ಇದೇ ಮೊದಲ ಬಾರಿಗೆ ಇಸ್ರೋದಿಂದ ಅಚ್ಚರಿಯ ಕಾರ್ಯ
ಜಗತ್ತಿನ ಮುಂದೆ ಶಶಿಯ ರಹಸ್ಯಗಳ ಅನಾವರಣ
ತ್ರಿವರ್ಣ ಧ್ವಜದ ಗುರುತು ಹೊತ್ತು ಪ್ರಗ್ಯಾನ್ ಸಂಚಾರ
ಶಶಿಯ ಅಂಗಳಕ್ಕೆ ಎಂಟ್ರಿಕೊಟ್ಟಿರೋ ಭಾರತದ ವಿಕ್ರಮ ಆವಿಷ್ಕಾರಗಳ ಪರಾಕ್ರಮ ಮೆರೆಯಲ್ಲು ಅಣಿಯಾಗಿದ್ದಾನೆ. ವಿಕ್ರಮನ ಒಡಲಲ್ಲಿ ಅವಿತಿದ್ದ ಪ್ರಗ್ಯಾನ್ ರೋವರ್ ಹಿಮಕರನ ಮಡಿಲು ಸೇರಿದೆ. 14 ದಿನಗಳ ಸತ್ಯಾನ್ವೇಶಣೆಗೆ ಸೋಮನ ಮೇಲೆ ಪ್ರಗ್ಯಾನ್ ಪರ್ಯಟನೆ ಆರಂಭಿಸಿದೆ. ಗುರುವಾರ ಶಶಿಯ ಶಿಖರವೇರಿದ ವಿಕ್ರಮನಿಂದ ಬೇರ್ಪಟ್ಟ ಪ್ರಗ್ಯಾನ್ ರೋವರ್ನ ವಿಡಿಯೋವನ್ನ ಇಸ್ರೋ ಬಿಡುಗಡೆಗೊಳಿಸಿದೆ. ಭಾರತದ ತ್ರಿವರ್ಣ ಧ್ವಜದ ಗುರುತು ಹೊತ್ತು ಚಂದ್ರನಂಗಳ ಸ್ಪರ್ಶಿಸಿದ ಪ್ರಗ್ಯಾನ್ ದೃಶ್ಯಾವಳಿ ಮೈನವಿರೇಳಿಸುವಂತಿದೆ.
ಶಶಿಯ ಅಂಗಳದಲ್ಲಿ ‘ಪ್ರಗ್ಯಾನ್’ ಕಾರ್ಯಾರಂಭ!
ಸೋಮನ ಮೇಲ್ಮೈ ಮೇಲೆ ಸಂಚಲನ ಆರಂಭಿಸಿರೋ ಪ್ರಗ್ಯಾನ್ ರೋವರ್ ಕಾರ್ಯಪ್ರವೃತ್ತವಾಗಿದೆ. ಚಂದ್ರನ ಸ್ಪರ್ಶಿಸಿದ ಪ್ರಗ್ಯಾನ್ ರೋವರ್ ಭಾರತದ ಲಾಂಛನ ಮತ್ತು ಇಸ್ರೋದ ಲೋಗೋವನ್ನ ಶಶಿಗೆ ಹಚ್ಚೆ ಹಾಕಿದೆ.
ಜಗತ್ತಿನ ಮುಂದೆ ಚಂದ್ರಮನ ರಹಸ್ಯಗಳ ಅನಾವರಣ
ಚಂದ್ರಯಾನಕ್ಕೆ ಕೈಗೊಂಡ ಜಗತ್ತಿನ ದೈತ್ಯ ರಾಷ್ಟಗಳೇ ಮಾಡಲಾಗದ ಅಚ್ಚರಿಯ ಕೆಲಸಗಳನ್ನ ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ಮಾಡತೊಡಗಿದೆ. ಈ ಹಿಂದೆ ಶಶಿಯ ಮೇಲೆ ಸವಾರಿ ಮಾಡಿದ್ದ ರಷ್ಯಾದಂತ ಮುಂದುವರೆದ ರಾಷ್ಟ್ರಗಳೇ ತಂತ್ರಜ್ಞಾನದಲ್ಲಿ ಇಡಲಾಗದ ಮಹತ್ವದ ಹೆಜ್ಜೆಯನ್ನ ಭಾರತ ಇಟ್ಟಿದೆ. ಚಂದ್ರನ ಮೇಲೆ ತ್ರಿವಿಕ್ರಮ ಲ್ಯಾಂಡ್ ಆದ ಬಳಿಕ ಭೂಲೋಕವೇ ಅಚ್ಚರಿಪಡುವ ದೃಶ್ಯಾವಳಿಗಳನ್ನ ಸೆರೆಹಿಡಿದು ರವಾನೆ ಮಾಡತೊಡಗಿದೆ. ಪ್ರಗ್ಯಾನ್ನ ಚಲನವಲನಗಳ ಸ್ಪಷ್ಟ ಚಮತ್ಕಾರ ಚಿತ್ರಗಳನ್ನ ವಿಕ್ರಮ ಇಸ್ರೋದ ಮುಂದೆ ಅಚ್ಚೊತ್ತಿದ್ದಾನೆ. ಆದರೆ ಈ ಹಿಂದೆ ಚಂದ್ರಯಾನ ಕೈಗೊಂಡ ಯಾವ ದೇಶಗಳೂ ಇಂತದೊಂದು ಕೆಲಸ ಮಾಡದೇ ಇರೋದು ಭಾರತದ ತಂತ್ರಜ್ಞಾನದ ಬಲಿಷ್ಠತೆಯನ್ನ ಜಗತ್ತಿಗೆ ಸಾರಿ ಸಾರಿ ಹೇಳ್ತಿದೆ.
ಲ್ಯಾಂಡಿಂಗ್ ಸಕ್ಸಸ್ ಫುಲ್ ಆಯ್ತು ಇನ್ನಿರೋದು ಸವಾಲು!
ಹಿಮಕರನ ಮೇಲೆ ಸಂಚಾರ ಆರಂಭಿಸಿರೋ ಪ್ರಗ್ಯಾನ್ ರೋವರ್, ಮುಂದಿನ 14 ದಿನ ತನ್ನ ಸಂಶೋಧನಾ ಕಾರ್ಯಗಳನ್ನ ನಡೆಸಲಿದೆ. ಆದರೆ ಇದು ಅಷ್ಟು ಸುಲಭದ ಮಾತಲ್ಲ, ಯಾಕಂದ್ರೆ ವಿಕ್ರಮ್ ಲ್ಯಾಂಡರ್ನಿಂದ ಕೇವಲ 1 ಸೆಂಟಿಮೀಟರ್ ದೂರವಷ್ಟೇ ಪ್ರಗ್ಯಾನ್ ಸಂಚಾರ ನಡೆಸುತ್ತೆ. ಒಂದು ವೇಳೆ ರೋವರ್ ಮತ್ತಷ್ಟು ದೂರ ಸಂಚರಿಸಿದ್ರೆ ಸಂಪರ್ಕ ಕಳೆದುಕೊಳ್ಳುವ ಆತಂಕವೂ ಇದೆ. ಹೀಗಾಗಿ ಸೂಕ್ಷ್ಮಾತಿ ಸೂಕ್ಷ್ಮವಾಗಿ ರೋವರ್ ಕಾರ್ಯ ನಿರ್ವಹಿಸುವಂತೆ ಇಸ್ರೋ ಹಿಡಿತ ಸಾಧಿಸಬೇಕಿದೆ. ಅಲ್ಲದೇ ಭೂಮಿಯ ವಾತಾವರಣದ ಪರಿಸ್ಥಿತಿ ಚಂದ್ರನ ಮೇಲ್ಮೈ ಮೇಲೆ ಇಲ್ಲ. ಹೀಗಾಗಿ ಮುಂದಿನ 14 ದಿನಗಳ ಸಂಶೋಧನೆ ಇಸ್ರೋ ಪಾಲಿಗೆ ದೊಡ್ಡ ಸಾವಲೇ ಆಗಿದೆ ಅಂತ ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದಾರೆ.
ಲ್ಯಾಂಡರ್ ಫೋಟೋ ತೆಗೆದ ಚಂದ್ರಯಾನ 2 ಆರ್ಬಿಟರ್
ಚಂದ್ರಯಾನ-2ರ ಆರ್ಬಿಟರ್ ಹೈ ರೆಸಲ್ಯೂಷನ್ ಕ್ಯಾಮೆರಾದಿಂದ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಪೋಟೋ ಸೆರೆ ಹಿಡಿದೆ. ಚಂದ್ರಯಾನ-3 ರ ಲ್ಯಾಂಡರ್ ಲ್ಯಾಂಡಿಂಗ್ ಆದ ಬಳಿಕ ಕ್ಲಿಕ್ಕಿಸಿರೋ ಚಂದ್ರಯಾನ-2 ರ ಆರ್ಬಿಟರ್, ನಾನು ನಿಮ್ಮ ಮೇಲೆ ನಿಗಾ ಇಟ್ಟಿರ್ತೇನೆ ಅಂತ ಫೋಟೋ ಕಳುಹಿಸಿದೆ. ಇಸ್ರೋ ಟ್ವಿಟರ್ನಲ್ಲಿ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿದೆ.
ತ್ರಿ‘ವಿಕ್ರಮ’ನ ಮೇಲೆ ಹಿಡಿತ ಸಾಧಿಸಿದ್ದ ಕನ್ನಡಿಗ!
ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸೇಫ್ ಆಗಿ ಲ್ಯಾಂಡ್ ಆಗುವ ಕಾರ್ಯದಲ್ಲಿ ಕನ್ನಡಿಗ ಡಾ. ಬಿ.ಹೆಚ್.ಎಮ್ ದ್ವಾರಕೇಶ್ ಎಂಬುವರು ಕಾರ್ಯನಿರ್ವಹಿಸಿದ್ರು.
ಒಟ್ಟಿನಲ್ಲಿ ಚಂದ್ರನ ಮೇಲೆ ವಿಕ್ರಮನನ್ನ ಇಳಿಸಿದ್ದೇ ದೊಡ್ಡ ಸಾಧನೆಯಾದ್ರೆ, ಮುಂದಿನ 14 ದಿನಗಳ ಸಂಶೋಧನೆ ಸಹ ಇಸ್ರೋ ಪಾಲಿಗೆ ದೊಡ್ಡ ಸವಾಲಾಗಿದೆ. ಚಂದ್ರನ ಅಂಗಳದಲ್ಲಿ ಏನಿದೆ ಅನ್ನೋ ಅಚ್ಚರಿಯ ಸತ್ಯಗಳನ್ನ ಪ್ರಗ್ಯಾನ್ ಮುಂದಿನ ದಿನಗಳಲ್ಲಿ ಭೂಲೋಕದ ಮುಂದಿಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ