newsfirstkannada.com

ಕೊಲೆ ಕೇಸ್​ಗೆ ಟ್ವಿಸ್ಟ್​​.. ಬೆಂಗಳೂರಿನಿಂದ ಮೈಸೂರಿಗೆ ಲಿಂಕ್​​.. ದರ್ಶನ್​ ಕೊಠಡಿಯಲ್ಲಿ ಸಿಕ್ಕಿದ್ದೇನು?

Share :

Published June 18, 2024 at 10:38pm

    ದರ್ಶನ್ ಉಳಿದುಕೊಂಡಿದ್ದ ಹೋಟೆಲ್​​​ ಕೊಠಡಿಯ ಶೋಧ

    ಕೊಠಡಿಯಲ್ಲಿ ಇಂಚಿಂಚು ಶೋಧ ಕಾರ್ಯ ನಡೆಸಿದ ತಂಡ!

    ಬೆಡ್​, ಕಬೋರ್ಡ್, ಟಾಯ್ಲೆಟ್​, ಡ್ರೆಸ್ಸಿಂಗ್​ ಟೇಬಲ್​ ಶೋಧ

ಮೈಸೂರು: ಇದೊಂದು ಹೇಯ ಕೃತ್ಯ. ಕುಟುಂಬಕ್ಕೆ ನ್ಯಾಯ ಸಿಗಬೇಕು. ಇಂಥಾ ಹೇಳಿಕೆ ನೀಡಿದ್ದು ಬೆಂಗಳೂರು ಕಮಿಷನರ್‌ ಬಿ. ದಯಾನಂದ್​. ಬೆಂಗಳೂರಿನಲ್ಲಿ ನಡೆದ ಈ ಹತ್ಯೆ ಕೇಸ್​​ ಮೈಸೂರಿಗೂ ನಂಟು ಬೆಸೆದಿದೆ. ಹೀಗಾಗಿ ಇವತ್ತು ದರ್ಶನ್​​ ಇಬ್ಬರು ಆಪ್ತ ಪುಂಡರನ್ನ ಕರೆತಂದು ಗಂಟೆಗಟ್ಟಲೆ ತಲಾಶ್​​​ ನಡೆದಿದೆ. ಅಲ್ಲಿ ಸಿಕ್ಕ ಕೆಲ ಸಿಸಿಟಿವಿ ದೃಶ್ಯಗಳನ್ನ ವಶಕ್ಕೆ ಪಡೆಯಲಾಗಿದೆ. ಇತ್ತ ಪಟ್ಟಣಗೆರೆ ಶೆಡ್​​ನಲ್ಲೂ ಮೆಗ್ಗಾರ್ ಬಳಸಿ ವಿಕೃತಿ ಮೆರೆದಿದ್ದ ಪರಮಪಾಪಿಯನ್ನ ಕರೆತಂದು ಮಾಹಿತಿ ಹೆಕ್ಕಲಾಗಿದೆ.

ಪಟ್ಟಣಗೆರೆ ಶೆಡ್​​ನಲ್ಲಿ ರೇಣುಕಾಸ್ವಾಮಿ ಹೆಣ ಹಾಕಿದ್ದ ದರ್ಶನ್​ ಮತ್ತು ಗ್ಯಾಂಗ್​​​​, ಮೈಸೂರಿನ ಹೋಟೆಲ್​ನಲ್ಲಿ ನಿಶ್ಚಿಂತೆಯಿಂದ ನಿದ್ದೆ ಮಾಡಿ ಎದ್ದು ಹೋಗಿದ್ದ. ಅದೆನೋ ಡೆವಿಲ್​​ ಅಂತ ಸಿನಿಮಾಕ್ಕೆ ಶೂಟಿಂಗ್​ನಲ್ಲಿ ಪಶ್ಚಾತ್ತಾಪವೇ ಇಲ್ಲದೆ ಬಣ್ಣ ಬಳದ್ಕೊಂಡು ಪೋಸ್​​ ಕೊಟ್ಟಿದ್ದ. ಕ್ಯಾಮೆರಾದಲ್ಲಿ ಒಂದ್​ ಮುಖ, ಅಂತರಂಗದ ಇನ್ನೊಂದು ಮುಖ, ಅಲ್ಲಿದ್ದವರಿಗೆ ಗೊತ್ತಾಗಲೇ ಇಲ್ಲ. ಆದ್ರೆ, ಕಾಲಾಯ ತಸ್ಮೈ ನಮಃ ಅನ್ನು ಹಾಗೇ ಸೂಪರ್​​ ಕಾಪ್​ಗಳ ಬಲಿಷ್ಠ ಬಾಹುಗಳ ಬಂಧಿ ಆಗಿ ಹೋಗಿದ್ದ.

ಮೈಸೂರಿನ ಱಡಿಸನ್ ಬ್ಲೂ ಹೋಟೆಲ್​ನಲ್ಲಿ ಮಹಜರು!

ಮಾಡಿದ್ದುಣ್ಣೋ ಮಾರಾಯ ಅಂತಾರಲ್ಲ. ಆ ದಾಸನ ಹಿಂದೆ ಪುಂಗಿ ಊದ್ತಾ ಇವನ ಬೆನ್ನು ಬಿದ್ದ ಗಿರಾಕಿಗಳು ಅಂಥವೇ, ಹಂಗಾಗೇ ಪಾಪ ಸುತ್ಕೊಂಡ ಬಳಿಕ ಬೇತಾಳ ಬೆನ್ನೇರಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್​​ ಸಂಬಂಧ ಬೆಂಗಳೂರಿನಿಂದ ಪರೋಡಿಗಳನ್ನ ಕರೆತಂದು ದರ್ಶನ್​​​ ತಂಗಿದ್ದ ಕಡೆ ಪರಿಶೀಲನೆ ನಡೆಸಲಾಗಿದೆ.

ಪುಡಾಂಗ ಗ್ಯಾಂಗ್​ ಪರೋಡಿಗಳು!

ಹತ್ಯೆ ಕೇಸ್​​​ನಲ್ಲಿ A-11 ಆರೋಪಿ ನಾಗರಾಜ ಅಲಿಯಾಸ್ ನಾಗ. ದರ್ಶನ್​ ಅನಧಿಕೃತ ಮ್ಯಾನೇಜರ್ ಆಗಿದ್ದ. ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಲಕ್ಷ್ಮಣ್​. ದರ್ಶನ್ ಕಾರ್ ಡ್ರೈವರ್ ಆಗಿರುವ ಲಕ್ಷ್ಮಣ್, ಈ ಕೇಸ್​ನಲ್ಲಿ A-12 ಆಗಿ ಲಾಕ್​​ ಆಗಿದ್ದಾನೆ. ಇವರಿಬ್ಬರೂ ರೇಣುಕಾಸ್ವಾಮಿ‌ ಹತ್ಯೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಅಂತ ಹೇಳಲಾಗ್ತಿದೆ.

ಇದು ನಿಮಗೆ ಗೊತ್ತಿದ್ದ ವಿಷಯನೇ. ಕೊಲೆಗೈದ ನಂತ್ರ ಕೆಲ ಆರೋಪಿಗಳು ಮೈಸೂರಿಗೆ ಎಂಟ್ರಿ ಆಗಿದ್ರು. ಮೈಸೂರಿನಲ್ಲಿ ಡೆವಿಲ್ ಚಿತ್ರದ ಶೂಟಿಂಗ್​ನಲ್ಲಿದ್ದ ದರ್ಶನ್, ಜೂನ್​​ 9ರಂದು ಱಡಿಸನ್ ಬ್ಲೂ ಹೋಟೆಲ್​ನಲ್ಲಿ ತಂಗಿದ್ದ. ಮರುದಿನ ಬೆಳಗ್ಗೆ ಕುವೆಂಪುನಗರದ ಗೋಲ್ಡ್ ಜಿಮ್​ನಲ್ಲಿ ವರ್ಕ್​ಔಟ್​ ಮುಗಿಸಿ ಹೋಟೆಲ್​ಗೆ ವಾಪಸ್​​ ಆಗುವಾಗ ಪೊಲೀಸರು ಅರೆಸ್ಟ್​​ ಮಾಡಿದ್ರು. ಅದೇ ಕಾರಣಕ್ಕೆ ಪೊಲೀಸರು ಇವತ್ತು ಈ ಇಬ್ಬರನ್ನ ಎಳೆದು ತಂದು ಮಹಜರು ಮಾಡಿದ್ದಾರೆ.

ಹೇಗಿತ್ತು ಮೈಸೂರಿನಲ್ಲಿನ ಮಹಜರು?

ದರ್ಶನ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ತೀವ್ರ ಶೋಧ ನಡೆದಿದೆ. ಕೊಠಡಿಯಲ್ಲಿ ಇಂಚಿಂಚು ಶೋಧ ಕಾರ್ಯ ನಡೆಸಲಾಗಿದೆ. ದರ್ಶನ್ ಮಲಗಿದ್ದ ಬೆಡ್​, ಕಾಬೋರ್ಡ್, ಟಾಯ್ಲೆಟ್​, ಡ್ರೆಸ್ಸಿಂಗ್​ ಟೇಬಲ್​ಗಳಲ್ಲಿ ಎವಿಡೆನ್ಸ್​​ ಕಲೆ ಹಾಕಲಾಗಿದೆ. ಹಣದ ವ್ಯವಹಾರ ನಡೆಸಿದ್ದರೆಂಬ ಸಂಶಯದ ಹಿನ್ನಲೆಯಲ್ಲಿ ಲಕ್ಷ್ಮಣ್ ಹಾಗೂ ನಾಗನಿಂದ ಮಾಹಿತಿ ಕಲೆ ಹಾಕಲಾಗಿದೆ. ಕೃತ್ಯಕ್ಕೆ ಬಳಸಿದ ವಸ್ತುಗಳು, ದರ್ಶನ್ ಬಳಸಿದ್ದ ಉಡುಪುಗಳ ಶೋಧಿಸಲಾಗಿದೆ. ಹೋಟೆಲ್​ನ ಸಿಸಿಟಿವಿಯಲ್ಲಿ ಸೆರೆಯಾದ ದರ್ಶನ್ ಓಡಾಡಿರುವ ದೃಶ್ಯಗಳನ್ನ ಸಂಗ್ರಹಿಸಲಾಗಿದೆ. ಸ್ಥಳ ಮಹಜರು ಮಾಡಿ ಹೋಟೆಲ್ ಸಿಬ್ಬಂದಿಯಿಂದ ಸಾಕ್ಷಿಗೆ ಅಂತ ಸಹಿ ಪಡೆಯಲಾಗಿದೆ. ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿ ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.

ಇತ್ತ, ಪಟ್ಟಣಗೆರೆ ಶೆಡ್​​ನಲ್ಲೂ ಮಹಜರು ನಡೆದಿದೆ. ಪ್ರಮುಖ ಅರೋಪಿ ಧನರಾಜ್ ಹಾಗೂ ಮತ್ತೊಬ್ಬ ಆರೋಪಿಯನ್ನ ಕರೆದೊಯ್ದು ಪರಿಶೀಲನೆ ನಡೀತಿದೆ. ಮೆಗ್ಗಾರ್ ಬಳಸಿ ಇದೇ ಶೆಡ್​​ನಲ್ಲಿ ವಿಕೃತಿ ಮೆರೆಯಲಾಗಿತ್ತು. ಹೀಗಾಗಿ ಧನರಾಜ್​​​ನ ಕೃತ್ಯಗಳ ಮಾಹಿತಿ ಪಡೆಯಲು ಪಟ್ಟಣಗೆರೆ ಶೆಡ್​​ಗೆ ಕರೆತಂದು ಮಹಜರು ನಡೆಸಲಾಗಿದೆ.

ಇದನ್ನೂ ಓದಿ: ಕೊಲೆಯಾದ ಪಟ್ಟಣಗೆರೆ ಶೆಡ್​ನಲ್ಲಿ ಹಲವರ ಮೇಲೆ ಹಲ್ಲೆ? ದರ್ಶನ್​ ಗ್ಯಾಂಗ್​ ಮೇಲೆ ಹೊಸ ಸಂಶಯ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್​ಗೆ ಟ್ವಿಸ್ಟ್​​.. ಬೆಂಗಳೂರಿನಿಂದ ಮೈಸೂರಿಗೆ ಲಿಂಕ್​​.. ದರ್ಶನ್​ ಕೊಠಡಿಯಲ್ಲಿ ಸಿಕ್ಕಿದ್ದೇನು?

https://newsfirstlive.com/wp-content/uploads/2024/06/darshan28.jpg

Load More