ಚಂದ್ರನಿಗೆ ಮತ್ತಷ್ಟು ಹತ್ತಿರವಾದ ವಿಕ್ರಮ್ ಲ್ಯಾಂಡರ್
ವಿಘ್ನ ನಿವಾರಕನ ಮುಂದೆ ಭವ್ಯ ಭಾರತದ ಬಾವುಟ
ಕರ್ನಾಟಕದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ
ಮೈಸೂರು: ಭಾರತದ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಮಿಷನ್ ಚಂದ್ರಯಾನ-3 ಯಶಸ್ವಿ ಆಗಲೆಂದು ದೇಶದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ. ಆಗಸ್ಟ್ 23 ರಂದು ಸಂಜೆ 6.04ರ ಸುಮಾರಿಗೆ ಚಂದ್ರನ ಮೇಲೆ ಲ್ಯಾಂಡರ್ ಮಾಡ್ಯೂಲ್-ವಿಕ್ರಮ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸುವ ನಿರೀಕ್ಷೆಯಿದೆ ಎಂದು ಇಸ್ರೋ ತಿಳಿಸಿದೆ.
ಇದು ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯಲಿದೆ. ಹೀಗಾಗಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಗುರಿ ತಲುಪಲೆಂದು ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸರ್ವಸಿದ್ಧ ಯಾಗ ನಡೆಸಲಾಗಿದೆ. ದೇಗುಲದ ಅರ್ಚಕರ ನೇತೃತ್ವದಲ್ಲಿ ವಿಶೇಷವಾದ ಸರ್ವಸಿದ್ದಿ ಯಾಗವನ್ನು ಶಾಸ್ತ್ರೋಕ್ತವಾಗಿ ವಿಶೇಷ ಹೋಮ ಹವನದ ಮೂಲಕ ಪೂಜೆ ಮಾಡಲಾಗಿದೆ.
ಇತ್ತ ಕೋಲಾರದಲ್ಲಿಯೂ ಕೂಡ ಕೋಲಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಸಂಸದ ಮುನಿಸ್ವಾಮಿ ಮತ್ತು ಕಾರ್ಯಕರ್ತರಿಂದ ವಿಶೇಷ ಪ್ರಾರ್ಥನೆ ಮಾಡಲಾಯಿತ್ತು. ಜುಲೈ 14ರಂದು ಕಕ್ಷೆಗೆ ಹಾರಿದ ಭಾರತದ ಕ್ಷಿಪಣಿಯು ನಾಳೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮೊದಲ ಬಾರಿಗೆ ಇಳಿಯಲಿದೆ. ಹೀಗಾಗಿ ಉಪಗ್ರಹದ ಯಶಸ್ವಿಗಾಗಿ ತಲುಪಲಿ ಎಂದು ಕೋಲಾರಮ್ಮನಿಗೆ ವಿಶೇಷವಾದ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಇನ್ನು, ಮಂಡ್ಯದ ವಿದ್ಯಾ ಗಣಪತಿಗೆ ಭಜರಂಗ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಪೂಜೆ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯಾವುದೇ ತೊಂದರೆ ಇಲ್ಲದೆ ವಿಕ್ರಮ್ ಲ್ಯಾಂಡ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿ. ದೇಶದ ಸಾಧನೆ ಮತ್ತಷ್ಟು ಮುಗಿಲೆತ್ತರಕ್ಕೆ ಏರಲಿ. ಚಂದ್ರಯಾನಕ್ಕೆ ಶುಭವಾಗಲಿ ಎಂದು ಹಾರೈಸಿದ ಭಜರಂಗಸೇನೆ ಕಾರ್ಯಕರ್ತರು ಸೇರಿಕೊಂಡು ವಿಶೇಷವಾಗಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ