newsfirstkannada.com

ಚಂದ್ರನಲ್ಲಿರುವ 8 ಖನಿಜಾಂಶಗಳನ್ನು ಪತ್ತೆ ಹಚ್ಚಿದ ಪ್ರಗ್ಯಾನ್​.. ಇಲ್ಲಿ ಮಾನವ ಜೀವಿಸೋದಕ್ಕೆ ನಿಜವಾಗ್ಲೂ ಸಾಧ್ಯನಾ?

Share :

Published August 30, 2023 at 6:53am

    ಚಂದ್ರನ ದಕ್ಷಿಣ ಧ್ರುವದಲ್ಲಿ ಖನಿಜಗಳು ಇರುವಿಕೆ ಪತ್ತೆ

    ಹೈಡ್ರೋಜನ್​ಗಾಗಿ ರೋವರ್ ಹುಡುಕಾಟ ಶುರು

    ಸುಲ್ತಾನಂತೆ ಅಖಾಡಕ್ಕಿಳಿದಿರೋ ಪ್ರಗ್ಯಾನ್

ಅಲ್ಲೇನಾಗ್ತಿದೆ ಯಾರಿಗೂ ಗೊತ್ತಿಲ್ಲ. ಆ ಜಾಗದಲ್ಲಿ ಏನಿದೆ ಅನ್ನೋದು ಇಡೀ ಜಗತ್ತಿಗೆ ನಿಗೂಢ. ಅಂತದ್ದೊಂದು ಕೌತಕವನ್ನ ಜಗತ್ತಿನ ಮುಂದೆ ತೆರೆದಿಡೋದಕ್ಕೆ ಇಸ್ರೋ ಶುರು ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿನ ಚಕ್ರವ್ಯೂಹವನ್ನ ಬೇಧಿಸೋದಕ್ಕೆ ಜೋಡೆತ್ತು ಶುರುಮಾಡಿದೆ. ಸುಲ್ತಾನಂತೆ ಅಖಾಡಕ್ಕಿಳಿದಿರೋ ಪ್ರಗ್ಯಾನ್, ಖನಿಂಜಾಶಗಳ ಕೋಟೆಯನ್ನ ಕಂಡುಹಿಡಿದಿದೆ.

ಪ್ರಗ್ಯಾನ್ ಅನ್ನೋ ಸುಲ್ತಾನ. ವಿಕ್ರಮ್ ಅನ್ನೋ ರಣಧೀರ. ಚಂದ್ರನ ಮೇಲೆ ತಮ್ಮದೇ ಚರಿತ್ರೆ ಸೃಷ್ಟಿಸ್ತಿವೆ. ಚಂದ್ರನ ಮೇಲೆ ಬೇರೆ ರಾಷ್ಟ್ರಗಳೂ ಕಾಲಿಟ್ಟಿದ್ದರೂ, ಆ ದಕ್ಷಿಣ ಧ್ರುವ ಅನ್ನೋ ನರಾಚಿಯ ಕತ್ತಲನ್ನ ಬೇಧಿಸೋ ಧೈರ್ಯ ಯಾರೂ ಮಾಡಿರಲಿಲ್ಲ. ಆದ್ರೀಗ ಆ ನಿಗೂಢ ಸೌತ್ ಪೋಲ್​ನಲ್ಲಿ ಇಸ್ರೋ ಕಳಿಸಿರೋ ಜೋಡತ್ತುಗಳು ಕಾರ್ಯಚರಣೆ ಶುರುಮಾಡಿಯಾಗಿದೆ. ಪ್ರಗ್ಯಾನ್ ಅಂತೂ ತೂಫಾನ್​ನಂತೆ ಮುನ್ನುಗ್ತಿದೆ.

ಸಿಡಿಲ ಕಿಚ್ಚಿನಂತೆ ಚಂದ್ರನಗಳದಲ್ಲಿ ಮುನ್ನುಗ್ತಿರೋ ಪ್ರಗ್ಯಾನ್, ಆಳದ ಕುಳಿಗಳಿಂದ ತಪ್ಪಿಸಿಕೊಂಡು, ರಹಸ್ಯಗಳನ್ನ ಬೇಧಿಸೋದಕ್ಕೆ ಶುರು ಮಾಡಿದೆ. ಒಂದೊಂದೇ ಒಳಸತ್ಯಗಳನ್ನ ಹೊರಗೆಳೆಯಲು ಶುರು ಮಾಡಿರೋ ರೋವರ್ ಖನಿಂಜಾಶಗಳ ಕೋಟೆಯನ್ನೂ ಕಂಡುಹಿಡಿದಿದೆ.

ಚಂದ್ರಯಾನ-3ನಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು

ಚಂದ್ರಯಾನ-3ರ ಮೂಲಕ ಬಾಹ್ಯಾಕಾಶ ಸಾಧನೆಯಲ್ಲಿ ತನ್ನದೇ ಮೈಲಿಗಲ್ಲು ನೆಟ್ಟಿರೋ ಇಸ್ರೋ ಮತ್ತೊಂದು ಮಹತ್ವದ ಅನ್ವೇಷಣೆಗೆ ಸಾಕ್ಷಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಖನಿಜಗಳು ಇರುವಿಕೆ ಪತ್ತೆ ಹಚ್ಚಿದೆ. ಈ ಮೂಲಕ ಇಡೀ ಜಗತ್ತನ್ನೇ ಮತ್ತೆ ತನ್ನತ್ತ ನೋಡುವಂತೆ ಮಾಡಿದೆ ಇಸ್ರೋ..

ಪ್ರಗ್ಯಾನ್ ಕಂಡ ಖನಿಜಾಂಶಗಳು!
ಸಲ್ಫರ್(S)
ಅಲ್ಯೂಮಿನಿಯಂ(AI)
ಕ್ಯಾಲ್ಸಿಯಂ(Ca)
ಐರನ್(Fe)
ಟೈಟಾನಿಯಂ(Ti)
ಮ್ಯಾಂಗನೀಸ್(Mn)
ಸಿಲಿಕಾನ್‌(Si)
ಕ್ರೋಮಿಯಂ (Cr)

ಚಂದ್ರನ ಮೇಲ್ಮೈ ಮೇಲೆ ಸಲ್ಫರ್ ಇರೋದು ದೃಢವಾಗಿದೆ. ಈ ಬಗ್ಗೆ ರೋವರ್ ಸಂದೇಶ ಕಳಿಸಿದೆ. ಇದರ ಹೊರತಾಗಿ ಹಲವೂ ಖನಿಜಾಂಶಗಳು ಪತ್ತೆಯಾಗಿವೆ. ಅಲ್ಯೂಮಿನಿಯಂ ಕೂಡ ಇದೆ ಅಂತಾ ಪ್ರಗ್ಯಾನ್ ಪತ್ತೆ ಹಚ್ಚಿದೆ. ಕ್ಯಾಲ್ಶಿಯಂ ಇರೋದು ಕೂಡ ಧೃಡವಾಗಿದ್ದು, ಇದರ ಜೊತೆ ಜೊತೆಗೆ ಐರನ್ ಅಂಶಗಳೂ ಕೂಡ ಚಂದಿರನ ಅಂಗಳದಲ್ಲಿ ಇರೋದು ಪತ್ತೆಯಾಗಿದೆ.ಇಷ್ಟು ಮಾತ್ರವಲ್ಲದೇ ಮೂನ್​ನ ಮೇಲ್ಮೈ ಮೇಲೆ ಟೈಟಾನಿಯಂ ಇದೆ ಅನ್ನೋದನ್ನೂ ಪ್ರಗ್ಯಾನ್​ ಬಹಿರಂಗಪಡಿಸಿದ್ದಾನೆ. ವಿಶೇಷ ಅಂದ್ರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಮ್ಯಾಂಗನೀಸ್​ನ ಅಂಶ ಇದೆ ಅನ್ನೋದು ಕೂಡ ಗೊತ್ತಾಗಿದೆ. ಇನ್ನು, ಸಿಲಿಕಾನ್ ಹಾಗೂ ಕ್ರೋಮಿಯಂ ಕೂಡ ಇದೆ ಅನ್ನೋದನ್ನೂ ಪ್ರಗ್ಯಾನ್ ರೋವರ್ ಕಂಡು ಹಿಡಿದಿದೆ.

ಚಂದ್ರನ ಮೇಲೆ ‘ಆಕ್ಸಿಜನ್’ ಹುಡುಕಿದ ಭಾರತ

ಮಾನವ ಜೀವಿಸೋದಕ್ಕೆ ಅತ್ಯಗತ್ಯವಾಗಿರೋ ಆಮ್ಲಜನಕ ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಇರೋದು ಧೃಡಪಟ್ಟಿದೆ. ಹೀಗಾಗಿ ಈ ಅಧ್ಯಯನ ಮಾನವನ ಭವಿಷ್ಯ ರೂಪಿಸುವಲ್ಲಿ ಮಹತ್ವದ ಜವಬ್ದಾರಿ ವಹಿಸೋದು ಪಕ್ಕಾ ಎನ್ನಲಾಗ್ತಿದೆ. ಸದ್ಯ, ಹೈಡ್ರೋಜನ್​ಗಾಗಿ ಹುಡುಕಾಟ ಮುಂದುವರಿದಿದ್ದು, ಚಂದ್ರನ ಮೇಲ್ಮೈ ಮೇಲೆ ವೈಜ್ಞಾನಿಕ ಅಧ್ಯಯನ ಕಂಟಿನ್ಯೂ ಆಗಿದೆ.

ಪ್ರಗ್ಯಾನ್ ರೋವರ್ ತನ್ನಲ್ಲಿರೋ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಮೂಲಕ ಖನಿಜಾಂಶಗಳನ್ನ ಪತ್ತೆ ಹಚ್ಚಿದೆ. ಇಸ್ರೋ ಸಂಸ್ಥೆಯ ಈ ಅಧ್ಯಯನ ಮಹತ್ವದ ತಿರುವು ಅಂತಲೇ ಬಣ್ಣಿಸಲಾಗ್ತಿದೆ. ಯಾಕಂದ್ರೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸೋದೇ ಸವಾಲಿನ ಕೆಲಸವಾಗಿತ್ತು. ಆದ್ರೀಗ ಭಾರತ ಆ ಭಾಗದಲ್ಲಿ ವಿಕ್ರಮ್ ಹಾಗೂ ಪ್ರಗ್ಯಾನ್ ಇಳಿಸೋದ್ರ ಜೊತೆಜೊತೆಗೆ ಪ್ರಮುಖ ಅಧ್ಯಯನದ ಮೂಲಕ ಚಂದ್ರನ ರಹಸ್ಯಗಳ ಬೇಟೆಯಾಡ್ತಿದೆ. ಇದು ಆರಂಭವಷ್ಟೇ. ಯಾಕಂದ್ರೆ ಇನ್ನಷ್ಟು ಅಧ್ಯಯನ ಮಾಡೋದಕ್ಕೆ ರೋವರ್​ ಉತ್ಸುಕವಾಗಿದೆ. ಹೀಗಾಗಿ ಇನ್ನಷ್ಟು ರಹಸ್ಯಗಳು ಹೊರಬರೋದ್ರಲ್ಲಿ ಡೌಟೇ ಇಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನಲ್ಲಿರುವ 8 ಖನಿಜಾಂಶಗಳನ್ನು ಪತ್ತೆ ಹಚ್ಚಿದ ಪ್ರಗ್ಯಾನ್​.. ಇಲ್ಲಿ ಮಾನವ ಜೀವಿಸೋದಕ್ಕೆ ನಿಜವಾಗ್ಲೂ ಸಾಧ್ಯನಾ?

https://newsfirstlive.com/wp-content/uploads/2023/08/Isro-12.jpg

Load More