newsfirstkannada.com

VIDEO: ಕಾರ್​​ ವಿಂಡೋ ಪುಡಿ ಪುಡಿ.. ಬೆಂಗಳೂರಲ್ಲಿ ಹಾಡಹಗಲೇ ಯುವಕರ ಪುಂಡಾಟ!

Share :

08-11-2023

    ಸಿಲಿಕಾನ್​ ಸಿಟಿಯಲ್ಲಿ ಹಾಡಹಗಲೇ ಯುವಕರ ಪುಂಡಾಟ

    ಹೆಲ್ಮೆಟ್​ ಇಲ್ಲದೆ ಮೂವರು ಸ್ಕೂಟಿಯಲ್ಲಿ ಫುಲ್​​ ಸುತ್ತಾಟ..!

    ಕಾರ್​ ವಿಂಡೋ ಕೂಡ ಪುಡಿ ಪುಡಿ ಮಾಡಿ ಹೋದ ಪುಂಡರು

ಬೆಂಗಳೂರು: ಹಾಡಹಗಲೇ ನಡು ರಸ್ತೆಯಲ್ಲಿ ಯುವಕರು ಸ್ಕೂಟಿಯಲ್ಲಿ ಬಂದು ಪುಂಡಾಟ ಮೆರೆದಿದ್ದಾರೆ. ಈ ಘಟನೆ ನಡೆದಿದ್ದು ಮತ್ತೆಲ್ಲೂ, ಬದಲಿಗೆ ಬೆಂಗಳೂರಿನ ಸಾರಕ್ಕಿ ಎಂಬಲ್ಲಿ.

ಮೂವರು ಯುವಕರು ಒಂದೇ ಸ್ಕೂಟಿಯಲ್ಲಿ ಸವಾರಿ ಮಾಡುತ್ತಿದ್ದರು. ಒಬ್ಬರ ತಲೆ ಮೇಲೂ ಹೆಲ್ಮೆಟ್​ ಕೂಡ ಇರಲಿಲ್ಲ. ಇಷ್ಟು ಮಾತ್ರ ಅಲ್ಲ, ಪಕ್ಕದಲ್ಲೇ ಚಲಿಸುತ್ತಿದ್ದ ಕಾರಿನ ಸೈಡ್‌ ವಿಂಡೋಗೆ ಪಂಚ್‌ ಕೊಟ್ಟು ಮುರಿದು ಹಾಕಿ ಕಿಡಿಗೇಡಿತನ ಪ್ರದರ್ಶನ ಮಾಡಿದ್ದಾರೆ.

ಇನ್ನು, ಈ ದ್ವಿಚಕ್ರದ ವಾಹನದ ಮೇಲೆ 19 ಸಾವಿರ ಫೈನ್‌ ಕೂಡ ಇದೆ. ಘಟನೆ ನಡೆದ 2 ಗಂಟೆಗಳಲ್ಲಿ ಗಾಡಿಯನ್ನ ಟ್ರಾಫಿಕ್ ಪೊಲೀಸ್ರು ಸೀಜ್ ಮಾಡಿದ್ದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಕಾರ್​​ ವಿಂಡೋ ಪುಡಿ ಪುಡಿ.. ಬೆಂಗಳೂರಲ್ಲಿ ಹಾಡಹಗಲೇ ಯುವಕರ ಪುಂಡಾಟ!

https://newsfirstlive.com/wp-content/uploads/2023/11/Car_Accident_News.jpg

Load More