newsfirstkannada.com

ಒಂದೇ 1 ದಿನದಲ್ಲಿ KGF- 2, ಆದಿಪುರುಷ್ ರೆಕಾರ್ಡ್​ ಬ್ರೇಕ್ ಮಾಡಿದ ಸಲಾರ್​.. ಏನದು ಪ್ರಭಾಸ್​ ದಾಖಲೆ?​

Share :

Published July 7, 2023 at 10:53am

    ರಾಕಿಂಗ್​ ಸ್ಟಾರ್​ ಯಶ್​ರನ್ನು ಹಿಂದಿಕ್ಕಿದ ಬಾಹುಬಲಿ ಪ್ರಭಾಸ್

    ಒಂದೇ ಒಂದು ದಿನದಲ್ಲಿ ಎಷ್ಟು ಮಿಲಿಯನ್ ವೀವ್ಸೂ ಕಂಡಿದೆ?

    ಟೀಸರ್​ನಲ್ಲೂ ಈ ರೀತಿ ದಾಖಲೆಯಾದ್ರೆ ಇನ್ನೂ ಸಿನಿಮಾ ಕಥೆ!

ಸ್ಯಾಂಡಲ್​ವುಡ್​ನ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಭಾಸ್​ ಜೊತೆ ಸಲಾರ್ ಮೂವಿ ಮಾಡುತ್ತಿದ್ದು ಈ ಸಿನಿಮಾ ಸೆಪ್ಟೆಂಬರ್​ 28 ರಂದು ವಿಶ್ವದಾದ್ಯಂತ ಬೆಳ್ಳಿ ತೆರೆಗೆ ಅಪ್ಪಳಿಸಿದೆ. ನಿನ್ನೆ ರಿಲೀಸ್​ ಮಾಡಲಾಗಿದ್ದ ಸಲಾರ್​ ಮೂವಿಯ ಟೀಸರ್​ ಭಾರೀ ಸಂಚಲನವನ್ನು ಮೂಡಿಸಿದೆ. ಕೇವಲ ಟೀಸರ್​ನಿಂದಲೇ ರೆಕಾರ್ಡ್​ವೊಂದನ್ನು ಬ್ರೇಕ್​ ಮಾಡಿ ಅಗ್ರ ಸ್ಥಾನವನ್ನು ಪ್ರಭಾಸ್ ಪಡೆದುಕೊಂಡಿದ್ದಾರೆ.

ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಲಾರ್ ಫುಲ್ ಹವಾ ಕ್ರಿಯೇಟ್ ಮಾಡಿದೆ. ನಿನ್ನೆ ರಿಲೀಸ್​ ಆಗಿದ್ದ ಟೀಸರ್​ ಕೇವಲ ಒಂದು ದಿನ ಅಂದರೆ 24 ಗಂಟೆಗಳಲ್ಲಿ ಬರೋಬ್ಬರಿ 83 ಮೀಲಿಯನ್​ಗೂ ಅಧಿಕ ವೀವ್ಸೂ ಕಂಡಿದೆ. ಇದರಿಂದ ಈ ಹಿಂದಿದ್ದ ದಾಖಲೆಗಳನ್ನು ಉಡೀಸ್​ ಮಾಡಿದೆ.

ಇದನ್ನು ಓದಿ: ಸೆನ್ಸೇಷನ್​​ ಕ್ರಿಯೇಟ್​​ ಮಾಡಿದ ಒಂದು ಫೋಟೋ; ರಮ್ಯಾ ವಿರುದ್ಧ ಫ್ಯಾನ್ಸ್​​ ಕೆಂಡಾಮಂಡಲ

ಪ್ರಶಾಂತ್​ ನೀಲ್​ ಮತ್ತು ಯಶ್​ ಕಾಂಬಿನೇಷನ್​ನಲ್ಲಿ ಈ ಮೊದಲು ಬಂದಿದ್ದ KGF- 2ನ ಟೀಸರ್​ ಒಂದು ದಿನದಲ್ಲಿ (24 ಗಂಟೆ) 68.83 ಮಿಲಿಯನ್ಸ್​ ವೀಕ್ಷಣೆಯಾಗಿತ್ತು. ಈ ವರ್ಷದ ವರೆಗೂ KGF- 2 ಮೊದಲ ಸ್ಥಾನದಲ್ಲಿತ್ತು. ಮೊನ್ನೆ ಮೊನ್ನೆ ರೀಲಿಸ್​ ಆಗಿದ್ದ ಪ್ರಭಾಸ್​ ಅಭಿನಯದ ಆದಿಪುರುಷ್​ ಸಿನಿಮಾ ಒಂದು ದಿನದಲ್ಲಿ 69 ಮಿಲಿಯನ್ಸ್​ ವೀವ್ಯೂ ಆಗಿ KGF- 2ನ ರೆಕಾರ್ಡ್​ ಅನ್ನು ಬ್ರೇಕ್​ ಮಾಡಿತ್ತು. ನಿನ್ನೆ ರಿಲೀಸ್​ ಆದ ಸಲಾರ್​ ಈ ಎರಡು ಸಿನಿಮಾದ ದಾಖಲೆಗಳನ್ನು ಹಿಂದಿಕ್ಕಿ ಅಗ್ರ ಸ್ಥಾನ ಪಡೆದುಕೊಂಡಿದೆ. ಒಂದೇ ಒಂದು ದಿನದಲ್ಲಿ ಸಲಾರ್ ಟೀಸರ್​ 83 ಮೀಲಿಯನ್​ಗೂ ಅಧಿಕ ವೀವ್ಸೂ ಕಂಡಿದೆ. ಇಡೀ ಭಾರತದಲ್ಲೇ ಅತೀ ಹೆಚ್ಚು ವೀಕ್ಷಣೆ ಮಾಡಿರುವ ಟೀಸರ್​ ಎನ್ನುವ ದಾಖಲೆ ಸಲಾರ್​ ಮೂವಿ ಪಡೆದುಕೊಂಡಿದೆ ಎನ್ನಲಾಗಿದೆ.

ಸಲಾರ್​ ಸಿನಿಮಾ ಭಾಗ- 1, ಭಾಗ- 2 ಎಂದು ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕೆ ಚಿತ್ರತಂಡ ಭಾಗ-1 ರ ಟೀಸರ್​ ರಿಲೀಸ್​ ಮಾಡಿದೆ. ಸೆಪ್ಟೆಂಬರ್​ 28 ರಂದು ಸಲಾರ್​ ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಈ ಸಿನಿಮಾದಲ್ಲಿ ಪ್ರಭಾಸ್​ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡಿದ್ರೆ ಪ್ರಭಾಸ್​ಗೆ ಜೋಡಿಯಾಗಿ ಬ್ಯೂಟಿ ಶ್ರುತಿ ಹಾಸನ್​ ನಟಿಸಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್, ತೆಲುಗಿನ ಜಗಪತಿಬಾಬು ಸೇರಿದಂತೆ ಪ್ರಮುಖರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಒಂದೇ 1 ದಿನದಲ್ಲಿ KGF- 2, ಆದಿಪುರುಷ್ ರೆಕಾರ್ಡ್​ ಬ್ರೇಕ್ ಮಾಡಿದ ಸಲಾರ್​.. ಏನದು ಪ್ರಭಾಸ್​ ದಾಖಲೆ?​

https://newsfirstlive.com/wp-content/uploads/2023/07/PRABHAS_YASH_AADIPURUSH.jpg

Load More