newsfirstkannada.com

ಮಾದಕವಸ್ತು ನಿಯಂತ್ರಣಕ್ಕೆ ಪೊಲೀಸರ ಹೊಸ ಪ್ಲಾನ್​; ಕಾಲೇಜು ವಿದ್ಯಾರ್ಥಿಗಳನ್ನ ಮಾರ್ಷಲ್​ಗಳನ್ನಾಗಿ‌ ನೇಮಕ

Share :

31-08-2023

    ಕಾಲೇಜಿಗೆ ಹೋಗಿ ವಿದ್ಯಾರ್ಥಿ ಮಾರ್ಷಲ್​ಗಳಿಗೆ ಮಾಹಿತಿ

    ಆಸಕ್ತ ವಿದ್ಯಾರ್ಥಿ ಎಸಿಪಿಯ ಸಂಪರ್ಕ ಮಾಡಲು ಸೂಚನೆ

    ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿರುವ ಸ್ಥಳೀಯ ಎಸಿಪಿ

ಕಾಲೇಜು ವಿದ್ಯಾರ್ಥಿಗಳನ್ನು ಮಾದಕವಸ್ತು ನಿಯಂತ್ರಣ ‌ಪೊಲೀಸ್ ಮಾರ್ಷಲ್​ ಗಳನ್ನಾಗಿ‌ ನೇಮಿಸಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿರುವ ಮಾದಕವಸ್ತು ನಿಯಂತ್ರಣಕ್ಕೆ ಪೊಲೀಸರು ಹೊಸ ಪ್ಲಾನ್ ರೂಪಿಸಿದ್ದು, ಯಲಹಂಕ ಠಾಣೆ ವ್ಯಾಪ್ತಿಯಲ್ಲಿ 700 ಜನ ಮಾರ್ಷಲ್​ಗಳನ್ನು ಪೊಲೀಸರು ನೇಮಿಸಿದ್ದಾರೆ.

ಹಾಗಾದ್ರೆ, ಯಾರನ್ನ ಮಾರ್ಷಲ್​ಗಳಾಗಿ ನೇಮಕ ಮಾಡ್ತಾರೆ ಗೊತ್ತಾ ? ಇದಕ್ಕೆ ಉತ್ತರ, ಪೊಲೀಸ್ ಇಲಾಖೆಗೆ ಸಹಾಯ ಮಾಡಲು ಮತ್ತು ಮಾಹಿತಿ ನೀಡಲು ಯಾರು ಬೇಕಾದರೂ ಮಾರ್ಷಲ್​ ಆಗಬಹುದು.

ಡ್ರಗ್ಸ್ ಪೆಡ್ಲರ್ಸ್/ಸೇವನೆ ಮಾಡುವವರ ಮಾಹಿತಿ ಸಿಕ್ಕರೆ ಮಾಹಿತಿ

ಪ್ರತಿ ಕಾಲೇಜಿಗೆ ಭೇಟಿ ನೀಡಿ ಕೆಲ ಆಸಕ್ತ ವಿದ್ಯಾರ್ಥಿಗಳನ್ನು ಪೊಲೀಸರು ಮಾರ್ಷೆಲ್​ಗಳಾಗಿ ನೇಮಕ ಮಾಡ್ತಾರೆ. ಮಾಹಿತಿ ಪಡೆದ ಆಸಕ್ತಿ ವಿದ್ಯಾರ್ಥಿಗಳಿಗೆ ಸ್ಥಳೀಯ ಎಸಿಪಿಯ ಸಂಪರ್ಕ ಮಾಡಲು ಸೂಚನೆ ನೀಡಲಾಗುತ್ತೆ. ಮಾರ್ಷಲ್​ಗಳಾಗಲು ಇಚ್ಛೆ ಇರುವ ವಿದ್ಯಾರ್ಥಿಗಳಿಗೆ ಸ್ಥಳೀಯ ಎಸಿಪಿ ಹಾಗೂ ಇನ್ಸ್​​ಪೆಕ್ಟರ್ ತರಬೇತಿ ನೀಡಲಿದ್ದಾರೆ. ನಂತರ ಮಾದಕ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ‌ ನೀಡುತ್ತಾರೆ. ಡ್ರಗ್ಸ್​​ನಲ್ಲಿ ಎಷ್ಟು ವಿಧ ಇವೆ ಮತ್ತು ಅವುಗಳು ಯಾವುವು? ಎಂಬ ಬಗ್ಗೆಯೂ ತಿಳಿಸಲಾಗುತ್ತದೆ. ತಮ್ಮ ಕಾಲೇಜು ಆಥವಾ ತಮ್ಮ ಸುತ್ತ ಮುತ್ತಲಿನ ಜನರಿಗೆ‌ ಮಾರ್ಷೆಲ್​ಗಳಿಂದ ಡ್ರಗ್ಸ್ ಬಗ್ಗೆ ತಿಳುವಳಿಕೆ ನೀಡಲು ‌ಸೂಚನೆ ನೀಡಲಾಗುತ್ತದೆ. ಇನ್ನು ಡ್ರಗ್ಸ್ ಪೆಡ್ಲರ್ಸ್ ಅಥವಾ ಸೇವನೆ ಮಾಡುವವರ ಮಾಹಿತಿ ಸಿಕ್ಕರೆ ಅದನ್ನು ಮಾರ್ಷೆಲ್​ಗಳು ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಜೊತೆಗೆ ಡ್ರಗ್ಸ್ ಸೇವನೆ ಮತ್ತು ಪೆಡ್ಲಿಂಗ್ ಮಾಡಿದರೆ ಕಾನೂನಿನಲ್ಲಿ ‌ಇರುವ ಶಿಕ್ಷೆ ಏನು ಹಾಗೂ ಯಾವೇಲ್ಲ ಕಾಯಿದೆ ಅಡಿ ಪ್ರಕರಣ ದಾಖಲು ಮಾಡಲಾಗುತ್ತದೆ ಎಂಬ ಬಗ್ಗೆ ಮಾರ್ಷೆಲ್​ಗಳಿಗೆ ತಿಳಿಸಲಾಗುತ್ತದೆ.

ಹಾಗಾದ್ರೆ, ಮಾರ್ಷಲ್​ಗಳಾಗಿ‌ ನೇಮಕಗೊಂಡ ನಂತರ ಇರುವ ನಿರ್ಬಂಧಗಳೇನು ಅಂತ ನೋಡೋದಾದ್ರೆ,

ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು

ಮಾರ್ಷಲ್​ಗಳಾಗಿ ನೇಮಕಗೊಂಡ ‌ನಂತರ‌ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು. ಮಾರ್ಷಲ್​ಗಳಿಗೆ ತರಬೇತಿಯಲ್ಲಿ ನೀಡಿದ ಮಾಹಿತಿಯನ್ನು ದುರುಪಯೋಗ ಪಡೆಸಿಕೊಳ್ಳಬಾರದು. ಮಾಹಿತಿ ದುರುಪಯೋಗ ಪಡೆಸಿಕೊಂಡಲ್ಲಿ ಸೂಕ್ತ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಮಾರ್ಷಲ್ ಆಗಿ ನೇಮಕಗೊಂಡ ‌ನಂತರ ತಮ್ಮ ಏರಿಯಾದಲ್ಲಿ‌ ಇರುವ ಶಾಲಾ ಕಾಲೇಜು ಜಾಗೃತಿ‌ ನೀಡುವುದು ಕಡ್ಡಾಯ.

ಸದ್ಯ ಯಲಹಂಕ ಠಾಣೆ ವ್ಯಾಪ್ತಿಯಲ್ಲಿ ಮಾತ್ರ ಮಾರ್ಷಲ್​ಗಳ ನೇಮಕವಾಗಿದೆ. ವಿವಿಧ ಕಾಲೇಜು ವಿದ್ಯಾರ್ಥಿಗಳು ಮತ್ತು ಕೆಲ ಸಾರ್ವಜನಿಕರು ಸೇರಿ 700 ಜನ ನೇಮಕ ಮಾಡಲಾಗಿದೆ. ಇದೇ ರೀತಿ ನಗರದ ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಮಾರ್ಷಲ್​ ನೇಮಕ ಮಾಡುವ ಚಿಂತನೆಯಿದ್ದು, ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿದೆ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾದಕವಸ್ತು ನಿಯಂತ್ರಣಕ್ಕೆ ಪೊಲೀಸರ ಹೊಸ ಪ್ಲಾನ್​; ಕಾಲೇಜು ವಿದ್ಯಾರ್ಥಿಗಳನ್ನ ಮಾರ್ಷಲ್​ಗಳನ್ನಾಗಿ‌ ನೇಮಕ

https://newsfirstlive.com/wp-content/uploads/2023/07/Police-2.jpg

Load More