ಡಾರ್ಲಿಂಗ್ ಪ್ರಭಾಸ್ ಬಹುನಿರೀಕ್ಷಿತ ಆದಿಪುರುಷ ವಿಶ್ವಾದ್ಯಂತ ರಿಲೀಸ್
5 ಭಾಷೆಗಳಲ್ಲಿ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದ 'ಆದಿಪುರುಷ' ಸಿನಿಮಾ
ಸಿನಿಮಾದಲ್ಲಿ 'ಸೀತಾ ಭಾರತದ ಮಗಳು' ಡೈಲಾಗ್‌ಗೆ ಸೆನ್ಸಾರ್ ಬಿದ್ದಿದ್ದೇಕೆ?
ಡಾರ್ಲಿಂಗ್ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ’ ಇಂದು ದೇಶಾದ್ಯಂತ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದೆ. ಆದಿಪುರುಷ ಚಿತ್ರವು ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಹುಟ್ಟಿಸಿದ್ದ ಹಾಗೂ ಕಳಪೆ ಗ್ರಾಫಿಕ್ಸ್ ಹೀಗೆ ಹತ್ತಾರು ವಿವಾದಾತ್ಮಕ ವಿಷಯಗಳಿಂದ ಸುದ್ದಿಯಲ್ಲಿದ್ದ ಈ ಸಿನಿಮಾವು ಸುಮಾರು 7000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದೆ.
ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ರಾವಣ ಪಾತ್ರದಲ್ಲಿ ಸೈಫ್ ಅಲಿಖಾನ್ ಅವರು ಅಭಿನಯಿಸಿದ್ದಾರೆ. ಶ್ರೀರಾಮನ ಪತ್ನಿ ಸೀತೆಯ ಪಾತ್ರದಲ್ಲಿ ನಟಿ ಕೃತಿ ಸನೋನ್ ನಟಿಸಿದ್ದಾರೆ. ಈ ಚಿತ್ರವು ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಒಟ್ಟು 5 ಭಾಷೆಗಳಲ್ಲಿ ತೆರೆ ಕಂಡಿದೆ. ಇನ್ನು, ಈ ಸಿನಿಮಾವನ್ನು ನೋಡಿದ ಕೆಲ ಅಭಿಮಾನಿಗಳು ಚಿತ್ರ ಚನ್ನಾಗಿದೆ ಎಂದು ಉತ್ತಮ ಪ್ರತಿಕ್ರಿಯೆ ನೀಡಿದ್ದರೆ, ಇನ್ನು ಕೆಲವರು ಕಳಪೆ ಮಟ್ಟದ ಚಿತ್ರ ಇದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಆದಿಪುರುಷ ಚಿತ್ರದಲ್ಲಿ ‘ಸೀತಾ ಭಾರತದ ಮಗಳು’ ಎಂದು ಡೈಲಾಗ್ ಇತ್ತು. ಈ ಡೈಲಾಗ್ ಇದ್ದಿದ್ದಕ್ಕೆ ಆದಿಪುರುಷ ಚಿತ್ರವನ್ನು ನೇಪಾಳದ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡುವುದಿಲ್ಲ ಎಂದು ಕಠ್ಮಂಡು ಮೇಯರ್ ಬಲೇನ್ ಎಂಬುವವರು ಹೇಳಿದ್ದರು. ಬಳಿಕ ಈ ಚಿತ್ರದಲ್ಲಿ ‘ಸೀತಾ ಭಾರತದ ಮಗಳು’ ಸಂಭಾಷಣೆಯನ್ನು ಕಟ್ ಮಾಡಿ ಚಿತ್ರವನ್ನು ರಿಲೀಸ್ ಮಾಡಲಾಗಿದೆ.
ಕಳೆದ ವರ್ಷ ಈ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಟೀಸರ್ ಹಾಗೂ ಟ್ರೈಲರ್ ನೋಡಿದ ಫ್ಯಾನ್ಸ್ ಕಳಪೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಪೌರಾಣಿಕ ಸಿನಿಮಾವನ್ನು ನೋಡಿದ ಸಿನಿ ಪ್ರೇಕ್ಷಕರ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಚಿತ್ರವು ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ. ಇದೀಗ ಆದಿಪುರುಷ ಚಿತ್ರವು ರಿಲೀಸ್ ಆದ ಮೊದಲ ದಿನ ಎಷ್ಟು ಕೋಟಿ ಗಳಿಕೆ ಮಾಡಬಹುದು ಎಂದು ಕಾದುನೋಡಬೇಕಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ