ಜನ ಬೆಚ್ಚಗೆ ಮಲಗಿರುವ ಟೈಮ್ನಲ್ಲಿ ಟೀಸರ್ ಬಿಡೋದಾ?
ಪ್ರಭಾಸ್ ಜೊತೆ ಸಿನಿಮಾ ಮಾಡೋ ಆಸೆ ಇದ್ದದ್ದು ಇವರಿಗೆ
ಸಲಾರ್ ಪಾರ್ಟ್- 1 ಬಳಿಕ ಪಾರ್ಟ್- 2 ಬರುವುದು ಪಕ್ಕಾ
ಬೆಳಂಬೆಳಗ್ಗೆನೆ ಇವತ್ತು ಸಿನಿಮಾ ಪ್ರೇಮಿಗಳಿಗೆ ಕೆಲಸವೋ ಕೆಲಸ ಕುತೂಹಲದ ಕೋಲಹಲ. ಏಕೆಂದರೆ ಇಡೀ ಪ್ಯಾನ್ ಇಂಡಿಯಾ ಪ್ರೇಕ್ಷಕರು ಕಾದಿರುವ ನಿಗಿ ನಿಗಿ ನಿರೀಕ್ಷೆಗಳ ಕಣ್ಣುಗಳು ಎದುರು ನೋಡ್ತಾ ಇರುವ ಸಲಾರ್ ಸಿನಿಮಾದ ಖಡಕ್ ಕಿರುನೋಟ ಭರ್ಜರಿಯಾಗಿಯೆ ಬಿಡುಗಡೆಯಾಗಿದೆ.
ಕೆಜಿಎಫ್ನ ಸೃಷ್ಠಿಕರ್ತ ಪ್ರಶಾಂತ್ ನೀಲ್, ರಾಜಕುಮಾರ, ಕೆಜಿಎಫ್, ಕಾಂತಾರ ಅನ್ನೋ ಬಂಗಾರದ ಸಿನಿಮಾಗಳನ್ನ ಕೊಟ್ಟ ಹೊಂಬಾಳೆಯ ವಿಜಯ ಕಿರಗಂದೂರು ನಿರ್ಮಾಣದ ಭಾರತಿಯ ಚಿತ್ರರಂಗದ ಬಾಕ್ಸಾಫೀಸ್ ಬಾಹುಬಲಿ ಪ್ರಭಾಸ್ ನಟನೆಯ ಸಲಾರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಇದನ್ನು ಓದಿ: ಸಲಾರ್ ಟೀಸರ್ 5 ಗಂಟೆ 12 ನಿಮಿಷಕ್ಕೆ ರಿಲೀಸ್ ಮಾಡಿದ್ದು ಏಕೆ?.. ಪ್ರಭಾಸ್ ಸಿನಿಮಾದಲ್ಲಿ KGF ಚಿತ್ರದ ನಂಟಿದಿಯಾ?
ಸಲಾರ್ ಅಪ್ಡೇಟ್ ಕೊಡಿ, ಅಪ್ಡೇಟ್ ಕೊಡಿ ಅಂತ ಪ್ರಭಾಸ್ ಫ್ಯಾನ್ಸ್ ಪ್ರಶಾಂತ್ ನೀಲ್ಗೆ ಕೇಳಿದ್ದೋ ಕೇಳಿದ್ದು. ಇತ್ತು ಯೂನಿವರ್ಸೆಲ್ ಸಿನಿಮಾ ಪ್ರೇಕ್ಷಕ ಕೆಜಿಎಫ್ ಡೈರೆಕ್ಟ್ರು ಹೆಂಗ್ ಮಾಡಿಬಹುದು ಗುರು ಸಲಾರ್ ಸಿನಿಮಾವನ್ನ ಅಂತ ಕಾದಿದ್ದೋ ಕಾದಿದ್ದು. ಆ ಕಾಯುವಿಕೆಗೆ ತೆರೆ ಬಿದ್ದಿದೆ. ಹೊಸ ಕುತೂಹಲದ ಕೋಲಾಹಲ ಶುರುವಾಗಿದೆ. ಕಾರಣ ಸಲಾರ್ ಸಿನಿಮಾದ ಟೀಸರ್.
ಸಲಾರ್ ಸಿನಿಮಾದ ಟೀಸರ್ ಬಿಡುಗಡೆಯ ದಿನಾಂಕ ಅದ್ರಲೂ ಬಿಡುಗಡೆಯ ಸೂಕ್ತ ಸಮಯವನ್ನ ಪ್ರಕಟಿಸಿ ಹೊಂಬಾಳೆ ಫಿಲಂಸ್ ಸಮಸ್ತ ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನ ಅಲರ್ಟ್ ಮಾಡಿತ್ತು. ಅದೇನು ಗುರು ಬೆಳಗ್ಗೆ 5.12ನಿಮಿಷಕ್ಕಾ..! ಆ ಬೆಳಗ್ಗೆ ಜನ ಬೆಚ್ಚಗೆ ಮಲಗಿರುವ ಟೈಮ್ನಲ್ಲಿ ಟೀಸರ್ ಬಿಡೋದಾ? ಅದೂ ಇಂತ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾದ ಟೀಸರ್. ಹಿಂಗೆ ಬಿಡುಗಡೆಯ ಸಮಯವೇ ಛಾಯ್ ಪೇ ಚರ್ಚೆ ಆಗಿತ್ತು ನೋಡಿ. ಏನೇ ಆಗ್ಲಿ ಸಲಾರ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.
ಸಲಾರ್ ಸಿನಿಮಾದ ಮುಹೂರ್ತ ಹೈದ್ರಾಬಾದ್ನಲ್ಲಿ ಆಗಿತ್ತು
ಬಾಹುಬಲಿಯಲ್ಲಿ ಕಂಡ ಪ್ರಭಾಸ್ ಆ್ಯಕ್ಟಿಂಗ್ಗೆ ಫಿದಾ ಆಗಿದ್ದ ಹೊಂಬಾಳೆ ಫಿಲಂಸ್ನ ಮಾಲೀಕ ವಿಜಯ ಕಿರಗಂದೂರ್ ಅವರ ಸಹೋದರ ಕಳೆದ ಬಿಜೆಪಿ ಸರ್ಕಾರದ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಅವರಿಗೆ ಒಂದು ಆಸೆ ಇತ್ತು. ಪ್ರಭಾಸ್ ಅವರಿಗೊಂದು ಸಿನಿಮಾ ಮಾಡಿಸಬೇಕು ಅಂತ. ಅದರಂತೆ ಜನವರಿ 15, 2021ರಂದು ಸಲಾರ್ ಸಿನಿಮಾದ ಮುಹೂರ್ತ ಹೈದ್ರಾಬಾದ್ನಲ್ಲಿ ನೇರವೇರಿತ್ತು. ಈಗ ಬರೋಬ್ಬರಿ 2 ವರ್ಷ 10 ತಿಂಗಳು 7 ದಿನಕ್ಕೆ ಸಲಾರ್ನ ಔಟ್ ಪುಟ್ ಹೆಂಗಿದೆ ಅನ್ನೋದು ಇವತ್ತು ಬ್ರಾಮಿ ಮುಹೂರ್ತದಲ್ಲಿ ಬಿಡುಗಡೆಯಾದ ಈ ಟೀಸರ್ ನಿಂದ ಗೊತ್ತಾಗುತ್ತಿದೆ.
ಇನ್ನೂ 1 ನಿಮಿಷ 47 ಸೆಕೆಂಡ್ನ ಸಲಾರ್ ಟೀಸರ್ ಹೆಂಗಿದೆ ಅನ್ನೋದನ್ನ ವಿಶ್ಲೇಷಣೆ ಮಾಡೋದಾದ್ರೆ ಇದು ಕೋಲಾರ ಗೋಲ್ಡ್ ಫಿಲ್ಡ್ ಪಾರ್ಟ್- 3 ಇರಬಹುದೇನೋ ಅಂತ ಮೇಲ್ ನೋಟಕ್ಕೆ ಕಾಣುತ್ತೆ. ಅದ್ರೇ ವಿಷಯ ಬೇರನೆ ಇದೆ ಸ್ವಾಮಿ. ಪ್ರಶಾಂತ್ ನೀಲ್ ಅವರ ವರ್ಕಿಂಗ್ ಸ್ಟೈಲ್ನ ರುಚಿಯ ವಾಸನೆ ಎದ್ದು ಹೊಡೆಯುತ್ತಿದೆ. ಬರೋಬ್ಬರಿ 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಸಿನಿಮಾ ಸಲಾರ್. 200 ಕೋಟಿ ರೂ. ಅನ್ನೋದನ್ನ ಚಿತ್ರತಂಡವೇ ವಿಕಿಪೀಡಿಯದಲ್ಲಿ ಬರೆದುಕೊಂಡಿದೆ. 4K ಐಮ್ಯಾಕ್ಸ್ ಸಿನಿಮ್ಯಾಟಿಕ್ ವರ್ಷನ್ ನಲ್ಲಿ ಚಿತ್ರೀಸಲಾಗಿದೆ. DCT- ಡಾರ್ಕ್ ಸೆಂಟ್ರಿಕ್ ಥೀಮ್ನಲ್ಲಿ ಸಲಾರ್ ಕಥೆಯನ್ನ ಸೆರೆಹಿಡಿಯಲಾಗಿದೆ. ಈ ತಂತ್ರಜ್ಞಾನ ಇಡೀ ಇಂಡಿಯಾದಲ್ಲಿ ಬಳಸಿದ ಮೊಟ್ಟ ಮೊದಲ ಟೆಕ್ನಾಲಜಿ ಆಗಿದೆ.
ಪ್ರಶಾಂತ್ ನೀಲ್ ಸಿನಿಮಾದಲ್ಲಿ ಡೈಲಾಗ್ ಫೇಮಸ್ ಆಗ್ತಾವೆ ಗ್ಯಾರಂಟಿ
ಪ್ರಶಾಂತ್ ನೀಲ್ ಏನೇ ಮಾಡ್ಲಿ ಆ ಸಿನಿಮಾದ ಡೈಲಾಗ್ ಅಂತು ಫೇಮಸ್ ಆಗೇ ಆಗುತ್ತವೆ. ಇದ್ರಲ್ಲೂ ಕೆಲ ಯೂನಿವರ್ಸೆಲ್ ಡೈಲಾಗ್ ಅನ್ನ ಕೊಡಿಸಿದ್ದಾರೆ ನೀಲ್. ಎಂದಿನಂತೆ ಕಥೆಯನ್ನ ಹೇಳೋ ಒಬ್ಬ ನರೆಟರ್ ಮೂಲಕವೇ ಸಿನಿಮಾದ ಕಥೆಯನ್ನ ಹೇಳಿಸೋ ಸೂಚನೆ ಸಿಕ್ತಿದೆ. ಒಬ್ಬ ವಯಸ್ಸಾದ ವ್ಯಕ್ತಿಗೆ ಗನ್ ಹಿಡಿದು ಒಂದಷ್ಟು ಜನ ಸುತ್ತುವರೆದು ಕೊಂದೆ ಬಿಡ್ತಾರೆ ಅನ್ನೋ ಫೀಲ್ ನಲ್ಲಿ ನಿಂತಿರುತ್ತಾರೆ. ಆಗ ಅವರು ಹೇಳುವ ಡೈಲಾಗ್ ಅಲ್ಲಿದ್ದವರನ್ನೆಲ್ಲ ಭಯ ಭೀಳಿಸುವಂತಿದೆ. ಅದು ಡೈಲಾಗ್ ಹೀಗಿದೆ- ‘‘ಸಿಂಪಲ್ ಇಂಗ್ಲೀಷ್.. ನೋ ಕನ್ಫ್ಯೂಷನ್’’.. ‘‘ಲಯನ್ , ಚೀತಾ , ಎಲಿಫೆಂಟ್ ವೇರಿ ಡೈಂಜರಸ್’’.. ಬಟ್.. ನಾಟ್ ಇನ್ ಜುರಾಸಿಕ್ ಪಾರ್ಕ್.. ಬಿಕಾಸ್ ಇನ್ ದಟ್ ಪಾರ್ಕ್ , ದೇರ್ ಇಸಾ’’.. ಇಲ್ಲಿಗೆ ಡೈಲಾಗ್ ಮುಗಿತ್ತು ಮುಂದಿನದನ್ನು ನೀವೇ ಊಹಿಸಿಕೊಳ್ಳಿ ಇಲ್ಲ ಅಂದ್ರೆ ಸೆಪ್ಟೆಂಬರ್ 28ಕ್ಕೆ ನಾವೇ ಥಿಯೇಟರ್ನಲ್ಲಿ ಹೇಳ್ತಿವಿ ಅನ್ನೋದು ಪ್ರಶಾಂತ್ ನೀಲ್ ಅವರ ಕ್ಲೂ.
ಹೊಂಬಾಳೆ ಫಿಲಂಸ್ ಮೇಲೆ ನಂಬಿಕೆ ಇಟ್ಟಿರುವ ಅಭಿಮಾನಿಗಳು ಹಾಗೂ ಟಾಲಿವುಡ್ ರೆಬಲ್ ಸ್ಟಾರ್ ಪ್ರಭಾಸ್ ಅಭಿಮಾನಿಗಳಿಗೆ ಸಲಾರ್ ಮೇಲೆ ಭಾರೀ ನಿರೀಕ್ಷೆಗಳಿವೆ. ಕಾರಣ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ರೆಕಾರ್ಡ್. ಈ ಸಿನಿಮಾದಲ್ಲಿ ಪ್ರಭಾಸ್ಗೆ ಎದುರು ನಿಲ್ಲಲ್ಲೂ ಗಟ್ಟಿ ಜಟ್ಟಿ ಪ್ರತಿಭೆಗಳನ್ನ ಕರೆಸಿ ನಿಲ್ಲಿಸಿದ್ದಾರೆ ನೀಲ್. ಪೃಥ್ವಿರಾಜ್ ಸುಕುಮಾರನ್ ಅವರು ಪ್ರಭಾಸ್ ಎದುರು ಗುಡುಗೋ ಪ್ರತಿಭೆ. ಇನ್ನೂಳಿದಂತೆ ಶ್ರುತಿ ಹಾಸನ್, ಜಗಪತಿ ಬಾಬು, ಶ್ರಿಯಾ ರೆಡ್ಡಿ, ಮಧು ಗುರುಸ್ವಾಮಿ, ಪ್ರಮೋದ್ ಮದ್ದೂರು ಹೀಗೆ ಮುಂತಾದವರು ಸಿನಿಮಾದಲ್ಲಿದ್ದಾರೆ. ಇವ್ರ ಬಗ್ಗೆ ಮುಂದಿನ ದಿನಗಳಲ್ಲಿ ಹೊಂಬಾಳೆ ಫಿಲಂಸ್ ಗುಟ್ಟು ಬಿಟ್ಟುಕೊಡುತ್ತೆ.
ಯೂ ಟ್ಯೂಬ್, ಸೋಷಿಯಲ್ ಮೀಡಿಯಾದಲ್ಲಿ ಸಲಾರ್ ಶರವೇಗ
ಬೆಳ್ಳಂ ಬೆಳಗ್ಗೆ ಬಿಡುಗಡೆಯಾದ್ರು ಸಲಾರ್ ಸಿನಿಮಾದ ಟೀಸರ್ ಮಾತ್ರ ರಾಕೆಟ್ ರೀತಿ ಝೋಯಿ ಅನ್ನೋ ವೇಗದಲ್ಲಿ ಓಡ್ತಾ ಇದೆ. ನೋಡ ನೋಡ್ತಿದ್ದಂಗೆ ಲಕ್ಷ ಲಕ್ಷ ವೀಕ್ಷಣೆಯಾಗುತ್ತಿದೆ. ಚಿತ್ರಪ್ರೇಮಿಗಳು ಬೆಳಗ್ಗೆ ದೇವರ ಫೋಟೋ ನೋಡಿ ಎದ್ದರು ಬಿಟ್ಟರೋ ಗೊತ್ತಿಲ್ಲ. ಆದ್ರೆ ಭಾರೀ ಜನ ಸಲಾರ್ ಟೀಸರ್ ನೋಡ್ತಾ ನೋಡ್ತಾ ಹಾಸಿಗೆಯಿಂದ ಎದ್ದಿದ್ದಂತೂ ನಿಜ.
ಪ್ರಶಾಂತ್ ನೀಲ್ ಬಳಗದ ಶಕ್ತಿ ರವಿ ಬಸ್ರೂರ್ ಸಂಗೀತ , ಭೂವನ್ ಗೌಡ ಕ್ಯಾಮೆರಾ ವರ್ಕ್ , ಅನ್ಬರಿವ್ ಸಹೋದರರ ಸಾಹಸ ನಿರ್ದೇಶನ , ಶಿವಕುಮಾರ್ ಆರ್ಟ್ ಈ ಚಿತ್ರಕ್ಕೂ ಮುಂದುವರೆದಿದೆ.
ಇದನ್ನು ಓದಿ: Salaar teaser: ಐದು ಭಾಷೆಯಲ್ಲಿ ‘ಸಲಾರ್’ ಟೀಸರ್ ರಿಲೀಸ್.. ಬೆಳ್ಳಂಬೆಳಗ್ಗೆ ಹಬ್ಬ ಮಾಡಿದ ಪ್ರಭಾಸ್ ಅಭಿಮಾನಿಗಳು
ಸಲಾರ್ ಟೀಸರ್ನಲ್ಲಿ ಭಾಗ-2 ಇರುವುದಾಗಿ ಹಿಂಟ್
ಓಕೆ ಈ ರಿವ್ಯೂ ಮುಗಿಸೋ ಮುನ್ನ ಒಂದು ವಿಷಯ ತಿಳಿಸಲೇ ಬೇಕು.. ಮರ್ತು ಗಿರ್ತು ಹೋದ್ರೆ ಈ ರಿವ್ಯೂ ಫುಲ್ ಪಿಲ್ ಆಗೋದಿಲ್ಲ. 2 ಭಾಗಗಳಾಗಿ ಸಲಾರ್ ಸಿನಿಮಾ ಬರಲಿದೆ. ಈ ಬಗ್ಗೆ ನಾವು ಹಿಂದೆನೆ ನಿಮಗೆ ನ್ಯೂಸ್ ಫಸ್ಟ್ ನಲ್ಲಿ ಹೇಳಿದ್ವಿ. ಈಗ ಅದರ ಸೂಚನೆ ಕೊಟ್ಟಿದ್ದಾರೆ ಪ್ರಶಾಂತ್ ನೀಲ್. ಪಾರ್ಟ್- 1 ಸೀಸ್ ಫೈಯರ್ ಎಂದು ಚಿತ್ರತಂಡ ತಿಳಿಸಿದೆ. ಇನ್ನೊಂದು ಭಾಗ ಬರಲಿದೆ. ಆದ್ರೆ ಪಾರ್ಟ್ ಒನ್ ಸೆಪ್ಟೆಂಬರ್ 28ನೇ ತಾರೀಖ್ ವಿಶ್ವಾದ್ಯಂತ ತೆರೆಕಾಣಲಿದೆ. ಈ ಸಿನಿಮಾದ ತೆಲುಗು ಭಾಷೆಯಲ್ಲಿ ಸಿದ್ಧವಾಗಿದ್ದು ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಡಬ್ ಅಗಿ ಒಂದೇ ದಿನ ರಿಲೀಸ್ ಆಗಲಿದೆ.
ಬಾಹುಬಲಿ ಸಿನಿಮಾ ಸೀರಿಸ್ಗಳ ನಂತರ ಚಿತ್ರಗಳ ನಂತ್ರ ಪ್ರಭಾಸ್ ನಟನೆಯ ಸಾಹೋ, ರಾಧೆ ಶ್ಯಾಮ್ ಮತ್ತು ಆದಿಪುರುಷ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ್ರೂ ಕೂಡ ಪ್ರೇಕ್ಷಕರಿಗೆ ಅದ್ರಲೂ ಪ್ರಭಾಸ್ ಫ್ಯಾನ್ಸ್ಗೆ ಸಂತೃಪ್ತಿಕೊಟ್ಟಿಲ್ಲ. ಈ ಸಲಾರ್ ಸಂತೃಪ್ತಿ ಕೊಟ್ಟೇ ಕೊಡುತ್ತೆ ಅನ್ನೋದು ಅಭಿಮಾನಿಗಳ ನಂಬಿಕೆ ಮತ್ತು ಆಶಯ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ