ಶಾಸಕರ ಬೆಂಬಲಿಗರು-ಕ್ರಷರ್ ಮಾಲೀಕರ ಜಟಾಪಟಿ
ಧೂಳು, ಬ್ಲಾಸ್ಟಿಂಗ್‌ನಿಂದ ಸುತ್ತಲಿನ ವಾತಾರಣ ಮಾಲಿನ್ಯ
ಮತ್ತೊಂದು ಮಹತ್ವದ ಹೆಜ್ಜೆ ಇಡಲು ಸಜ್ಜಾದ ಪ್ರದೀಪ್ ಈಶ್ವರ್!
ಬಿಜೆಪಿ ಮಾಜಿ ಸಚಿವ ಡಾ. ಸುಧಾಕರ್ ವಿರುದ್ಧ ತೊಡೆ ತಟ್ಟಿ ಗೆದ್ದವರು ಶಾಸಕ ಪ್ರದೀಪ್ ಈಶ್ವರ್. ಇದೀಗ ಚಿಕ್ಕಬಳ್ಳಾಪುರ ಕೈ ಶಾಸಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮ್ಮ ತಮ್ಮ ಕ್ಷೇತ್ರದಲ್ಲಿರೋ ಸ್ಟೋನ್ ಕ್ರಷರ್‌ಗಳ ವಿರುದ್ಧ ಸಮರ ಸಾರಿದ್ದಾರೆ. ಕ್ರಷರ್‌ಗಳನ್ನು ಮುಚ್ಚಿಸಲು ಪ್ರದೀಪ್ ಈಶ್ವರ್ ಹೋರಾಟ ನಡೆಸಿದ್ದಾರೆ.
ಒಂದಲ್ಲಾ ಎರಡಲ್ಲಾ ಬರೋಬ್ಬರಿ 70ಕ್ಕೂ ಹೆಚ್ಚು ಸ್ಟೋನ್ ಕ್ರಷರ್‌ಗಳು, ನೂರಾಕ್ಕೂ ಹೆಚ್ಚು ಕಲ್ಲುಕ್ವಾರಿಗಳು. ಎಲ್ಲೆಲ್ಲೂ ಧೂಳೋ ಧೂಳು. ಭೂ ತಾಯಿಯ ಒಡಲನ್ನು ಅಗೆದು ಬಗೆದು ಹಾಳು ಮಾಡ್ತಿರೋ ಸ್ಟೋನ್ ಕ್ರಷರ್ಸ್ ಮಾಲೀಕರು. ಇದು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿ ಸ್ಟೋನ್ ಕ್ರಷರ್ ಮಾಡ್ತಿರೋ ಆರ್ಭಟ. ಹೀಗಾಗಿ ಶಾಸಕರ ಪ್ರದೀಪ್ ಈಶ್ವರ್ ಕಲ್ಲು ಕ್ವಾರಿ, ಕ್ರಷರ್‌ಗಳ ವಿರುದ್ಧ ಸಮರ ಸಾರಿದ್ದಾರೆ.
ಸ್ಟೋನ್ ಕ್ರಷರ್‌ಗಳ ವಿರುದ್ಧ ಪ್ರದೀಪ್ ಈಶ್ವರ್ ಸಮರ
ಶಾಸಕರ ಬೆಂಬಲಿಗರು-ಕ್ರಷರ್ ಮಾಲೀಕರ ಜಟಾಪಟಿ
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಬಳಿಯ ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಪರ್ ಜೋನ್‍ವೊಂದರಲ್ಲಿ 42 ಸ್ಟೋನ್ ಕ್ರಷರ್‌ಗಳಿವೆ. ಅವುಗಳಿಂದ ಉತ್ಪತ್ತಿಯಾಗುವ ಧೂಳು, ಶಬ್ದ, ಕೆಟ್ಟ ಸ್ಮೆಲ್, ಬ್ಲಾಸ್ಟಿಂಗ್‌ನಿಂದ ಸುತ್ತಮುತ್ತಲ ಪರಿಸರ ಮಾಲಿನ್ಯವಾಗ್ತಿದೆ. ಅಷ್ಟೇ ಅಲ್ಲ ಇಲ್ಲಿರೋ ಸ್ಟೋನ್ ಕ್ರಷರ್‌ಗಳು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ್ದಾರಂತೆ. ಹೀಗಾಗಿ ಸ್ಟೋನ್ ಕ್ರಷರ್‌ಗಳನ್ನು ಬಂದ್ ಮಾಡುವಂತೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ರು. ಕ್ರಷರ್‌ಗಳಿಗೆ ನುಗ್ಗಿ ಟಿಪ್ಪರ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ, ಪ್ರದೀಪ್ ಈಶ್ವರ್ ಬೆಂಬಲಿಗರ ಹೋರಾಟಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮಣಿದಿದ್ರು. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿಯಲ್ಲಿರುವ ಯಲಗಲಹಳ್ಳಿ ಕಲ್ಲುಪುಡಿ ಘಟಕಗಳ ಸೇಪರ್ ಜೋನ್‌ನಲ್ಲಿನ ಕ್ರಷರ್‌ಗಳನ್ನು ಕೆಲ ದಿನಗಳ ಕಾಲ ಬಂದ್ ಮಾಡಿಸಿದ್ದರು.
ಒಂದು ಟಿಪ್ಪರ್ ಸಹ ರಸ್ತೆಗೆ ಇಳಿಯದಂತೆ ಕ್ರಮ ಕೈಗೊಂಡಿದ್ರು. ಆದ್ರೆ ಕೊನೆಗೆ ಈಗ ಮತ್ತೆ ಕ್ರಷರ್‌ಗಳು, ಕ್ವಾರಿಗಳು ಆರಂಭವಾಗಿವೆ. ಈ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಮತ್ತೆ ಕಿಡಿಕಾರಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಆದೆನ್ನಗಾರಹಳ್ಳಿ, ಬುಶೆಟ್ಟಿಹಳ್ಳಿ, ಪೆರೇಸಂದ್ರ, ಹಳೇಪೆರೇಸಂದ್ರ, ಶೆಟ್ಟಿವಾರಹಳ್ಳಿ, ಹೂವಿನವಾರಹಳ್ಳಿ, ಮುತ್ತುಕದಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗಣಿಗಾರಿಕೆಯಿಂದ ಬರುವ ಧೂಳಿನಿಂದ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಹೀಗಾಗಿ ಇಲ್ಲಿನ ಕ್ರಷರ್‌ಗಳನ್ನ ನಿಲ್ಲಿಸಿ ಪರಿಸರ ಉಳಿಸಿ ಅನ್ನೋದು ಶಾಸಕರು, ಇಲ್ಲಿರೋ ಜನರ ಆಗ್ರಹ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ