newsfirstkannada.com

‘ಅಧಿಕಾರ ಶಾಶ್ವತ ಅಲ್ಲ ಮಿಸ್ಟರ್‌ ಡಿ.ಕೆ ಶಿವಕುಮಾರ್’- ಸವಾಲು ಸ್ವೀಕರಿಸಿದ ಕುಮಾರಸ್ವಾಮಿ ಖಡಕ್‌ ರಿಯಾಕ್ಷನ್

Share :

26-10-2023

    ಅಧಿಕಾರ ಶಾಶ್ವತ ಅಲ್ಲ ಮಿಸ್ಟರ್ ಡಿ.ಕೆ ಶಿವಕುಮಾರ್‌; ಅಧಿಕಾರ ತಿರುಗುತ್ತಾ ಇರುತ್ತೆ

    ಹಣ ವಸೂಲಿ ಮಾಡಿ ನಾನು ಚುನಾವಣೆ ಮಾಡಿಲ್ಲ - ಹೆಚ್‌.ಡಿ ಕುಮಾರಸ್ವಾಮಿ

    ನಿಮ್ಮ ಪ್ರಜ್ಞಾವಂತ ನಮಗೆ ಬೇಡಪ್ಪ; ನಾನು 25 ವರ್ಷದಿಂದ ನೋಡ್ಕೊಂಡು ಬಂದ್ದೀನಿಪ್ಪ

ಕನಕಪುರವನ್ನು ಬೆಂಗಳೂರು ಜಿಲ್ಲೆಗೆ ಸೇರಿಸುತ್ತೇನೆ ಎಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಹೆಚ್‌ಡಿಕೆ, ಡಿಸಿಎಂ ಚಾಲೆಂಜ್ ಸಹ ಹಾಕಿದ್ದಾರೆ. ನಾನು ಸ್ವೀಕಾರ ಮಾಡ್ತೀನಿ ಪಲಾಯನ ಮಾಡಲ್ಲ. ಅಧಿಕಾರ ಶಾಶ್ವತ ಅಲ್ಲ ಮಿಸ್ಟರ್ ಡಿ.ಕೆ ಶಿವಕುಮಾರ್. ಅಧಿಕಾರ ತಿರುಗುತ್ತಾ ಇರುತ್ತೆ ಎಂದು ಖಡಕ್ ಪ್ರತಿಸವಾಲು ಹಾಕಿದ್ದಾರೆ.

ಡಿ.ಕೆ ಶಿವಕುಮಾರ್ ಅವರ ಹೇಳಿಕೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿರುವ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಇಬ್ಬರು ನನ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಾನು ಅವರ ಸವಾಲು ಸ್ವೀಕಾರ ಮಾಡ್ತೀನಿ. ಪಲಾಯನ ಮಾಡಲ್ಲ. ನನ್ನ ಬಳಿ ಅಷ್ಟು ಸರಕು ಇದೆ. ಆರ್ಥಿಕ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಸರ್ಕಾರ ಕಾರಣ ಅಂತ ಹೇಳಿದ್ದಾರೆ. ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸುವುದಾಗಿ ಸಿಎಂ ಹೇಳಿದ್ದಾರೆ ಅದನ್ನ ನಾನು ಸ್ವಾಗತ ಮಾಡ್ತೀನಿ ಎಂದರು.

ಬ್ರಾಂಡ್ ಬೆಂಗಳೂರಿನ ಬಗ್ಗೆ ಮಾತನಾಡಿದ ಹೆಚ್‌ಡಿಕೆ, ಅಪ್ಪ ಡಿಕೆ ಶಿವಕುಮಾರ್ ಅವರೆ ಬೆಂಗಳೂರು ಡೈರಿ ಹಾಲಿನ ಪುಡಿ ಮಾಡುವ ಕಾರ್ಖಾನೆ ಮಾಡಲು ಜಮೀನು ವಶಪಡಿಸಿಕೊಂಡು ಅಲ್ಲಿ ರೈತರಿಗೆ ಎಷ್ಟು ಕೊಟ್ರಿ. ನಿಮ್ಮ ಪಟಾಲಂ ಎಷ್ಟು ಲೂಟಿ ಹೊಡೆದ್ರು. ನಿಮ್ಮ ಪ್ರಜ್ಞಾವಂತ ನಮಗೆ ಬೇಡಪ್ಪ. ನಾನು 25 ವರ್ಷದಿಂದ ನೋಡ್ಕೊಂಡು ಬಂದ್ದೀನಿಪ್ಪ. ಕುಮಾರಸ್ವಾಮಿ ಹತಾಶರಾಗಿದ್ದಾರೆ ಅಂತ ಹೇಳ್ತಾರೆ. ಅಧಿಕಾರ ನಮ್ಮ ಅಪ್ಪನ ಆಸ್ತಿ ಅಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನು, ನಾನು ಚುನಾವಣೆ ಮಾಡಿದ್ದೀನಿ. ಸಿಎಂ ಆಗಿ ಹಣ ವಸೂಲಿ ಮಾಡಿ ಚುನಾವಣೆ ಮಾಡಿಲ್ಲ. ನಮ್ಮ ನಡವಳಿಕೆ ನೋಡಿ ದೇಣಿಗೆ ನೀಡಿರುವ ಹಣದಲ್ಲಿ ಮಾಡಿದ್ದೀನಿ. ಬಿಡದಿ ಜಮೀನಿನ ಬೆಲೆ ಬಗ್ಗೆ ದೇವೇಗೌಡರನ್ನ ಕೇಳಿ ಅಂತ ಡಿಸಿಎಂ ಹೇಳಿದ್ದಾರೆ. ದೇವೇಗೌಡ ಮಕ್ಕಳ ಭವಿಷ್ಯದ ಬಗ್ಗೆ ಚರ್ಚೆ ಮಾಡಿದ್ದಾರೆ. ನಮ್ಮ ಹಳೆಯ ಸ್ನೇಹಿತರು, ನಮ್ಮ ಅಣ್ಣ ಹೇಳಿದ್ದಾರೆ. ಅಕ್ರಮದಿಂದ ಬಂದಿದ್ದರೆ ವಶಪಡಿಸಿಕೊಳ್ಳಿ. ನಾನು ವಿತರಕರಾಗಿ ಸಂಪಾದನೆ ಮಾಡಿ ಜಮೀನು ಖರೀದಿ ಮಾಡಿದ್ದೀನಿ. ನಿಮ್ಮ ರೀತಿ ಕಾಮನ್‌ ಸೆನ್ಸ್ ನಮಗೆ ಇಲ್ಲ. ಧರ್ಮಸ್ಥಳಕ್ಕೆ ಹೋಗೋಣ ಬನ್ನಿ. ನಾನು ಸವಾಲು ಸ್ವೀಕಾರ ಮಾಡ್ತೀನಿ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಧಿಕಾರ ಶಾಶ್ವತ ಅಲ್ಲ ಮಿಸ್ಟರ್‌ ಡಿ.ಕೆ ಶಿವಕುಮಾರ್’- ಸವಾಲು ಸ್ವೀಕರಿಸಿದ ಕುಮಾರಸ್ವಾಮಿ ಖಡಕ್‌ ರಿಯಾಕ್ಷನ್

https://newsfirstlive.com/wp-content/uploads/2023/10/HD-Kumaraswamy-PC.jpg

Load More