರ್ಶನ್ ಧರಿಸಿದಂತಹ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಭೀಕರ ರೈಲು ದುರಂತದಲ್ಲಿ ಉಸಿರು ಚೆಲ್ಲಿದ 5 ಪ್ರಯಾಣಿಕರು.. 25 ಮಂದಿ ಗಂಭೀರ; ಸಾವಿನ ಸಂಖ್ಯೆ ಹೆಚ್ಚಾಗೋ ಸಾಧ್ಯತೆ

ರೇಣುಕಾಸ್ವಾಮಿ ಹತ್ಯೆಯ ದಿನ ದರ್ಶನ್ ಧರಿಸಿದಂತ ಬಟ್ಟೆಗಳು ಪತ್ನಿ ವಿಜಯಲಕ್ಷ್ಮಿ ಫ್ಲಾಟ್​ನಲ್ಲಿ ಪತ್ತೆಯಾಗಿವೆ. ಕೃತ್ಯ ನಡೆದ ದಿನ ದರ್ಶನ್ ತನ್ನ ಬಟ್ಟೆಗಳನ್ನು ಕಾಸ್ಟ್ಯೂಮ್ ಡಿಸೈನರ್ ಕೈಗೆ ಕೊಟ್ಟಿದ್ದನು. ಬಳಿಕ ಅವುಗಳನ್ನು ವಿಜಯಲಕ್ಷ್ಮಿ ಮನೆಯಲ್ಲಿ ಹೋಗಿ ಕಾಸ್ಟ್ಯೂಮ್ ಡಿಸೈನರ್ ಇಟ್ಟಿದ್ದನು. ಈ ವಿಚಾರ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿಗೆ ಗೊತ್ತಿರಲಿಲ್ಲ.

ಇದನ್ನೂ ಓದಿ: ಮಾನವೀಯತೆ ಮೆರೆದ ಡಾ.CN ಮಂಜುನಾಥ್.. ನೂತನ ಸಂಸದರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ರೇಣುಕಾಸ್ವಾಮಿ ಹತ್ಯೆಯ ಸಂಬಂಧ ನಟ ದರ್ಶನ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಈ ವೇಳೆ ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆಗಳು ಎಲ್ಲಿವೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ದರ್ಶನ್ ಬಟ್ಟೆ ಮನೆಯಲ್ಲಿವೆ ಎಂದು ಹೇಳಿದ್ದರು. ಆದರೆ ದರ್ಶನ್ ವಿಚಾರಣೆ ಬಳಿಕ ಮನೆಗೆ ಹೋಗಿ ಮಹಜರು ಮಾಡುವಾಗ ಬಟ್ಟೆಗಳು ಸಿಕ್ಕಿರಲಿಲ್ಲ. ಕೊನೆಗೆ ಕಾಸ್ಟ್ಯೂಮ್ ಡಿಸೈನರ್​ನನ್ನ ಕೇಳಿದಾಗ ತಾನೇ ವಿಜಯಲಕ್ಷ್ಮಿ ಫ್ಲಾಟ್​ನಲ್ಲಿ ಇಟ್ಟಿರುವುದಾಗಿ ಹೇಳಿದ್ದಾನೆ. ಸದ್ಯ ದರ್ಶನ್ ಅವರ ಬಟ್ಟೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಜಯಲಕ್ಷ್ಮಿ ಫ್ಲಾಟ್​ನಲ್ಲಿ ದರ್ಶನ್​ ಬಟ್ಟೆಗಳು ಪತ್ತೆ.. ಕಾಸ್ಟ್ಯೂಮ್ ಡಿಸೈನರ್​ನಿಂದ ಕೇಸ್​​ಗೆ ಬಿಗ್ ಹಿಂಟ್

https://newsfirstlive.com/wp-content/uploads/2024/06/DARSHAN_WIFE.jpg

Load More