newsfirstkannada.com

Video: ಶಂಕರ್​ ನಾಗ್​ ಸ್ಟೈಲ್​​ನಲ್ಲಿ ಪ್ರದೀಪ್ ಈಶ್ವರ್​.. ಆಟೋ ಚಾಲಕರ ಸಮಸ್ಯೆ ಆಲಿಸಿ ಪ್ರತಿಯೊಬ್ಬರ ಕೈಗೂ 5000 ರೂ. ನೀಡಿದ ಶಾಸಕ..!

Share :

30-07-2023

    ಪ್ರದೀಪ್ ಈಶ್ವರ್ ಆಟೋ ಓಡಿಸಿದ ವಿಡಿಯೋ ಇಲ್ಲಿದೆ

    ಪ್ರದೀಪ್ ಈಶ್ವರ್ ಆಟೋ ರಾಜನಾಗಿದ್ದು ಯಾಕೆ ಗೊತ್ತಾ?

    ಆಟೋ ಚಾಲಕರ ಬದುಕಿಗೆ ಆಸರೆಯಾದ ಶಾಸಕ ಪ್ರದೀಪ್

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಇವತ್ತು ಆಟೋ ರಾಜನಾಗಿ ಕಾಣಿಸಿಕೊಂಡರು. ದಿವಂಗತ ಶಂಕರ್ ​​ನಾಗ್ ಸ್ಟೈಲ್​​ನಲ್ಲಿ ಆಟೋ ಏರಿ, ಸುದ್ದಿಯಾದರು.

ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಟೋ ಚಾಲಕರಿಗೆ ಧನಸಹಾಯ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ಆಟೋ ಚಾಲಕರ ಬಟ್ಟೆ ಧರಿಸಿ ಡ್ರೈವ್ ಮಾಡಿ ಗಮನ ಸೆಳೆದರು.

ನಿಮ್ಮೆಲ್ಲರ ಪ್ರೀತಿ ನನ್ನ ಮೇಲೆ ಇರಲಿ. ನನ್ನ ಸ್ನೇಹಿತ ಕೂಡ ಆಟೋ ಇಟ್ಟುಕೊಂಡಿದ್ದ. ಆಟೋ ಡ್ರೈವರ್​​ಗಳ ಜೀವನ ನನಗೆ ಗೊತ್ತು. ಕಷ್ಟ ಬಂದಾಗ ನನ್ನನ್ನು ನೆನಪಿಸಿಕೊಳ್ಳಿ. ನಾನು ಯಾವುದೇ ಚುನಾವಣೆ ಗಿಮಿಕ್ ಮಾಡುತ್ತಿಲ್ಲ. ನಿಮ್ಮ ಕಷ್ಟಕ್ಕೆ ನಾನು ಸದಾ ಇದ್ದೇನೆ- ಪ್ರದೀಪ್ ಈಶ್ವರ್, ಶಾಸಕ

ನಂತರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಲ್ಲಾ ಆಟೋ ಚಾಲಕರಿಗೆ 5 ಸಾವಿರ ರೂಪಾಯಿಗಳ ಸಹಾಯಧನ ನೀಡಿದರು. ಸಹಾಯ ಮಾಡಿ ಮಾತನಾಡಿದ ಪ್ರದೀಪ್ ಈಶ್ವರ್, ತಾವು ನೀಡಿರುವ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಿ. ಅಥವಾ ಯಾವುದೇ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಜೊತೆಗೆ ಇದೇ ರೀತಿ ಪ್ರತಿ ವರ್ಷವೂ ಆಟೋ ಚಾಲಕರಿಗೆ ತಮ್ಮ ಕೈಯಲ್ಲಿ ಆದ ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಶಂಕರ್​ ನಾಗ್​ ಸ್ಟೈಲ್​​ನಲ್ಲಿ ಪ್ರದೀಪ್ ಈಶ್ವರ್​.. ಆಟೋ ಚಾಲಕರ ಸಮಸ್ಯೆ ಆಲಿಸಿ ಪ್ರತಿಯೊಬ್ಬರ ಕೈಗೂ 5000 ರೂ. ನೀಡಿದ ಶಾಸಕ..!

https://newsfirstlive.com/wp-content/uploads/2023/07/PradeepEshwar.jpg

Load More