‘ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತಿದ್ರಿ ಅನ್ಸುತ್ತೆ, ಆದರೆ..’
‘ಇಂತವರೆಲ್ಲ ಸಂಸದರಾಗುತ್ತಾರಲ್ಲ ಅದೇ ಬೇಜಾರು’
‘ಈ ಸಂಸದರಿಗೆ ಏನಾಗಿದೆ? ತಲೆಗಿಲೆ ಕೆಟ್ಟಿದ್ಯಾ?’ -ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ‘ಪ್ರತಾಪ್ ಸಿಂಹ ಅವರೇ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸಾಹೇಬರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡ್ತೀರಿ. ಸ್ವಲ್ಪ ಬಾಯಿ ಮುಚ್ಚಿಕೊಂಡು ಇರಬೇಕು. ನಮಗೂ ಮಾತನಾಡಲು ಬರುತ್ತದೆ, ಅಷ್ಟು ಮತನಾಡೋದಿದ್ರೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಬಹಿರಂಗವಾಗಿ ಸವಾಲ್ ಹಾಕಿದ್ದಾರೆ.
ಈ ಸಂಸದರಿಗೆ ಏನಾಗಿದೆ?
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರದೀಪ್ ಈಶ್ವರ್.. ‘ಮಾನ್ಯ ಮೈಸೂರು ಸಂಸದರಾದ ಪ್ರತಾಪ್ ಸಿಂಹ ಅವರೇ, ನೀವು ಪತ್ರಕರ್ತರಾಗಿದ್ದಾಗ ಸ್ವಲ್ಪ ಓದುತ್ತ ಇದ್ದೀರಿ ಅನ್ಸುತ್ತೆ. ಸಂಸದರಾದ ಮೇಲೆ ತಾವು ಓದುವುದನ್ನು ಬಿಟ್ಟಿದ್ದೀರಿ. ಮೊನ್ನೆ ಹೇಳಿದ್ದೀರಿ, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಗೋಡಾನ್ ಇದ್ದ ಹಾಗೆ ಅಂತಾ. ಈ ಸಂಸದರಿಗೆ ಏನಾಗಿದೆ? ತಲೆಗಿಲೆ ಕೆಟ್ಟಿದ್ಯಾ?’
ಇದು ವಾಸ್ತವ
‘ಸಂಸದರೆ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ 1965, ಜನವರಿ 14 ರಂದು ಸ್ಥಾಪನೆಯಾಗಿದೆ. ಐದು ಜೋನಲ್ ಆಫೀಸ್, 25 ರಿಜಿನಲ್, 175 ಡಿಸ್ಟ್ರಿಕ್ ಆಫೀಸ್ ಇದೆ. ಅದಕ್ಕೊಬ್ಬರು ಐಎಎಸ್ ಆಫೀಸರ್ಸ್ ಇರುತ್ತಾರೆ. ಅದರ ವೆಬ್ಸೈಟ್ನಲ್ಲಿ ಬರೆಯಲಾಗಿದೆ. ಏನೆಂದರೆ ಶೇಕಡಾ 12 ರಿಂದ 15 ರಷ್ಟು ದೇಶದಲ್ಲಿ ಬೆಳೆಯುವ ಅಕ್ಕಿಯನ್ನು ಶೇಖರಣೆ ಮಾಡಿ, ಶೇಕಡಾ 15 ರಿಂದ ಶೇಕಡಾ 19 ರಷ್ಟು ಗೋದಿಯನ್ನು ಶೇಖರಣೆ ಮಾಡಿ ರಾಜ್ಯ ಮತ್ತು ಬಡವರಿಗೆ ತಲುಪಿಸೋವುದು ಅವರ ಜವಾಬ್ದಾರಿ. ಅದೇ ರೀತಿಯೇ ನಾವು ಅವರಿಗೆ ಪತ್ರ ಬರೆದು ಅಕ್ಕಿ ಕೊಡುವಂತೆ ಕೇಳಿಕೊಂಡಿದ್ದೇವು. ಇದು ವಾಸ್ತವ.’
ನಿಮ್ಮ ವೈಯಕ್ತಿಕ ಸಾಧನೆ ಹೇಳಿ
ಆದರೆ ಇವರು, FCI ಅಕ್ಕಿಯನ್ನು ಕೊಡಲ್ಲ ಅಂತಾರೆ. ಇಂತವರೆಲ್ಲ ಸಂಸದರಾಗುತ್ತಾರಲ್ಲ, ಅದೇ ಬೇಜಾರುತ್ತದೆ. ಸಿದ್ದರಾಮಯ್ಯ, ಎಂಬಿ ಪಾಟೀಲ್ ಅವರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಪ್ರತಾಪ್ ಸಿಂಹ ಅವರೇ, ಬಾಯಿ ಮುಚ್ಚಿಕೊಂಡು ಇರಬೇಕು. ನಮಗೂ ಮಾತನಾಡಲು ಬರುತ್ತದೆ. ನಿಮಗೆ ಮತನಾಡಲು ಬಂದರೆ ತಾಖತ್ತಿದ್ದರೆ ಬಹಿರಂಗವಾಗಿ ಚರ್ಚೆಗೆ ಬನ್ನಿ. ನಿಮ್ಮ ವೈಯಕ್ತಿಕ ವರ್ಚಸ್ಸಿನಲ್ಲಿ ಗೆಲ್ಲಲು ಆಗಿದ್ಯಾ? ಮಾನ್ಯ ಪ್ರಧಾನಿ ಹೆಸರಲ್ಲಿ ಎರಡು ಬಾರಿ ಗೆದ್ದಿದ್ದೀರಿ. ನಿಮ್ಮ ವೈಯಕ್ತಿಕ ಸಾಧನೆ ಏನು ಅನ್ನೋದು ಸಾರ್ವಜನಿಕವಾಗಿ ಬಂದು ಹೇಳಿ ಅಂತಾ ಸವಾಲ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ