newsfirstkannada.com

ಸಲಾರ್ ಟೀಸರ್​ 5 ಗಂಟೆ 12 ನಿಮಿಷಕ್ಕೆ ರಿಲೀಸ್ ಮಾಡಿದ್ದು ಏಕೆ?.. ಪ್ರಭಾಸ್​ ಸಿನಿಮಾದಲ್ಲಿ KGF ಚಿತ್ರದ ನಂಟಿದಿಯಾ?

Share :

06-07-2023

    ಯಾವ ಸಿನಿಮಾ ಟೀಸರ್, ಟ್ರೇಲರ್ ಕೂಡ ಇಷ್ಟು ಬೆಳಗ್ಗೆ ರಿಲೀಸ್ ಮಾಡಿಲ್ಲ

    ಕೋಳಿ ಕೂಗೋ ಸಮಯಕ್ಕೆ ರಿಲೀಸ್ ಆಯಿತು ಪ್ರಭಾಸ್​ನ ಸಲಾರ್​ ಟೀಸರ್

    KGF, ಅಥವಾ ಉಗ್ರಂ ಸಿನಿಮಾಕ್ಕೆ ಸಲಾರ್​ ಏನಾದ್ರೂ ಲಿಂಕ್ ಇದಿಯಾ..?

ಜುಲೈ 6 ಅಂದರೆ ಇಂದು ಸಲಾರ್ ಟೀಸರ್​ ರಿಲೀಸ್ ಆಗಿದೆ ಅನ್ನೋ ಖುಷಿ ಒಂದು ಕಡೆಯಾದ್ರೆ, ಬೆಳ್ಳಂಬೆಳಗ್ಗೆನೇ ಟೀಸರ್ ಯಾಕೆ ಅನ್ನೋದು ಮತ್ತೊಂದು ಚರ್ಚೆ. ಸಾಮಾನ್ಯವಾಗಿ ಯಾವುದೇ ಸಿನಿಮಾದ ಟೀಸರ್, ಟ್ರೇಲರ್ ಅಥವಾ ಹಾಡನ್ನ ರಿಲೀಸ್ ಮಾಡುವಾಗ ಪ್ರೈಮ್ ಟೈಮ್ ನೋಡ್ತಾರೆ. ಅದರಲ್ಲು ಸೋಶಿಯಲ್ ಮೀಡಿಯಾ ರೆಕಾರ್ಡ್ಸ್​, ಟ್ರೆಂಡ್ಸ್​ ಇಂಪಾರ್ಟೆಂಟ್​ ಅನ್ನೋ ಈ ಕಾಲದಲ್ಲಿ ಪೀಕ್​ ಟೈಮ್ ಯಾವುದು ಅನ್ನೋದೇ ದೊಡ್ಡ ಸ್ಟ್ರೆಂತ್. ಆದ್ರೆ ಈ ವಿಷ್ಯದಲ್ಲಿ ಹೊಂಬಾಳೆ ಮತ್ತು ಪ್ರಶಾಂತ್ ನೀಲ್ ಟೀಮ್​ನ ಲೆಕ್ಕಾಚಾರ ಬೇರೆ ಆಗಿದೆ. ಯಾರು ನಿರೀಕ್ಷೆ ಮಾಡದ ಸಮಯವನ್ನ ಚಿತ್ರತಂಡ ಆಯ್ಕೆ ಮಾಡಿಕೊಂಡಿದೆ. ಇದರ ಒಳಮರ್ಮವೇನು ಎನ್ನುವುದರ ಬಗ್ಗೆ ಈಗ ಬಗೆ ಬಗೆಯ ಚರ್ಚೆಗಳು ಆಗುತ್ತಿವೆ.

ಸಲಾರ್​ ಚಿತ್ರದ ಟೀಸರ್​ ಮುಂಜಾನೆ 5 ಗಂಟೆ 12 ನಿಮಿಷಕ್ಕೆ ರಿಲೀಸ್ ಆಗಿದೆ. ಹಾಗೆ ನೋಡಿದ್ರೆ ಈ ಮುಂಚೆ ಯಾವ ಸಿನಿಮಾದ ಟೀಸರ್, ಟ್ರೇಲರ್ ಕೂಡ ಇಷ್ಟು ಬೆಳಗ್ಗೆ ಬಂದಿಲ್ಲ. ಕೆಲವು ಸಲ ಸ್ಟಾರ್ ನಟರ ಬರ್ತ್​ಡೇ ಪ್ರಯುಕ್ತ ಮಿಡ್​ನೈಟ್​ 12ಕ್ಕೆ ಬಿಡುಗಡೆ ಮಾಡಿರುವ ಉದಾಹರಣೆಗಳಿವೆ. ಆದ್ರೆ ಕೋಳಿ ಕೂಗುವ ಸಮಯದಲ್ಲಿ ಆಗಿರಲಿಲ್ಲ. ಈ ವಿಷ್ಯದಲ್ಲಿ ಸಲಾರ್​ ಹೊಸ ಸೆನ್ಸೇಷನ್. ಈ ಸೆನ್ಸೇಷನ್​ಗೆ ಕಾರಣ ಒಳ್ಳೆಯ ಸಮಯ ಅನ್ನೋ ನಂಬಿಕೆ. ಬೆಳಗ್ಗೆ 5 ಗಂಟೆ 12 ನಿಮಿಷ ಒಳ್ಳೆ ಘಳಿಗೆ ಎನ್ನಲಾಗ್ತಿದೆ. ಹಾಗಾಗಿ ಟೈಮ್​ನ ಆಯ್ಕೆ ಮಾಡಿಕೊಂಡಿದೆ ಚಿತ್ರತಂಡ. ಇನ್​ಫ್ಯಾಕ್ಟ್​ ಹೊಂಬಾಳೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಈ ಬಗ್ಗೆ ರಿಯಾಕ್ಟ್​ ಮಾಡಿದ್ದು, ಇದು ಒಳ್ಳೆಯ ಟೈಮ್, ಅದಕ್ಕೆ ಎಂದಿದ್ದಾರೆ. ಇನ್ನು ಜುಲೈ 6 ಡೈರೆಕ್ಟರ್ ಪ್ರಶಾಂತ್ ನೀಲ್ ಅವರ ಹುಟ್ಟುಹಬ್ಬ ಅನ್ನೋದು ಮತ್ತೊಂದು ಸ್ಪೆಷಲ್ ಅಂತಾನೇ ಹೇಳಲಾಗಿದೆ.

5.12AM .. ರಾಕಿಭಾಯ್​ಗೂ ಸಲಾರ್​ಗೂ ಇದ್ಯಾ ಸಂಬಂಧ?

ಬೆಳಗ್ಗೆ 5 ಗಂಟೆ 12 ನಿಮಿಷ ಒಳ್ಳೆ ಟೈಮ್ ಅದಕ್ಕೆ ಆ ಸಮಯದಲ್ಲಿ ಟೀಸರ್ ಲಾಂಚ್ ಮಾಡ್ತಿದ್ದೇವೆ ಅನ್ನೋದು ಚಿತ್ರತಂಡದ ವಾದ. ಆದ್ರೆ, ಬುದ್ಧಿವಂತ ಪ್ರೇಕ್ಷಕರು ಕೆಲವೊಮ್ಮೆ ಚಿತ್ರತಂಡಕ್ಕಿಂತ ಸಿರೀಯಸ್ ಆಗಿ ಯೋಚನೆ ಮಾಡ್ತಾರೆ ಅನ್ನೋದಕ್ಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆ ಕಾರಣ. ಹೌದು, ಸಲಾರ್ ಚಿತ್ರದ ಟೀಸರ್​ನ್ನ ಬೆಳ್ಳಂ ಬೆಳಗ್ಗೆ ಅದರಲ್ಲೂ ವಿಶೇಷವಾಗಿ 5 ಗಂಟೆ 12 ನಿಮಿಷಕ್ಕೆ ರಿಲೀಸ್ ಮಾಡ್ತಿರೋದ್ರ ಹಿಂದೆ ಕೆಜಿಎಫ್​ ನಂಟಿದ್ಯಂತೆ. ಕೆಜಿಎಫ್​ ಕ್ಲೈಮ್ಯಾಕ್ಸ್​ಗೂ ಸಲಾರ್ ಚಿತ್ರದ ಕಥೆಗೂ ಸಂಬಂಧವಿರೋದ್ರಿಂದಲೇ ಸಲಾರ್ ಟೀಸರ್​ನ ಮುಂಜಾನೆ 5 ಗಂಟೆಗೆ ಬಿಡುಗಡೆ ಮಾಡ್ತಿದ್ದಾರೆ ಅನ್ನೋದು ಕುತೂಹಲಕಾರಿ ಸಂಗತಿ.

ಇದನ್ನು ಓದಿ: Salaar teaser: ಐದು ಭಾಷೆಯಲ್ಲಿ ‘ಸಲಾರ್’ ಟೀಸರ್ ರಿಲೀಸ್.. ಬೆಳ್ಳಂಬೆಳಗ್ಗೆ ಹಬ್ಬ ಮಾಡಿದ ಪ್ರಭಾಸ್ ಅಭಿಮಾನಿಗಳು

ಕೆಜಿಎಫ್​ ವರ್ಸಸ್ ಸಲಾರ್

ಅಂದ್ಹಾಗೆ, ಸಲಾರ್ ಚಿತ್ರದ ಮೇಲೆ ಮೊದಲಿಂದ ಒಂದು ಅನುಮಾನ ಇದೆ. ಇದು ಕೆಜಿಎಫ್- 3 ಇರಬಹುದು ಅಥವಾ ಉಗ್ರಂ- 2 ಇರಬಹುದು ಅನ್ನೋ ಚರ್ಚೆ ಆಗಾಗ ಸದ್ದು ಮಾಡ್ತಾನೇ ಇತ್ತು. ಈ ನಡುವೆ ಸಲಾರ್​ನಲ್ಲಿ ರಾಕಿ ಭಾಯ್​ ಸ್ಪೆಷಲ್ ಅಪಿರಿಯೆನ್ಸ್​ ಇರಲಿದೆ ಅಂತಾನೂ ಚರ್ಚೆಯಾಯ್ತು. ಬಟ್, ನೀಲ್ ಆಗ್ಲಿ, ಹೊಂಬಾಳೆ ಫಿಲಂಸ್ ಆಗ್ಲಿ ಇದ್ರ ಬಗ್ಗೆ ರಿಯಾಕ್ಟ್​ ಮಾಡಿಲ್ಲ. ಹಾಗಾಗಿ ಇದು ಬರಿ ಅಂತೆ ಕಂತೆಯಾಗಿ ಉಳಿದುಬಿಡ್ತು. ಇದೀಗ ಸಲಾರ್ ಟೀಸರ್ ಲಾಂಚ್ ದಿನ ಮತ್ತು ಸಮಯ ಘೋಷಿಸಿದ್ಮೇಲೆ ಕೆಜಿಎಫ್​ಗೂ ಸಲಾರ್​ಗೂ ಲಿಂಕ್ ಇದೆ ಅನ್ನೋ ವಿಷ್ಯ ಮತ್ತೆ ಮುನ್ನೆಲೆಗೆ ಬಂದಿದೆ. ಅದು ಹೇಗೆ ಅನ್ನೋದಕ್ಕೆ ಸಾಕ್ಷಿಯು ಚರ್ಚೆಯಾಗ್ತಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸಲಾರ್ ಟೀಸರ್​ 5 ಗಂಟೆ 12 ನಿಮಿಷಕ್ಕೆ ರಿಲೀಸ್ ಮಾಡಿದ್ದು ಏಕೆ?.. ಪ್ರಭಾಸ್​ ಸಿನಿಮಾದಲ್ಲಿ KGF ಚಿತ್ರದ ನಂಟಿದಿಯಾ?

https://newsfirstlive.com/wp-content/uploads/2023/07/PRABHAS_YASH_PRASHANT.jpg

Load More