newsfirstkannada.com

×

ದಾಖಲೆ ಬರೆದ ಸಲಾರ್​ ಟೀಸರ್​​.. ಪ್ರಭಾಸ್ ಹೊಸ ಸಿನಿಮಾದ ಟ್ರೈಲರ್​​ ಯಾವಾಗ ಗೊತ್ತಾ..?​​​

Share :

Published July 8, 2023 at 6:26pm

    ಸಲಾರ್ ಸಿನಿಮಾದ ಟ್ರೈಲರ್​ ಬಿಡುಗಡೆ​ ಯಾವಾಗ ಗೊತ್ತಾ?

    ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್..!​

    100 ಮಿಲಿಯನ್ ವೀಕ್ಷಣೆ ಕಂಡಿರುವುದಕ್ಕೆ ಹೊಂಬಾಳೆ ಓಲೆ​

ಡಾರ್ಲಿಂಗ್​ ಪ್ರಭಾಸ್​ ಹಾಗೂ ಸ್ಯಾಂಡಲ್​ವುಡ್​ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್​ ಕಾಂಬಿನೇಷನ್​ನಲ್ಲಿ ಸಲಾರ್ ಚಿತ್ರ ಬರುತ್ತಿರುವುದು ಗೊತ್ತಿರುವ ಸಂಗತಿ. ಮೊನ್ನೇ ಅಂದರೆ ಜುಲೈ 6ರಂದು ಈ ಸಿನಿಮಾದ ಟೀಸರ್​ ಅನ್ನು ಬೆಳ್ಳಂಬೆಳಗ್ಗೆ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯದ 3 ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ವೀವ್ಸೂ ಕಂಡಿತ್ತು. ಸದ್ಯ ಸಲಾರ್​ ಟೀಸರ್​ ಬಿಡುಗಡೆಯಾಗಿ ಎರಡು ದಿನ ಕಳೆದರು ಇನ್ನು ಸದ್ದು ಮಾಡುತ್ತಿದೆ. ಇಲ್ಲಿಗೆ ಬರೋಬ್ಬರಿ 10 ಕೋಟಿಗೂ ಅಧಿಕ ವೀಕ್ಷಣೆಯನ್ನು ಕಂಡು ದಾಖಲೆ ಬರೆದಿದೆ.

ಈ ಬಗ್ಗೆ ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಟ್ವಿಟರ್​ನಲ್ಲಿ ಪತ್ರವನ್ನು ಪೋಸ್ಟ್​ ಮಾಡಿ ಅಭಿಮಾನಿಗಳಿಗೆಲ್ಲ ಧನ್ಯವಾದ ತಿಳಿಸಿದೆ. ಸಲಾರ್ ಟೀಸರ್​ 100 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿರುವುದು ಖುಷಿಯಾಗಿದೆ. ಸಿನಿಮಾ ಪ್ರೇಮಿಗಳ ಅಭಿಮಾನಕ್ಕೆ ಹೃದಯ ತುಂಬಿ ಧನ್ಯವಾದ. ನಿಮ್ಮ ಬೆಂಬಲಕ್ಕೆ ನಾವು ಸದಾ ಋಣಿಗಳು ಎಂದಿದೆ. ಇಲ್ಲಿವರೆಗೆ 10,21,64,515 ಜನ ಯು ಟ್ಯೂಬ್​ ಮೂಲಕ ಸಲಾರ್​ ಟೀಸರ್ ಅನ್ನು ನೋಡಿದ್ದಾರೆ. ​

ಟ್ರೈಲರ್ ಬಿಡುಗಡೆಯ ಗುಟ್ಟನ್ನ ಬಿಟ್ಟುಕೊಟ್ಟ ಚಿತ್ರತಂಡ. ಆಗಸ್ಟ್ ಕೊನೆಯಲ್ಲಿ ಸಲಾರ್ ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗುವುದು. ಕುತೂಹಲಕಾರಿ ರೋಮಾಂಚಕಾರಿ ಪಯಣವನ್ನು ಮುಂದುವರೆಸೋಣ. ಚರಿತ್ರೆ ನಿರ್ಮಿಸೋಣ ಹಾಗೂ ಭಾರತೀಯ ಸಿನಿಮಾದ ಸಾಮರ್ಥ್ಯವನ್ನು ಸಂಭ್ರಮಿಸೋಣ ಎಂದು ಹೊಂಬಾಳೆ ಸಂಸ್ಥೆ ಅಭಿಮಾನಿಗಳಿಗೆ ತಿಳಿಸಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ದಾಖಲೆ ಬರೆದ ಸಲಾರ್​ ಟೀಸರ್​​.. ಪ್ರಭಾಸ್ ಹೊಸ ಸಿನಿಮಾದ ಟ್ರೈಲರ್​​ ಯಾವಾಗ ಗೊತ್ತಾ..?​​​

https://newsfirstlive.com/wp-content/uploads/2023/07/PRABHAS_SALAAR-1.jpg

Load More