ಆಟೋ ಚಾಲಕರಿಗೆ 5,000 ರೂ. ಕೊಟ್ಟ ಪ್ರದೀಪ್ ಈಶ್ವರ್
ಸರ್ಕಾರಿ ಶಾಲಾ ಮಕ್ಕಳಿಗೆ ಹಬ್ಬಕ್ಕೆ ಬಟ್ಟೆ ಕೊಡಿಸುವೆ ಎಂದ್ರು
ಬಟ್ಟೆ ಮಾತ್ರವಲ್ಲ ವಿದ್ಯಾರ್ಥಿ ವೇತನದ ಭರವಸೆಯೂ ಕೊಟ್ರು!
ಚಿಕ್ಕಬಳ್ಳಾಪುರ: ಇಂದು ಚಿಕ್ಕಬಳ್ಳಾಪುರದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ 5,000 ರೂ. ಧನ ಸಹಾಯ ಮಾಡಿದ ಬಳಿಕ ವೇದಿಕೆ ಮೇಲೆ ಮಾತಾಡಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮತ್ತೊಂದು ಭರವಸೆ ನೀಡಿದರು. ಸರ್ಕಾರಿ ಶಾಲೆಯಲ್ಲಿ ಓದುತ್ತಿರೋ ಮಕ್ಕಳಿಗೆ ವಿದ್ಯಾರ್ಥಿ ವೇತನದ ಜತೆ ಬಟ್ಟೆಯೂ ಕೊಡಿಸುವುದಾಗಿ ಘೋಷಿಸಿದರು.
ಆಟೋ ಚಾಲಕರಿಗೆ ಕೇವಲ 5,000 ರೂ. ಕೊಟ್ಟಿದ್ದೇನೆ ಎಂದು ಭಾವಿಸಬೇಡಿ. ನನಗೆ 5,000 ರೂ. ಬೆಲೆ ಗೊತ್ತಿದೆ. ನನ್ನ ತಂದೆ, ತಾಯಿ ಕೇವಲ 5,000 ಇಲ್ಲದೆ ವಿಷ ಕುಡಿದಿದ್ದರು. ಇದರ ಬಗ್ಗೆ ನನಗೆ ಬಹಳ ಚೆನ್ನಾಗಿ ಗೊತ್ತಿದೆ ಎಂದರು.
ಗಣಪತಿ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೇನೆ ಎಂದ ಪ್ರದೀಪ್ ಈಶ್ವರ್
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಕೇವಲ ವಿದ್ಯಾರ್ಥಿ ವೇತನ ಮಾತ್ರವಲ್ಲ ಗಣಪತಿ ಹಬ್ಬಕ್ಕೆ ಬಟ್ಟೆ ಕೊಡಿಸುತ್ತೇನೆ. ನಿಮ್ಮ ಪರವಾಗಿ ನಾನಿದ್ದೇನೆ. ಚಿಕ್ಕಬಳ್ಳಾಪುರದಲ್ಲಿ 400 ಹಳ್ಳಿಗಳು ಇವೆ. ಆರು ತಿಂಗಳಿಗೆ ಒಮ್ಮೆ ಪ್ರತಿಯೊಬ್ಬರ ಮನೆಗೆ ಭೇಟಿ ಕೊಡುತ್ತೇನೆ. 4 ವರ್ಷ 11 ತಿಂಗಳು ನನಗೆ ಸಪೋರ್ಟ್ ಮಾಡಿ, ಇನ್ನೊಂದು ತಿಂಗಳು ಮಾತ್ರ ಯಾರೊಂದಿಗೆ ಬೇಕಾದರೂ ಇರಿ. ನನಗೆ ವೋಟ್ ಮಾಡಿ ಎಂದು ನಾನು ಕೇಳುವುದಿಲ್ಲ ಎಂದರು.
ನಾನು ಆಟೋ ಚಾಲಕರಿಗೆ ನೀಡಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿ. ಇದೇ ರೀತಿ ಪ್ರತಿ ವರ್ಷ ಆಟೋ ಚಾಲಕರಿಗೆ ನನ್ನ ಕೈಯಲ್ಲಿ ಆದ ಸಹಾಯ ಮಾಡುವೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ