newsfirstkannada.com

ನಿನ್ನೆ 35 ಲಕ್ಷ, ಇಂದು 5 ಲಕ್ಷ.. ಕೊಲೆಯಾದ ಮೇಲೆ ನಟ ದರ್ಶನ್ ಗ್ಯಾಂಗ್ ಖರ್ಚು ಮಾಡಿದ್ದ ಹಣ ಎಷ್ಟು?

Share :

Published June 15, 2024 at 1:31pm

Update June 15, 2024 at 1:33pm

  ಪ್ರದೋಶ್‌ಗೆ ಸೇರಿದ ಜಾಗದಲ್ಲಿ 30 ಲಕ್ಷ ರೂಪಾಯಿ ಹಣ ಪತ್ತೆ ಆಗಿತ್ತು

  ಪೊಲೀಸರಿಗೆ ಸರೆಂಡರ್ ಹಾಕಲು ಸ್ಪಾಟ್‌ ಅಲ್ಲೇ ಕೊಟ್ಟಿದ್ದು ಎಷ್ಟು ಲಕ್ಷ?

  ಇಬ್ಬರು ಆರೋಪಿಗಳನ್ನ ‌ಕರೆದುಕೊಂಡು ಮಹಜರು ನಡೆಸಿದ ಪೊಲೀಸರು

ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಎಲ್ಲಾ ಆಯಾಮಗಳಲ್ಲೂ ನಡೆಯುತ್ತಿದೆ. ಕೊಲೆ ಕೇಸ್‌ನ ಆರೋಪಿಗಳನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಇಂಚಿಂಚು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ನಟ ದರ್ಶನ್ ಮತ್ತವರ ಗ್ಯಾಂಗ್ ರೇಣುಕಾಸ್ವಾಮಿ ಕೊಲೆಯಾದ ಬಳಿಕ ಡೆಡ್‌ ಬಾಡಿ ಶಿಫ್ಟ್ ಮಾಡಲು, ಕೊಲೆಯಾಗಿ ಸರೆಂಡರ್ ಹಾಕಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಮಾಹಿತಿ ಹೊರ ಬಿದ್ದಿದೆ.

ರೇಣುಕಾಸ್ವಾಮಿ ಕೊಲೆಯಾದ ಮೇಲೆ ದರ್ಶನ್ ಗ್ಯಾಂಗ್ ಮಾಸ್ಟರ್ ಪ್ಲಾನ್ ಮಾಡಿದೆ. ಈ ಕೇಸ್‌ನಲ್ಲಿ ಮೃತದೇಹ ವಿಲೇವಾರಿ ಮಾಡಿ ಪೊಲೀಸರ ಮುಂದೆ ಸರೆಂಡರ್ ಆಗಲು 30 ಲಕ್ಷ ರೂಪಾಯಿ ಆಫರ್ ಮಾಡಿದ್ದರು ಎನ್ನಲಾಗಿದೆ. ಇದರ ಜೊತೆಗೆ ಕೋರ್ಟ್​ ಖರ್ಚು, ಬೇಲ್​ ಖರ್ಚು ಎಲ್ಲವನ್ನೂ ನೋಡಿಕೊಳ್ಳೋದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?  

ಈ ಕೊಲೆ ಕೇಸ್‌ನ ತನಿಖೆ ನಡೆಸುತ್ತಿರುವ ಪೊಲೀಸರು ಎಲ್ಲಾ ಆರೋಪಿಗಳು ನೀಡಿದ ಹೇಳಿಕೆ ಆಧರಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ನಿನ್ನೆ A3 ಪವನ್ ಮನೆಯಲ್ಲಿ ಪೊಲೀಸರು 5 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿತ್ತು. ಅಲ್ಲದೇ 30 ಲಕ್ಷ ರೂಪಾಯಿ ಹಣವನ್ನು ಪ್ರದೋಶ್‌ಗೆ ಸೇರಿದ ಜಾಗದಲ್ಲಿ ಪತ್ತೆ ಹಚ್ಚಲಾಗಿತ್ತು. ಕೊಲೆ ಕೇಸ್‌ನಲ್ಲಿ ಪ್ರದೋಶ್‌ಗೆ ನೀಡಿದ್ದ ಹಣವಲ್ಲದೆ ಬೇರೆ ಖರ್ಚು ವೆಚ್ಚಕ್ಕೆ ಎಂದು ಪವನ್‌ಗೆ 5 ಲಕ್ಷ ರೂಪಾಯಿ ಹಣ ನೀಡಲಾಗಿತ್ತು. ಹೀಗಾಗಿ ಪವನ್ ಮನೆಯಲ್ಲಿ ಪೊಲೀಸರು ಹಣ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ‘ವಿಜಯಲಕ್ಷ್ಮಿಗೆ ಕೊಟ್ಟಿದ್ದ ಸೇಮ್ ಕಾರು ನಂಗೂ ಬೇಕು’- ಹಠ ಹಿಡಿದಿದ್ದ ಪವಿತ್ರಾಗೆ ದರ್ಶನ್ ಕೊಟ್ಟ ಗಿಫ್ಟ್ ಏನು? 

ಇಂದು ಮತ್ತೆ 5 ಲಕ್ಷ ಹಣ ವಶಕ್ಕೆ!
ನಿನ್ನೆ 35 ಲಕ್ಷ ರೂಪಾಯಿ ಹಣ ಜಪ್ತಿ ಮಾಡಿದ್ದ ಪೊಲೀಸರು ಇಂದೂ ಕೂಡ A3 ಪವನ್ ಮನೆಯಲ್ಲಿ 5 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆದಿದ್ದಾರೆ. ಬನಶಂಕರಿ 6ನೇ ಹಂತದಲ್ಲಿರುವ ಪವನ್ ಮನೆಯಲ್ಲಿ ಪೊಲೀಸರು ಮಹಜರು ಮಾಡಲು ತೆರಳಿದ್ದರು. ಪವನ್ ಮತ್ತು ಕೇಶವಮೂರ್ತಿ ಇಬ್ಬರು ಆರೋಪಿಗಳನ್ನ ‌ಕರೆದುಕೊಂಡು ಮಹಜರು ನಡೆಸಿದ್ದ ವೇಳೆ ಪೊಲೀಸರಿಗೆ 5 ಲಕ್ಷ ರೂಪಾಯಿ ಹಣ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿನ್ನೆ 35 ಲಕ್ಷ, ಇಂದು 5 ಲಕ್ಷ.. ಕೊಲೆಯಾದ ಮೇಲೆ ನಟ ದರ್ಶನ್ ಗ್ಯಾಂಗ್ ಖರ್ಚು ಮಾಡಿದ್ದ ಹಣ ಎಷ್ಟು?

https://newsfirstlive.com/wp-content/uploads/2024/06/Darshan-Case-A3-Pavan-house.jpg

Load More