ಮೊಬೈಲ್ ಅಂಗಡಿ ಸಿಬ್ಬಂದಿಗೆ ಮನಸ್ಸೋ ಇಚ್ಛೆ ತಳಿಸಿದ ಪುಡಿ ರೌಡಿಗಳು
ಮೃಗಗಳ ರೀತಿಯಲ್ಲಿ ಮೊಬೈಲ್ ಅಂಗಡಿಯ ಸಿಬ್ಬಂದಿ ಮೇಲೆ ಅಟ್ಟಹಾಸ
ಇಷ್ಟಾದರೂ ಕೇಸ್ ದಾಖಲಿಸಿಕೊಳ್ಳದ ಮಾದನಾಯಕನಹಳ್ಳಿ ಪೊಲೀಸರು
ಬೆಂಗಳೂರು: ಬೇಡ ನೋಡು.. ಏನೋ ಮಾಡ್ಕೋಂತಿಯಾ ಸಿಸ್ಯಾ… ನನ್ನ ಎದುರಾಕ್ಕೊಂಡು ಏರಿಯಾ ಲಿ ಇರೋಕ್ ಆಗುತ್ತಾ… ಶೆಟ್ಟಿ ಯಾವನ್ ಆದ್ರೆ ನಂಗೇನೂ.. ಅರೇ ಯಾಕಿಷ್ಟು ಆವೇಶ.. ಅಷ್ಟಕ್ಕೂ ಅಲ್ಲಿ ಏನಾಯ್ತು ಅಂತಾ ನಾವ್ ಹೇಳ್ತೀವಿ ಕೇಳಿ. ಪುಡಿ ರೌಡಿಯೊಬ್ಬ ಮೊಬೈಲ್ ಶಾಪ್ಗೆ ಬರ್ತಾನೆ.. ಬಂದಿದ್ದೇ… ನನಗೆ ಸಿ ಪಿನ್ ಚಾರ್ಜರ್ ಬೇಕು ಕೊಡು ಅಂತಾನೆ. ಅದಕ್ಕೆ ಶಾಪ್ ಓನರ್, ಆ ಚಾರ್ಜರ್ನ ಬೇರೆ ಅವ್ರು ಯೂಸ್ ಮಾಡ್ತಿದ್ದಾರೆ ಸಾರ್. ಅವರ ಫೋನ್ ಚಾರ್ಚ್ ಆದ್ಮೇಲೆ ನಿಮಗೆ ಕೊಡ್ತೀನಿ ಅಂದಿದ್ದಾನೆ ಅಷ್ಟೇ.. ಇಷ್ಟಕ್ಕೆ ರೊಚ್ಚಿಗೆದ್ದ ರೌಡಿ.. ತನ್ನ ಗ್ಯಾಂಗ್ ಅನ್ನೇ ಕರೆಸಿಕೊಂಡಿದ್ದಾನೆ.. ಮುಂದೇನಾಯ್ತು..
ಮುಂದಾಗಿದ್ದೆಲ್ಲಾ.. ಹೊಡಿ-ಬಡಿ.. ನಂದೂ ಒಂದ್ ಇರ್ಲಿ ಅಂತಾ ಗ್ಯಾಂಗ್ನಲ್ಲಿದ್ದೋರೆಲ್ಲಾ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಈ ಘಟನೆ ನಡೆದಿರೋದು ಬೆಂಗಳೂರಿನ ಮಾಗಡಿರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ಇರೋ ಮೊಬೈಲ್ ಶಾಪ್ನಲ್ಲಿ.. ಕೇಳಿದಾಗ ಚಾರ್ಜರ್ ಕೊಟ್ಟಿಲ್ಲ ಅಂತಾ ಖ್ಯಾತೆ ತಗೆದ ಪುಡಿ ರೌಡಿ ಶ್ರೇಯಸ್ ಅಂಡ್ ಗ್ಯಾಂಗ್ ಅಂಗಡಿಯಲ್ಲಿದ್ದ ಚೇರ್, ಕಂಪ್ಯೂಟರ್ ಎಲ್ಲಾ ಪುಡಿ ಪುಡಿ ಮಾಡಿದ್ದಾರೆ.
ಮನಷ್ಯತ್ವ ಇಲ್ಲದ ಹಾಗೆ ಪುಡಿರೌಡಿಗಳು ಮೃಗಗಳ ರೀತಿಯಲ್ಲಿ ಅಂಗಡಿಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೇಯಸ್ ಹಾಗೂ ಆತನ ತಂಡದವರು ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ. ಮಾಗಡಿ ರಸ್ತೆಯ ಸೀಗೆಹಳ್ಳಿ ಗೇಟ್ ಬಳಿ ಇರುವ ಮೊಬೈಲ್ ಶಾಪ್ನಲ್ಲಿ ಮೊಬೈಲ್ ಚಾರ್ಜರ್ ವಿಚಾರವಾಗಿ ಈ ಗಲಾಟೆ ನಡೆದಿದೆ. ಈ ಘಟನೆಯು ಕಳೆದ ಜೂನ್ 23ನೇ ತಾರೀಖಿನಂದು ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಹಲ್ಲೆ ದೃಶ್ಯ ಅದೇ ಮೊಬೈಲ್ ಶಾಪ್ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿರಿಕ್ ಮಾಡಿ ಹಲ್ಲೆ ಮಾಡಿದ್ದ ಆರೋಪಿ ಮಂಜುನಾಥ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇತರೆ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಪುಡಿ ರೌಡಿಗಳು ಅಂಗಡಿಯಲ್ಲಿದ್ದ ಚೇರ್, ಕಂಪ್ಯೂಟರ್ ಇನ್ನಿತರ ವಸ್ತುಗಳನ್ನು ಪುಡಿ, ಪುಡಿ ಮಾಡಿದ್ದಾರೆ. ಕೈಗೆ ಸಿಕ್ಕ ಸಿಕ್ಕ ವಸ್ತುಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚಾಗ್ತಿದೆ. ಯಾವುದೇ ಭಯವಿಲ್ಲದೆ ರಾಜಧಾನಿಯಲ್ಲಿ ದರ್ಬಾರ್ ಮಾಡ್ತಿದ್ದಾರೆ. ಕೇವಲ ಚಾರ್ಜರ್ ಕೊಟ್ಟಿಲ್ಲ ಅಂತಾ ಹೇಳಿದಕ್ಕೆ ಗುಂಪು ಕಟ್ಕೊಂಡು ಹಲ್ಲೆ ಮಾಡಿರೋ ಇಂತಹ ಪುಡಿ ರೌಡಿಗಳನ್ನು ಪೊಲೀಸರು ಬಗ್ಗು ಬಡಿಯಬೇಕಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಾರ್ಜರ್ ವೈಯರ್ ಕೊಟ್ಟಿಲ್ಲ ಅಂತ ಪುಡಿ ರೌಡಿಗಳು ಮೊಬೈಲ್ ಅಂಗಡಿಯ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿರೋ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಲ್ಲೆ ನಡೆಸಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.#newsfirstlive #newsfirstkannada #KannadaNews #Bengaluru #CCTV… pic.twitter.com/5rvzhyeaE7
— NewsFirst Kannada (@NewsFirstKan) June 27, 2023