newsfirstkannada.com

‘ನನ್ನಂತವರಿಗೆ ಅನ್ನ ದೇವರು’- ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಪ್ರದೀಪ್ ಈಶ್ವರ್​​​​

Share :

13-07-2023

    'ನಿಮಗೆ ಅಕ್ಕಿ ರೇಷನ್​​, ನನ್ನಂತವರಿಗೆ ದೇವರು'

    'ಸಿಎಂ ಸಿದ್ದರಾಮಯ್ಯಗೆ ಹಸಿವಿನ ಬೆಲೆ ಗೊತ್ತು'

    ಅನ್ನಭಾಗ್ಯವನ್ನು ಹೊಗಳಿದ ಪ್ರದೀಪ್ ಈಶ್ವರ್​​!

ಬೆಂಗಳೂರು: ಶ್ರೀಮಂತರಿಗೆ ಅಕ್ಕಿ ಕೇವಲ ಪಡಿತರ, ನನ್ನಂತಹ ಕೋಟ್ಯಾಂತರ ಬಡವರ ಪಾಲಿಗೆ ಅಕ್ಕಿ ಎಂದರೆ ದೇವರು ಎಂದು ಕಾಂಗ್ರೆಸ್​ ಶಾಸಕ ಪ್ರದೀಪ್​​ ಈಶ್ವರ್​​​​ ಹೇಳಿದ್ದಾರೆ. ವಿಧಾನಸಭಾ ಕಲಾಪದಲ್ಲಿ ಮಾತಾಡಿದ ಈಶ್ವರ್ ಪ್ರದೀಪ್​​​, ಅನ್ನಭಾಗ್ಯ ಜಾರಿ ಮಾಡಿದ ಸಿಎಂಗೆ ಅಭಿನಂದನೆಗಳು. ಬಡವರ ಮಕ್ಕಳು ವಿಧಾನಸೌಧಕ್ಕೆ ಬರಲು ಸಂವಿಧಾನ ಪ್ರಮುಖ ಕಾರಣ. ಕಾಂಗ್ರೆಸ್​ ನನ್ನಂತ ಬಡವರ ಮಗನನ್ನು ವಿಧಾನಸೌಧಕ್ಕೆ ಕಳುಹಿಸಿದೆ ಎಂದರು.

ಇಂಗ್ಲಿಷ್ ಇರೋದೇ ತಪ್ಪು ಮಾತಾಡಲು, ಕನ್ನಡ ಇರುವುದು ಸರಿಯಾಗಿ ಮಾತನಾಡಲು. ಅನ್ನಭಾಗ್ಯ ವಿರೋಧ ಪಕ್ಷಗಳಿಗೆ ರೇಷನ್, ನನಗೆ ಮಾತ್ರ ಅನ್ನ ದೇವರು. ಸಿದ್ದರಾಮನಹುಂಡಿಯಲ್ಲಿ ಹುಟ್ಟಿದ ಸಿದ್ದರಾಮಯ್ಯಗೆ ಹಸಿವಿನ ಬೆಲೆ ಗೊತ್ತಿದೆ. ಅದಕ್ಕಾಗಿ ಅನ್ನಭಾಗ್ಯ ತಂದಿದ್ದಾರೆ ಎಂದರು.

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಎಂದ ಶಾಸಕ

ಗೃಹಜ್ಯೋತಿ ಕೇವಲ ಮನೆಯಲ್ಲ, ಕೋಟ್ಯಾಂತರ ಬಡ ಮಕ್ಕಳ ಭವಿಷ್ಯ ಬೆಳಗುತ್ತಿದೆ. ಮಕ್ಕಳು ಲೇಟ್​​​ ನೈಟ್​ವರೆಗೂ ಓದಲು ಸಹಾಯಕ ಮಾಡಲಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಉತ್ತಮ ಚಿಕಿತ್ಸೆ ಇಲ್ಲದ ಕಾರಣ ನನ್ನ ತಂದೆ ತಾಯಿಯನ್ನು ಕಳೆದುಕೊಂಡೆ. ಸರ್ಕಾರಿ ಆಸ್ಪತ್ರೆ ಚಿಕಿತ್ಸಾ ಗುಣಮಟ್ಟ ಹೆಚ್ಚಿಸಬೇಕು. ಯಾರ ಜೀವಕ್ಕೂ ತೊಂದರೆ ಆಗಬಾರದು. ಪೋಷಕರನ್ನು ಕಳೆದುಕೊಂಡ ನನ್ನಂತವರ ಸ್ಥಿತಿ ಯಾರಿಗೂ ಬರಬಾರದು ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನಂತವರಿಗೆ ಅನ್ನ ದೇವರು’- ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಪ್ರದೀಪ್ ಈಶ್ವರ್​​​​

https://newsfirstlive.com/wp-content/uploads/2023/07/Pradeep-Eshwar_Congress.jpg

Load More