ಪರಭಾಷೆಯಲ್ಲಿ ಕನ್ನಡ ನಟಿಯರದ್ದೇ ಕಾರುಬಾರು, ದರ್ಬಾರು
ಟಾಲಿವುಡ್ನಲ್ಲಿ ಶ್ರೀಲೀಲಾ ಮತ್ತು ಪೂಜಾ ಹೆಗ್ಡೆಗೆ ಪೈಪೋಟಿ
ಮಹೇಶ್ ಬಾಬು ಚಿತ್ರದಲ್ಲಿ ಇಬ್ಬರು ಹೀರೋಯಿನ್ ಯಾಕೆ..?
ಕನ್ನಡ ನಟಿಯರು ಬೆಳೆಯುತ್ತಿದ್ದಾರೆ ಅಂಥ ಖುಷಿ ಪಡಬೇಕಾ ಅಥವಾ ಒಬ್ಬ ಕನ್ನಡ ನಟಿಗೆ ಮತ್ತೊಬ್ಬ ಕನ್ನಡ ನಟಿನೇ ಶತ್ರು ಆಗ್ತಿದ್ದಾಳೆ ಅಂತ ದೂಷಿಸುವುದು ಗೊತ್ತಾಗ್ತಿಲ್ಲ. ಆದರೆ ಟಾಲಿವುಡ್ನಲ್ಲಂತೂ ಸದ್ಯದ ಪರಿಸ್ಥಿತಿ ಹಂಗೆ ಆಗಿದೆ. ಸ್ಯಾಂಡಲ್ವುಡ್ ನಟ-ನಟಿಯರು ಪರಭಾಷೆಗಳಲ್ಲಿ ಸಕ್ಸಸ್ ಆಗಿರೋದು ಹೊಸತೇನಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ಏನೂ ಇಲ್ಲ ಅನಿಸಿಕೊಂಡವರೂ ಬೇರೆ ಇಂಡಸ್ಟ್ರಿಯಲ್ಲಿ ಸೂಪರ್ಸ್ಟಾರ್ ಆಗಿ ಮೆರೆದ ಉದಾಹರಣೆಗಳಿವೆ. ಈಗ ಪರಭಾಷೆಯಲ್ಲಿ ಕನ್ನಡ ನಟಿಯರದ್ದೇ ಕಾರುಬಾರು, ದರ್ಬಾರು..
ರಶ್ಮಿಕಾ ಮಂದಣ್ಣ, ನಭಾ ನಟೇಶ್, ಕೃತಿ ಶೆಟ್ಟಿ, ಪೂಜಾ ಹೆಗ್ಡೆ, ಈಗ ಲೇಟೆಸ್ಟ್ ಆಗಿ ಶ್ರೀಲೀಲಾ.. ಇವರೆಲ್ಲರೂ ಮೂಲತಃ ಕರ್ನಾಟಕದವರೇ. ಆದ್ರೆ, ಇವರ ಅದೃಷ್ಟ ಸ್ಯಾಂಡಲ್ವುಡ್ಗಿಂತ ಬೇರೆ ವುಡ್ಗಳಿಲ್ಲಿಯೇ ಇತ್ತು ಅನ್ನೋದನ್ನ ಕಂಡುಕೊಂಡು ಸಕ್ಸಸ್ ಸವಾರಿ ಮಾಡ್ತಿದ್ದಾರೆ. ರಶ್ಮಿಕಾ ಸೌತ್ ಸೆನ್ಸೇಷನ್ ಮಾಡಿ ಈಗ ಬಾಲಿವುಡ್ ರೂಲ್ ಮಾಡ್ತಿದ್ದಾರೆ. ಪೂಜಾ ಹೆಗ್ಡೆ ಸೌತು ನಾರ್ತು ಎರಡರಲ್ಲೂ ಬ್ಯಾಲೆನ್ಸ್ ಮಾಡ್ತಾ ಲಕ್ಕಿ ಚಾರ್ಮ್ ಎನಿಸಿಕೊಂಡಿದ್ದಾರೆ. ರಶ್ಮಿಕಾ, ಪೂಜಾ ಹೆಗ್ಡೆ ಬಾಲಿವುಡ್ ಬೆಲೆ ಹೊಡಿತಿದ್ದಂತೆ ನಟಿ ಶ್ರೀಲೀಲಾ ಈಗ ತೆಲುಗಿನ ಟಾಪ್ ನಟಿಯ ಪಟ್ಟಕ್ಕೇರಿದ್ದಾರೆ.
ಶ್ರೀಲೀಲಾ ಈಗ ತೆಲುಗಿನ ಬ್ಯುಸಿಯೆಸ್ಟ್ ನಟಿ. ಎಷ್ಟು ಬ್ಯುಸಿ ಅಂದ್ರೆ ಒಂದೇ ಸಲ ಏಂಟು ಚಿತ್ರಗಳಲ್ಲಿ ನಟಿಸ್ತಿದ್ದಾರೆ. ಒಂದು ದಿನಕ್ಕೆ ಮೂರು ಮೂರು ದಿನ ಶಿಫ್ಟ್ನಲ್ಲಿ ಕೆಲಸ ಮಾಡ್ತಿದ್ದಾರೆ. ಸೂಪರ್ಸ್ಟಾರ್ಗಳ ಚಿತ್ರ, ಹೊಸಬರ ಚಿತ್ರ ಎನ್ನದೇ ಇರೋ ಬರೋ ಪ್ರಾಜೆಕ್ಟ್ಗಳೆಲ್ಲವೂ ಶ್ರೀಲೀಲಾ ಕೈಯಲ್ಲೇ ಇವೆ. ಇದನ್ನ ಕಂಡ ಟಾಲಿವುಡ್ ಪೋರಿಯರು ಧಗಧಗ ಅಂತ ಉರಿತಿರೋದು ಸುಳ್ಳಲ್ಲ. ಅರೇ ಟಾಲಿವುಡ್ ಪೋರಿಯರು ಉರಿದರೆ ಪರವಾಗಿಲ್ಲ. ಆದ್ರೆ ಕನ್ನಡತಿಯ ಯಶಸ್ಸು ನೋಡಿ ಕನ್ನಡದ ನಟಿಯೇ ಬೇಜಾರು ಮಾಡಿಕೊಳ್ಳೋ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಟಾಲಿವುಡ್ನಲ್ಲಿ ಶ್ರೀಲೀಲಾ ಮತ್ತು ಪೂಜಾ ಹೆಗ್ಡೆಗೆ ಪೈಪೋಟಿ ಹೆಚ್ಚಿದೆಯಂತೆ. ಒಬ್ಬರ ಅವಕಾಶಗಳನ್ನ ಮತ್ತೊಬ್ಬರು ಕಸಿದುಕೊಳ್ಳುತ್ತಿದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಿದೆ. ಇದು ಮೇಲ್ನೋಟಕ್ಕೆ ಹೆಲ್ತಿ ಪೈಟ್ ಎನಿಸಿದರೂ ಒಳಗೊಳಗೆ ಒಬ್ಬರ ಮೇಲೊಬ್ಬರ ಉರಿದುಬೀಳ್ತಿದ್ದಾರಂತೆ. ಅಷ್ಟಕ್ಕೂ ಈ ಒಳಜಗಳ ಬಯಲಾಗಿದ್ದು ಮಹೇಶ್ ಬಾಬು ಚಿತ್ರದಿಂದ.
ಗುಂಟೂರು ಖಾರಂ ಚಿತ್ರದಿಂದ ಪೂಜಾ ಹೆಗ್ಡೆ ಔಟ್ ಆಗಿದ್ದಾರೆ. ಮಹೇಶ್ ಬಾಬು ನಟನೆಯ ಈ ಚಿತ್ರದಲ್ಲಿ ಇಬ್ಬರು ಹೀರೋಯಿನ್. ಪೂಜಾ ಹೆಗ್ಡೆ ಮೊದಲ ನಾಯಕಿಯಾದ್ರೆ ಶ್ರೀಲೀಲಾ ಎರಡನೇ ನಾಯಕಿಯಾಗಿದ್ರು. ಆದ್ರೀಗ ಪೂಜಾ ಚಿತ್ರದಿಂದ ಹೊರಬಂದಿದ್ದು, ಆ ಚಾನ್ಸ್ ಶ್ರೀಲೀಲಾಗೆ ಹೋಗೋ ಸಾಧ್ಯತೆ ಇದೆಯಂತೆ. ಡೇಟ್ ಕಾರಣದಿಂದ ಪೂಜಾ ಹೊರಬಂದರು ಅಂತ ಹೇಳಲಾಗ್ತಿದೆಯಾದ್ರೆ ಶ್ರೀಲೀಲಾ ಪಾತ್ರಕ್ಕೆ ಹೆಚ್ಚು ಮನ್ನಣೆ ಕೊಟ್ಟ ಕಾರಣದಿಂದಲೇ ಪೂಜಾ ಈ ನಿರ್ಧಾರ ತೆಗೆದುಕೊಂಡ್ರು ಎಂಬ ಪುಕಾರು ಎದ್ದಿದೆ. ಇದಕ್ಕೂ ಮುಂಚೆ ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲೂ ಹಿಂಗೆ ಆಗಿತ್ತು. ಈ ಚಿತ್ರದಲ್ಲೂ ಪೂಜಾ ಹೆಗ್ಡೆ ನಾಯಕಿಯಾಗಿದ್ದರು. ಶ್ರೀಲೀಲಾ ಎರಡನೇ ನಾಯಕಿಯಾಗಿದ್ರು. ಆಮೇಲೆ ನೋಡಿದ್ರೆ ಪೂಜಾ ಈ ಚಿತ್ರದಿಂದ ಹೊರನಡೆದ್ರು. ಸೆಕೆಂಡ್ ಹೀರೋಯಿನ್ ಆಗಿದ್ದ ಶ್ರೀಲೀಲಾ ಪ್ರಮುಖ ನಾಯಕಿಯಾದ್ರು.
ಈಗ ಮತ್ತೊಮ್ಮೆ ಪೂಜಾ ಮತ್ತು ಶ್ರೀಲೀಲಾ ನಡುವೆ ಫೈಟ್ ಏರ್ಪಟ್ಟಿದೆಯಂತೆ. ಇನ್ನು ಹೆಸರಿಡದ ಚಿತ್ರವೊಂದಕ್ಕೆ ಪೂಜಾ ಮತ್ತು ಶ್ರೀಲೀಲಾ ಹೆಸರು ಚಾಲ್ತಿಯಲ್ಲಿದ್ದು, ಇಬ್ಬರಲ್ಲಿ ಯಾರು ಫೈನಲ್ ಆಗ್ತಾರೆ ಅನ್ನೋದು ಕುತುಹಲ ಮೂಡಿಸಿದೆ. ಒಟ್ಟಿನಲ್ಲಿ ಇಬ್ಬರು ಕನ್ನಡಿಯರು ಟಾಲಿವುಡ್ನಲ್ಲಿ ಈ ಮಟ್ಟಿಗೆ ಪೈಪೋಟಿ ಎದುಸ್ತಿರೋದು ಒಂಥರಾ ಖುಷಿನೂ ಹೌದು ಬೇಜಾರು ಹೌದು.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ