3 ಗಂಟೆಯಲ್ಲಿ ಎಷ್ಟು ವೀಕ್ಷಣೆ ಕಂಡಿದೆ ಗೊತ್ತಾ ಸಲಾರ್ ಟೀಸರ್
ಪ್ರಭಾಸ್ ಎಂಟ್ರಿ ಹೇಗಿದೆ.. ಮಾಸ್ ಲುಕ್ನಲ್ಲಿ ಡಾರ್ಲಿಂಗ್ ಹೀರೋ
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಇರೋ ಹೆಸರುಗಳಿವು
ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ ಇಂದು ಬೆಳ್ಳಂಬೆಳಗ್ಗೆ ನಾವು ನಿದ್ದೆಯಿಂದ ಎದ್ದು ಕಣ್ಣು ಬಿಡುವುದೊಳಗೆ ರಿಲೀಸ್ ಆಗಿತ್ತು. ಕನ್ನಡಿಗ, ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಮೇಲೆ ಪ್ರಭಾಸ್ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು.
ಸಲಾರ್ ಮೂವಿ ಬಗ್ಗೆ ಅಪ್ಡೇಟ್ ಕೊಡಿಯೆಂದು ಸೋಷಿಯಲ್ ಮೀಡಿಯಾದಲ್ಲಿ ಕೇಳುತ್ತಿದ್ದರು. ಬೆಳಗ್ಗೆ ಫ್ಯಾನ್ಸ್ಗೆ ಚಿತ್ರ ತಂಡ ಬಿಗ್ ಅಪ್ಡೇಟ್ ಕೊಟ್ಟಿದ್ದು ಯೂ ಟ್ಯೂಬ್ನಲ್ಲಿ ಟೀಸರ್ ಗಂಟೆ ಗಂಟೆಗೆ ಮಿಲಿಯನ್ ಗಟ್ಟಲೇ ವೀವ್ಸ್ ಕಾಣುತ್ತಿದೆ. ಟೀಸರ್ನಲ್ಲಿ ಡಾರ್ಲಿಂಗ್ ಪ್ರಭಾಸ್ ಮಾಸ್ ಲುಕ್ನಲ್ಲಿ ಕಾಣಿಸಿದ್ದು ಒಂದೊಂದು ಸ್ಕ್ರೀನ್ ಕೂಡ ಸಖತ್ ಆಗಿವೆ.
ಫುಲ್ ಕತ್ತಲಲ್ಲಿ ಇರುವಂತೆ ಈ ಟೀಸರ್ ಭಾಸವಾದರೂ ಬಿಜಿಎಂಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಟೀಸರ್ ರಿಲೀಸ್ ಆದ ಕೇವಲ 3 ಗಂಟೆ ಬರೋಬ್ಬರಿ 40 ಲಕ್ಷಕ್ಕೂ ಅಧಿಕ ಜನರು ಇದನ್ನು ನೋಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ #SalaarTeaser #PrashanthNeel #Prabhas ಹೆಸರುಗಳು ಟ್ರೆಂಡಿಂಗ್ನಲ್ಲಿವೆ. ಸಂಜೆ ವೇಳೆಗೆ ಟೀಸರ್ ಬಿಲಿಯನ್ ಗಟ್ಟಲೇ ವೀವ್ಸ್ ಆಗಬಹುದು ಎಂದು ಅಂದಾಜಿಸಲಾಗ್ತಿದೆ.
ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾದ ಈ ಚಿತ್ರವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಡೈರೆಕ್ಟ್ ಮಾಡಿದ್ದಾರೆ. ಪ್ರಡ್ಯೂಸರ್ ವಿಜಯ ಕಿರಗಂದೂರು ಸಲಾರ್ಗೆ ಬಂಡವಾಳ ಹೂಡಿದ್ದಾರೆ. ಕೆಜಿಎಫ್, ಕಾಂತಾರ ನಂತರ ಹೊಂಬಾಳೆ ಫಿಲಂಸ್ ಮತ್ತೊಂದು ಬಿಗ್ ಬಜೆಟ್ ಸಿನಿಮಾ ರಿಲೀಸ್ ಮಾಡಲು ಮುಂದಾಗಿದೆ. ಸೆಪ್ಟೆಂಬರ್ 28 ರಂದು ಪ್ರಭಾಸ್ ಅಭಿನಯದ ಸಲಾರ್ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ