newsfirstkannada.com

‘9.5 ಕೋಟಿ ಮೊತ್ತದ 42 ಕಾಮಗಾರಿ ನಾಪತ್ತೆ’; ED, ಲೋಕಾಯುಕ್ತ ಅಧಿಕಾರಿಗಳ ಕದ ತಟ್ಟಿದ ಮುನಿರತ್ನ

Share :

17-09-2023

  ಬಿಲ್ ಇದೆ, ಮಾಡಿರುವ ಕೆಲಸ ತೋರಿಸುವವರೇ ಇಲ್ಲ ಎಂದು ದೂರು!

  ನಕಲಿ ಬಿಲ್ ವಿರುದ್ಧ ಲೋಕಾಯುಕ್ತ, ಇಡಿ ಬಾಗಿಲು ಬಡಿದ ಮಾಜಿ ಸಚಿವ

  ಸಂಸದ ಡಿಕೆ ಸುರೇಶ್ ವಿರುದ್ಧವೂ ಗಂಭೀರ ಆರೋಪ

ಬೆಂಗಳೂರು: ಕಾಮಗಾರಿಯೇ ನಡೆಸದೆ ಹಣ ಬಿಡುಗಡೆ ಮಾಡಿಕೊಂಡಿರೋದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಮುನಿರತ್ನ ದೂರು ದಾಖಲಿಸಿದ್ದಾರೆ. ನಕಲಿ ಬಿಲ್​​ಗಳನ್ನ ಸೃಷ್ಠಿಸಿ 9 ಕೋಟಿ ರೂಪಾಯಿ ದೋಚುವ ಸಂಚು ನಡೆದಿರುವ ಬಗ್ಗೆ ಇಡಿ, ಲೋಕಾಯುಕ್ತ, ಬಿಬಿಎಂಪಿಯ ಕದ ತಟ್ಟಿದ್ದಾರೆ ಮಾಜಿ ಸಚಿವರು.

ನಕಲಿ ಬಿಲ್​ಗಳನ್ನ ಸೃಷ್ಠಿಸಿ ಹಣ ಬಿಡುಗಡೆ ಮಾಡಿಕೊಳ್ಳಲು ಮುಂದಾಗ್ತಿರೋ ಬಗ್ಗೆ ಮಾಜಿ ಸಚಿವ ಮುನಿರತ್ನ, ಬಿಬಿಎಂಪಿ ಮುಖ್ಯ ಆಯುಕ್ತ, ಇಡಿ, ಲೋಕಾಯುಕ್ತಕ್ಕೆ ದೂರು ಸಲ್ಲಿಕೆ ಮಾಡಿದ್ದಾರೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 42ರಲ್ಲಿನ ಲಕ್ಷ್ಮೀದೇವಿ ನಗರ, ಹಾವಾಡಿಗರ ಕಾಲೋನಿ, ಕಾವೇರಿನಗರ, ನಂದಿನಿ ಲೇಔಟ್ ಮುಂತಾದ ಪ್ರದೇಶಗಳ ರಸ್ತೆ ಅಭಿವೃದ್ದಿ, ಫುಟ್ ಪಾತ್ ಅಭಿವೃದ್ಧಿ, ಚರಂಡಿ ನಿರ್ಮಾಣ ಕಾಮಗಾರಿ ನಡೆಸದೇ ಬಿಲ್ ಸಲ್ಲಿಕೆ ಮಾಡಲಾಗಿದೆ ಎಂದು ದೂರಿದ್ದಾರೆ.

ಕಾಮಗಾರಿ ನಡೆಸದೆಯೇ ಬಿಲ್ ಸಲ್ಲಿಕೆ ಪತ್ತೆಯಾಗಿದೆ. ಸರಿ ಸುಮಾರು 9.5 ಕೋಟಿ ಮೊತ್ತದ 42 ಕಾಮಗಾರಿ ನಾಪತ್ತೆ ಆಗಿದ್ದು, ಈ ಎಲ್ಲಾ ಕಾಮಗಾರಿಗಳ ಸ್ಥಳ ಪರಿಶೀಲನೆ ನಂತರವೇ ಬಿಲ್ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಸಲ್ಲಿಸಿದ ದೂರಿನಲ್ಲಿ ಮುನಿರತ್ನ ಉಲ್ಲೇಖಿಸಿದ್ದಾರೆ. ಇದಕ್ಕೆಲ್ಲಾ ಬೆಂಗಳೂರು ಗ್ರಾಮಾಂತರ ಸಂಸದರೇ ಕಾರಣ ಅಂತಾ ಸಂಸದ ಡಿ.ಕೆ ಸುರೇಶ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮಾಜಿ ಕಾರ್ಪೊರೇಟರ್​​ ವೇಲು ನಾಯ್ಕ್, ರಾಜಕೀಯ ದುರುದ್ದೇಶದಿಂದ ಈ ರೀತಿಯ ದೂರುಗಳು ಕೊಟ್ಟಿರಬಹುದು. ಹಾಸ್ಯಾಸ್ಪದ ಎಂದರೆ ಮೂರು ವರ್ಷಗಳಿಂದ ಮುನಿರತ್ನ ಏನು ಮಾಡುತ್ತಿದ್ದರು? ಅವರದ್ದೇ ಸರ್ಕಾರ ಇದ್ದಾಗ ಕ್ರಮ ಕೈಗೊಂಡಿಲ್ಲವೇಕೆ ಅಂತಾ ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಬಿಲ್​ ಇದೆ ಕಾಮಗಾರಿ ಆಗಿಲ್ಲ ಅನ್ನೋದು ಮಾಜಿ ಸಚಿವರ ದೂರು. ತನಿಖೆಯಿಂದ ಸತ್ಯಾಂಶ ಹೊರಬರುತ್ತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘9.5 ಕೋಟಿ ಮೊತ್ತದ 42 ಕಾಮಗಾರಿ ನಾಪತ್ತೆ’; ED, ಲೋಕಾಯುಕ್ತ ಅಧಿಕಾರಿಗಳ ಕದ ತಟ್ಟಿದ ಮುನಿರತ್ನ

https://newsfirstlive.com/wp-content/uploads/2023/07/MUNIRATNA.jpg

Load More