newsfirstkannada.com

ಅಣ್ತಮ್ಮಾಸ್ ಗಲಾಟೆ.. ಸ್ಥಳಕ್ಕೆ ಬಂದಿದ್ದ ಪೊಲೀಸ್ ಕಾರನ್ನೇ ಎಗರಿಸಿಕೊಂಡು ಹೋದ ಓರ್ವ ಸಹೋದರ..!

Share :

21-11-2023

    ಪಾಠ ಕಲಿಸಲು ಬಂದ ಪೊಲೀಸರಿಗೆ ಟೆನ್ಶನ್ ಕೊಟ್ಟ

    ಇದು ನಮ್ಮ ಕರ್ನಾಟಕದಲ್ಲೇ ನಡೆದ ವಿಶೇಷ ಪ್ರಸಂಗ

    112 ವಾಹನ ಕಳೆದುಕೊಂಡು ಕಂಗಾಲ್ ಆಗಿದ್ದ ಪೊಲೀಸ್

ತುಮಕೂರು: ಸಹೋದರನ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ ಪೊಲೀಸರ ವಾಹನವನ್ನೇ ಓಡಿಸಿಕೊಂಡು ಹೋದ ಪ್ರಸಂಗ ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ. ಮುನಿಯ 112 ವಾಹನವನ್ನು ಕೊಂಡೊಯ್ದ ಆರೋಪಿ

ಆಗಿದ್ದೇನು..?

ನಾರಾನಹಳ್ಳಿಯ ಇಬ್ಬರು ಸಹೋದರ ಮಧ್ಯೆ ತಡರಾತ್ರಿ ಗಲಾಟೆ ಆಗ್ತಿತ್ತು. ಆರೋಪಿಗೆ ಬುದ್ಧಿ ಕಲಿಸಬೇಕು ಅಂತಾ ಸಹೋದರ 112ಗೆ ಕರೆ ಮಾಡಿದ್ದ. ಗ್ರಾಮಕ್ಕೆ 112 ಬಂದಿದ್ದನ್ನು ನೋಡಿ ಸಿಟ್ಟಾಗಿರೋ ಆರೋಪಿ ಮುನಿಯ, ಹಿಂದೆಯಿಂದ ಹೋಗಿ 112 ವಾಹನದ ಮೇಲೆ ಕಲ್ಲು ಎತ್ತಿಹಾಕಿದ.

ವಾಹನದ ಮೇಲೆ ಕಲ್ಲು ಬಿದ್ದಿರೋದು ಗೊತ್ತಾಗುತ್ತಿದ್ದಂತೆಯೇ ಡ್ರೈವರ್, ಇಳಿದು ಹಿಂದೆ ಹೋಗಿ ನೋಡಿದ್ದಾನೆ. ಅಷ್ಟರಲ್ಲಾಗಲೇ ಪೊಲೀಸ್ ಕಾರಿನ ಡ್ರೈವರ್ ಸೀಟ್​ನಲ್ಲಿ ಕೂತು ಡ್ರೈವ್ ಮಾಡಿಕೊಂಡು ಪರಾರಿ ಆಗಿದ್ದಾನೆ. ಬರೋಬ್ಬರಿ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿ ಬಳಿಕ ವಾಹನ ಪತ್ತೆಯಾಗಿದೆ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಹನವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಕಾರನ್ನು ಎಗರಿಸಿ ಪರಾರಿಯಾಗಿದ್ದ ಆರೋಪಿ ಮುನಿಯನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಣ್ತಮ್ಮಾಸ್ ಗಲಾಟೆ.. ಸ್ಥಳಕ್ಕೆ ಬಂದಿದ್ದ ಪೊಲೀಸ್ ಕಾರನ್ನೇ ಎಗರಿಸಿಕೊಂಡು ಹೋದ ಓರ್ವ ಸಹೋದರ..!

https://newsfirstlive.com/wp-content/uploads/2023/11/Police-4-1.jpg

Load More