newsfirstkannada.com

ಸಲಾರ್ ಪೋಸ್ಟ್​ ಪ್ರೊಡಕ್ಷನ್ ಲೇಟ್​ ಯಾಕೆ?; ಸೆಕೆಂಡ್​ ಹಾಫ್ ರೀ-ಶೂಟ್​ ಮಾಡ್ತಾರಾ ಪ್ರಶಾಂತ್ ನೀಲ್?

Share :

16-09-2023

    ಪ್ರಭಾಸ್​​ ಸಲಾರ್​ಗಾಗಿ ಇಡೀ ಸಿನಿ ದುನಿಯಾ ಎದುರು ನೋಡುತ್ತಿದೆ

    ಲೇಟ್​ ಆದ್ರೂ ಗ್ರೇಟ್​ ಆಗಿ ಬರಲಿ ಅನ್ನೋದಷ್ಟೇ ಫ್ಯಾನ್ಸ್​​ ನಿರೀಕ್ಷೆ!

    ಸ್ಪಷ್ಟ ಕಾರಣದ ಬಗ್ಗೆ ನ್ಯೂಸ್​​ಫಸ್ಟ್​ ತಂಡಕ್ಕೆ ಅಚ್ಚರಿ ವಿಷಯಗಳು ಲಭ್ಯ

ಪ್ಯಾನ್ ಇಂಡಿಯಾದ ನೆಕ್ಸ್ಟ್ ಬಿಗ್ಗೆಸ್ಟ್​ ಸಿನಿಮಾ ಅಂದ್ರೆ ಸಲಾರ್. ಸಲಾರ್​ಗಾಗಿ ಇಡೀ ಸಿನಿ ದುನಿಯಾ ಎದುರು ನೋಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಈ ತಿಂಗಳ ಅಂತ್ಯಕ್ಕೆ ಸಲಾರ್​ ಬರಬೇಕಿತ್ತು. ಆದರೆ ಹಳೇ ಡೇಟ್​ಗೆ ಸಲಾರ್​ ಬರಲ್ಲ. ಹಾಗಾದ್ರೆ ದಿಢೀರ್ ಅಂತ ಸಲಾರ್ ಡೇಟ್​ ಬದಲಿಸಿದ್ದೇಕೆ ಅಂತ ನೋಡಿದ್ರೆ ಕಾರಣ ಅಚ್ಚರಿ ಉಂಟು ಮಾಡುತ್ತಿದೆ. ಪ್ರಭಾಸ್​ ವಿಷ್ಯದಲ್ಲಿ ಒಂಥರಾ ಸವಾಲಾಗಿದ್ರೆ, ಪ್ರಶಾಂತ್ ನೀಲ್ ಲೆಕ್ಕಾಚಾರವೂ ತಲೆಬಿಸಿ ಮಾಡಿದೆ.

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​ನಲ್ಲಿ ತಯಾರಾಗುತ್ತಿರುವ ಸಲಾರ್ ಸಿನಿಮಾ ಸೆಪ್ಟೆಂಬರ್ 28ಕ್ಕೆ ವರ್ಲ್ಡ್​ವೈಡ್​ ತೆರೆಗೆ ಬರಬೇಕಿತ್ತು. ನಿನ್ನೆ ಮೊನ್ನೆವರೆಗೂ ಎಲ್ಲರೂ ಹಾಗೆ ಅಂದ್ಕೊಂಡಿದ್ದರು. ಆದರೆ ಸೆಪ್ಟೆಂಬರ್ 13ರಂದು ಹೊಂಬಾಳೆ ಟೀಮ್​ ಪ್ರಭಾಸ್​ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿತ್ತು. ಸಲಾರ್ ಮೊದಲ ಚಾಪ್ಟರ್ ಸೆಪ್ಟೆಂಬರ್ 28ಕ್ಕೆ ಬರಲ್ಲ ಅಂತ ಅನೌನ್ಸ್​ಮೆಂಟ್​ ಮಾಡಿ ನಿರಾಸೆ ಉಂಟು ಮಾಡಿತ್ತು.

ಕಳೆದ ಎರಡು ವರ್ಷದಿಂದ ತಯಾರಾಗ್ತಿರುವ ಸಲಾರ್ ಟೀಮ್ ಈಗಾಗಲೇ ಎರಡ್ಮೂರು ಸಲ ಡೇಟ್ ಬದಲಿಸಿದೆ. ಪ್ರಭಾಸ್​ ಕಾಲ್​ಶೀಟ್​, ಪ್ರಶಾಂತ್ ನೀಲ್​ ಕಮಿಟ್​ಮೆಂಟ್​. ಸ್ಕ್ರಿಪ್ಟ್​ನಲ್ಲಿ ಬದಲಾವಣೆ ಹೀಗೆ ಹಲವು ಕಾರಣಗಳಿಂದ ಸಲಾರ್​ ಪದೇ ಪದೇ ಮುಂದಕ್ಕೆ ಹೋಗ್ತಾನೇ ಇತ್ತು. ಅಂತಿಮವಾಗಿ ಸೆಪ್ಟೆಂಬರ್ 28ಕ್ಕೆ ಶತಾಯಗತಾಯ ಬಿಗ್ ಸ್ಕ್ರೀನ್​ ಮೇಲೆ ಬಂದೇ ಬರುತ್ತೇವೆ ಅಂತಿದ್ದ ಚಿತ್ರತಂಡ ಈ ಸಲವೂ ಪ್ರೇಕ್ಷಕರನ್ನ ಅಪ್​ಸೆಟ್​ ಮಾಡಿದೆ. ‘ನಿಮಗೊಂದು ಅದ್ಭುತ ಅನುಭವ ಕೊಡುವ ಉದ್ದೇಶದಿಂದ ಕೆಲಸ ಸಾಗುತ್ತಿದೆ. ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿದ್ದೇವೆ’ ಎಂದಷ್ಟೇ ಹೇಳಿರುವ ಚಿತ್ರತಂಡ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸುತ್ತೇವೆ ಎಂದಿದ್ದರು. ಆದರೆ, ಕೊನೆ ಕ್ಷಣದಲ್ಲಿ ರಿಲೀಸ್ ಮುಂದೂಡಿದ್ದೇಕೆ ಅನ್ನೋದಕ್ಕೆ ಸ್ಪಷ್ಟ ಕಾರಣ ಹೇಳಿರಲಿಲ್ಲ. ಅದನ್ನ ಹುಡುಕಿ ಹೋದ ನ್ಯೂಸ್​​ಫಸ್ಟ್​ ತಂಡಕ್ಕೆ ಅಚ್ಚರಿಯ ವಿಷಯಗಳು ಲಭ್ಯವಾಗಿದೆ.

ಇದನ್ನು ಓದಿ: ಮಹಿಳಾ PSI ಪುತ್ರನ ವೀಲಿಂಗ್​ ಪುಂಡಾಟಕ್ಕೆ ವೃದ್ಧ ಬಲಿ.. ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರ ಅಳಲು

ಈ ವರ್ಷ ಬರಲ್ಲ ಸಲಾರ್ ಮೊದಲ ಅಧ್ಯಾಯ!

ಸೆಪ್ಟೆಂಬರ್ 28ರಿಂದ ಮುಂದೂಡಿಕೆಯಾದ ಸಲಾರ್ ಸಿನಿಮಾ ಇದೇ ವರ್ಷ ಬರುತ್ತೆ ಎನ್ನುವ ನಿರೀಕ್ಷೆ ಈವರೆಗೂ ಇದೆ. ಡಿಸೆಂಬರ್​ಗೆ ಕೊನೆಯ ವಾರಕ್ಕೆ ಮುಹೂರ್ತ ಫಿಕ್ಸ್​ ಆದ್ರೂ ಆಗಬಹುದು ಎಂಬ ಭರವಸೆ ಮೂಡಿಸಿದೆ. ಆದರೆ ಶಾಕಿಂಗ್ ಸಮಾಚಾರ ಏನಪ್ಪಾ ಅಂದ್ರೆ ಸಲಾರ್ ಈ ವರ್ಷ ಬರಲ್ವಂತೆ. ಈ ವರ್ಷ ಸಲಾರ್​ ತೆರೆಗೆ ಬರೋದು ಬಹುತೇಕ ಅನುಮಾನ ಎಂಬ ಎಕ್ಸ್​ಕ್ಲೂಸಿವ್​ ಸಮಾಚಾರ ನ್ಯೂಸ್​ಫಸ್ಟ್​ ತಂಡಕ್ಕೆ ಲಭ್ಯವಾಗಿದೆ. ಈ ವರ್ಷ ಸಲಾರ್ ಬರೋದು ಅನುಮಾನವಾದ್ರೆ ಮತ್ಯಾವಾಗ ಅಂತ ಕೇಳಿದ್ರೆ ಅದಕ್ಕೂ ಒಂದು ದಿನಾಂಕವನ್ನ ನಿಗದಿ ಮಾಡಿಟ್ಟುಕೊಂಡಿದೆಯಂತೆ. ಸದ್ಯದ ಲೆಕ್ಕಾಚಾರ, ಬಾಕಿ ಉಳಿದಿರುವ ಕೆಲಸ, ಪ್ರಚಾರ ಎಲ್ಲವನ್ನೂ ತಲೆಯಲ್ಲಿಟ್ಟುಕೊಂಡಿರುವ ಚಿತ್ರತಂಡ ಮುಂದಿನ ವರ್ಷದ ಮಾರ್ಚ್ ತಿಂಗಳನ್ನ ಟಾರ್ಗೆಟ್​ ಮಾಡಿದೆಯಂತೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ತಿಂಗಳು ಸಲಾರ್​ ದರ್ಶನ ಕೊಡಲಿದೆಯಂತೆ.

ಸಲಾರ್ ಪೋಸ್ಟ್​ ಪ್ರೊಡಕ್ಷನ್ ಯಾಕೆ ಲೇಟ್​ ಆಗ್ತಿದೆ?

ಸಲಾರ್ ಸಿನಿಮಾದ ಚಿತ್ರೀಕರಣ ಮುಗಿದು ಹೋಗಿದೆ. ನಾಲ್ಕೈದು ದಿನದ ಪ್ಯಾಚ್​ವರ್ಕ್​ ಮಾತ್ರ ಉಳಿದುಕೊಂಡಿದ್ದು ಬಾಕಿ ಎಲ್ಲ ದೃಶ್ಯಗಳ ಶೂಟಿಂಗ್ ಕೊನೆಗೊಂಡಿದೆ. ಬಟ್ ಸಿನಿಮಾ ತಂಡ ಸ್ಟಕ್ ಆಗಿರೋದು ಪೋಸ್ಟ್​ ಪ್ರೊಡಕ್ಷನ್​ನಲ್ಲಿ. ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿ ಸಿಜಿ ವರ್ಕ್​ಗೆ ಹೆಚ್ಚು ಸಮಯ ತೆಗೆದುಕೊಳ್ತಿದೆ. ಎಷ್ಟು ಸಮಯ ಅಂದ್ರೆ ಈಗಿನ ಪರಿಸ್ಥಿತಿಯಲ್ಲಿ ಸಲಾರ್ ಸಿಜಿ ಕೆಲಸ ಮುಗಿಯೋಕೂ ಇನ್ನೂ 30 ರಿಂದ 50 ದಿನ ಸಮಯ ಬೇಕಂತೆ. ಹಾಗಾಗಿ, ಕ್ವಾಲಿಟಿ ವಿಷ್ಯದಲ್ಲಿ ಯಾವುದೇ ಕಾಂಪ್ರುಮೈಸ್​ ಆಗದಿರಲು ನಿರ್ಧರಿಸಿರುವ ಹೊಂಬಾಳೆ ಫಿಲಂಸ್​ ಹಂಡ್ರೆಡ್​ ಪರ್ಸೆಂಟ್​ ಕೆಲಸ ಮುಗಿದ ನಂತರವೇ ಸಿನಿಮಾ ರಿಲೀಸ್ ಮಾಡೋಣ ಎಂದುಕೊಂಡಿದೆ.

ಟೆನ್ಷನ್ ಹೆಚ್ಚಿಸಿದ ಪ್ರಶಾಂತ್ ನೀಲ್ ನಿರ್ಧಾರ?
ಸೆಕೆಂಡ್​ ಹಾಫ್ ರೀ-ಶೂಟ್​ ಮಾಡ್ತಾರಾ ನೀಲ್?

ಇದುವರೆಗೂ ಸಲಾರ್ ಸಿನಿಮಾ ತುಂಬಾ ಚೆನ್ನಾಗಿದೆ ಬಂದಿದೆಯಂತೆ. ಚಿತ್ರದ ಔಟ್​ಪುಟ್​ ನೋಡಿರುವ ಹೊಂಬಾಳೆ ಮತ್ತು ನಟ ಪ್ರಭಾಸ್​ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್​ ಇಟ್ಕೊಂಡಿದ್ದಾರಂತೆ. ಹೊಂಬಾಳೆ ಸಾರಥ್ಯದಲ್ಲಿ ಹಾಗೂ ಪ್ರಭಾಸ್​ ನಟನೆಯಲ್ಲಿ ಈವರೆಗೂ ಬಂದಿರುವ ಸಿನಿಮಾಗಳ ಪೈಕಿ ಸಲಾರ್​ ಬಿಗ್ಗೆಸ್ಟ್​​ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಇದೆಯಂತೆ. ಆದ್ರೀಗ ನಿರ್ದೇಶಕ ಪ್ರಶಾಂತ್ ನೀಲ್​ ನಾವ್ಯಾಕೆ ಇನ್ನೊಂದು ಆ್ಯಪ್ಷನ್ ತಗೋಬಾರದು ಅನ್ನೋ ಆಲೋಚನೆಗೆ ಬಿದ್ದಿದ್ದಾರಂತೆ. ಕಂಪ್ಲೀಟ್​ ಶೂಟಿಂಗ್ ಮುಗಿಸಿರುವ ನೀಲ್​ ಕೊನೆ ಹಂತದಲ್ಲಿ ಸಲಾರ್ ಚಿತ್ರದ ಕೆಲವು ಸೀನ್​ಗಳನ್ನ ರೀ-ಶೂಟ್​ ಮಾಡೋಣ ಎನ್ನುವ ಬಗ್ಗೆ ಯೋಚಿಸ್ತಿದ್ದಾರಂತೆ. ಹೌದು, ಸಲಾರ್ ಸಿನಿಮಾದ ಮೊದಲ ಅಧ್ಯಾಯದ ಬಗ್ಗೆ ಫುಲ್ ಖುಷಿಯಾಗಿರುವ ಪ್ರಶಾಂತ್ ನೀಲ್, ಸೆಕೆಂಡ್​ ಹಾಫ್​ನಲ್ಲಿ ಕೆಲವು ಬದಲಾವಣೆ ಅಗತ್ಯ ಅಂತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸಲಾರ್ ಸೆಕೆಂಡ್ ಹಾಫ್​ ಮತ್ತೆ ರೀ-ಶೂಟ್​ ಆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಅವರ ಆಪ್ತಬಳಗ. ಬಟ್, ಈ ವಿಷ್ಯದಲ್ಲಿ ಹೊಂಬಾಳೆ ಸಂಸ್ಥೆಯ ಯಾವ ಥರಾ ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ. ಒಂದು ವೇಳೆ ರೀ-ಶೂಟ್ ಮಾಡೋದು ನಿಜವೇ ಆದ್ರೆ ಸಲಾರ್ ದರ್ಶನ ಇನ್ನಷ್ಟು ವಿಳಂಬ ಆಗೋದ್ರಲ್ಲಿ ಅನುಮಾನನೇ ಇಲ್ಲ.

ಪ್ರಭಾಸ್​ಗೆ ಎಚ್ಚರಿಕೆ ಕೊಟ್ಟಿರೋದ್ಯಾರು?

ಸಲಾರ್ ಲೇಟ್ ಆಗ್ತಿರೋದಕ್ಕೆ ಮತ್ತೊಂದು ಪ್ರಮುಖ ಕಾರಣ ನಟ ಪ್ರಭಾಸ್ ಅಂತ ಹೇಳಲಾಗ್ತಿದೆ. ಬಾಹುಬಲಿ ಆದ್ಮೇಲೆ ಪ್ರಭಾಸ್​ ಸಿನಿಮಾಗಳು ಕಮರ್ಷಿಯಲಿ ದುಡ್ಡು ಮಾಡ್ತಿವೆ ಅನ್ನೋದು ಬಿಟ್ಟರೆ ಜನರಿಗೆ ಯಾವ ಸಿನಿಮಾನೂ ಇಷ್ಟ ಆಗಿಲ್ಲ. ಪ್ರಭಾಸ್​ಗೆ ಮತ್ತೆ ಗೆಲ್ಲಬೇಕಾದ ಒತ್ತಡದಲ್ಲಿದ್ದಾರೆ. ಮತ್ತೆ ಜನರ ಅಭಿಮಾನ ಗಳಿಸಬೇಕಾದ ಅನಿವಾರ್ಯತೆ ಅವರಿಗಿದೆ. ಈ ಹಂತದಲ್ಲಿ ಸಲಾರ್ ಚಿತ್ರವೊಂದೇ ಭರವಸೆಯಾಗಿದೆ. ಇದನ್ನ ಪ್ರಭಾಸ್​ ಕೂಡ ಚೆನ್ನಾಗಿ ತಿಳಿದುಕೊಂಡಿದ್ದು ಡೈರೆಕ್ಟರ್​ ಮೇಲೆ ನಂಬಿಕೆ ಇಟ್ಕೊಂಡಿದ್ದಾರಂತೆ. ಈ ನಡುವೆ ಪ್ರಭಾಸ್​ಗೆ ಆಪ್ತ ಜ್ಯೋತಿಷಿಗಳು ಸದ್ಯದ ಸ್ಥಿತಿಗತಿ ಬಗ್ಗೆ ಎಚ್ಚರಿಕೆ ಕೊಟ್ಟಿರೋದರಿಂದ ಸಲಾರ್ ವಿಷಯ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಹೌದು, ಪ್ರಭಾಸ್​ ಜಾತಕದಲ್ಲಿ ಈ ವರ್ಷ ಚೆನ್ನಾಗಿಲ್ವಂತೆ.

ಪ್ರಭಾಸ್​ ಏನೇ ಅಂದ್ಕೊಂಡರೂ ಸಕ್ಸಸ್ ಆಗಲಿಲ್ಲವಂತೆ. ಹಾಗಾಗಿ ಪ್ರಭಾಸ್​ ಖ್ಯಾತಿಯಲ್ಲಿ ಬಂದ ಯಾವ ಚಿತ್ರಗಳು ಗೆದ್ದಿಲ್ಲ. ಈಗ ಸಲಾರ್ ಬಂದರೂ ಕಷ್ಟ ಆಗಬಹುದು ಅನ್ನೋದು ಜ್ಯೋತಿಷಿಗಳ ಎಚ್ಚರಿಕೆ. ಆದ್ದರಿಂದ ಪ್ರಭಾಸ್​ ಕೂಡ ಸಲಾರ್​ ಈ ವರ್ಷವೇ ಬರಲಿ ಅಂತ ಒತ್ತಡನೂ ಹಾಕ್ತಿಲ್ಲ. ಸಲಾರ್ ನಾವು ನೀವು ಅಂದುಕೊಂಡಂತೆ ಈಸಿಯಾಗಂತೂ ರೆಡಿ ಆಗ್ತಿಲ್ಲ. ಹತ್ತು ಹಲವು ವಿಘ್ನಗಳನ್ನ ಮೀರಿ, ಸವಾಲುಗಳನ್ನ ಮೆಟ್ಟಿ ತಯಾರಾಗ್ತಿದೆ. ಅಲ್ಟಿಮೇಟ್​ ಆಗಿ ಒಳ್ಳೆ ಚಿತ್ರ ಕೊಡಬೇಕು ಅನ್ನೋದು ಚಿತ್ರತಂಡದ ಉದ್ದೇಶ. ಇದು ಒಳ್ಳೆ ಸಿನಿಮಾ ಆಗಬೇಕು ಅನ್ನೋದು ಅಭಿಮಾನಿ ದೇವರುಗಳ ಆಶಯ. ಲೇಟ್​ ಆದ್ರೂ ಗ್ರೇಟ್​ ಆಗಿ ಬರಲಿ ಅನ್ನೋದಷ್ಟೇ ನಿರೀಕ್ಷೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಲಾರ್ ಪೋಸ್ಟ್​ ಪ್ರೊಡಕ್ಷನ್ ಲೇಟ್​ ಯಾಕೆ?; ಸೆಕೆಂಡ್​ ಹಾಫ್ ರೀ-ಶೂಟ್​ ಮಾಡ್ತಾರಾ ಪ್ರಶಾಂತ್ ನೀಲ್?

https://newsfirstlive.com/wp-content/uploads/2023/09/salaar-1.jpg

Load More