newsfirstkannada.com

Chandrayaan-3: ಸ್ಮೈಲ್ ಪ್ಲೀಸ್!! ವಿಕ್ರಮ್ ಲ್ಯಾಂಡರ್‌ನ ಮೊದಲ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್ ರೋವರ್

Share :

30-08-2023

    ಇಸ್ರೋದಿಂದ ಇಂದು ಬೆಳಗ್ಗೆ ಪ್ರಗ್ಯಾನ್ ತೆಗೆದ ಫೋಟೋ ಬಿಡುಗಡೆ

    ವಿಕ್ರಮ್ ಲ್ಯಾಂಡರ್‌ ಮೊದಲ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್ ರೋವರ್

    ಪ್ರಗ್ಯಾನ್ ರೋವರ್‌ನಲ್ಲಿರುವ ನೇವಿಗೇಶನ್ ಕ್ಯಾಮೆರಾದಿಂದ ಸೆರೆ

ಚಂದ್ರಯಾನ-3 ಮಿಷನ್ ಸಂಪೂರ್ಣವಾಗಿ ಇಸ್ರೋ ವಿಜ್ಞಾನಿಗಳು ಅಂದುಕೊಂಡಂತೆ ನಡೆಯುತ್ತಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್‌ ಆಗಿದಾಯ್ತು. ಲ್ಯಾಂಡರ್‌ನಿಂದ ಕೆಳಗಿಳಿದ ಪ್ರಗ್ಯಾನ್ ರೋವರ್ ಸಾರಾಗವಾಗಿ ತನ್ನ ಕೆಲಸವನ್ನು ಆರಂಭಿಸಿದೆ. ಪ್ರಗ್ಯಾನ್ ರೋವರ್ ಜೊತೆ ನಿರಂತರ ಸಂಪರ್ಕದಲ್ಲಿರುವ ಇಸ್ರೋ ವಿಜ್ಞಾನಿಗಳು ಕ್ಷಣ, ಕ್ಷಣದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇಂದು ಚಂದ್ರಯಾನ-3 ಮಿಷನ್‌ನಲ್ಲಿ ಪ್ರಗ್ಯಾನ್ ರೋವರ್ ತೆಗೆದ ಅಪರೂಪದ ಫೋಟೋವೊಂದನ್ನು ಇಸ್ರೋ ಶೇರ್ ಮಾಡಿದೆ.

ಇದನ್ನೂ ಓದಿ: ಪ್ರಗ್ಯಾನ್ ಅಸಲಿ ಆಟಕ್ಕೆ ಹತ್ತೇ ದಿನ ಬಾಕಿ; ಚಂದ್ರನ ಅಂಗಳದಲ್ಲಿ ಮುಖಾಮುಖಿ ಆಗುತ್ತಾ ಚೀನಾ, ಭಾರತ?

ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪ್ರಗ್ಯಾನ್ ರೋವರ್ ಬಹಳಷ್ಟು ಸಕ್ರಿಯವಾಗಿದೆ. ಇಂದು ಬೆಳಗ್ಗೆ ಪ್ರಗ್ಯಾನ್ ರೋವರ್ ಸ್ಮೈಲ್ ಪ್ಲೀಸ್ ಅಂತಾ ವಿಕ್ರಮ್ ಲ್ಯಾಂಡರ್‌ನ ಫೋಟೋವೊಂದನ್ನ ಕ್ಲಿಕ್ಕಿಸಿದೆ. ಪ್ರಗ್ಯಾನ್ ರೋವರ್‌ನಲ್ಲಿರುವ ನೇವಿಗೇಶನ್ ಕ್ಯಾಮೆರಾದಿಂದ ತೆಗೆದ ಪೋಟೋ ಇದಾಗಿದ್ದು, ಇಸ್ರೋಗೆ ರವಾನೆ ಮಾಡಿದೆ. ಲ್ಯಾಬೋರೇಟರಿ ಫಾರ್ ಎಲೆಕ್ಟ್ರೋ ಆಪ್ಟಿಕ್ಸ್ ಸಿಸ್ಟಮ್ಸ್‌ನಿಂದ ಈ ನೇವಿಗೇಶನ್ ಕ್ಯಾಮೆರಾವನ್ನು ಅಭಿವೃದ್ಧಿ ಮಾಡಲಾಗಿದೆ. ಪ್ರಗ್ಯಾನ್ ರೋವರ್ ಕಣ್ಣಿನಲ್ಲಿ ಕಂಡ ವಿಕ್ರಮ್ ಲ್ಯಾಂಡರ್ ಪೋಟೋವನ್ನು ಇಸ್ರೋ ಇಂದು ಬಿಡುಗಡೆ ಮಾಡಿದೆ.

ಇನ್ನು 9 ದಿನಗಳಷ್ಟೇ ಪ್ರಗ್ಯಾನ್ ಅಸಲಿ ಆಟ

ಚಂದ್ರನ ಮೇಲ್ಮೈ ಮೇಲೆ ಸಂಶೋಧನೆಗಿಳಿದಿರೋ ಪ್ರಗ್ಯಾನ್​ ರೋವರ್​ಗೆ ಇನ್ನು 9 ದಿನಗಳು ಮಾತ್ರ ಕಾಲಾವಕಾಶ ಇದೆ. 9 ದಿನಗಳ ಬಳಿಕ ಚಂದ್ರನಲ್ಲಿ ಕತ್ತಲು ಆವರಿಸೋದ್ರಿಂದ ಪ್ರಗ್ಯಾನ್ ರೋವರ್ ಸಂಶೋಧನೆಗೆ ಬ್ರೇಕ್​ ಬೀಳುವ ಸಾಧ್ಯತೆ ಇದೆ. ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಗ್ಯಾನ್​ ರೋವರ್​ ಕಾರ್ಯ ನಿರ್ವಹಿಸಲು ಸೂರ್ಯನ ಬೆಳಕು ಅತಿ ಮುಖ್ಯವಾಗಿದೆ. ಸೋಲಾರ್​ ಪ್ಲೇಟ್​ಗಳ ಸಹಾಯದಿಂದಲೇ ವಿಕ್ರಮ್​ ಮತ್ತು ಪ್ರಗ್ಯಾನ್​ ಕಾರ್ಯನಿರ್ವಹಿಸುತ್ತಿದೆ. ಮುಂದಿನ 9 ದಿನಗಳವರೆಗೆ ಮಾತ್ರ ಇದು ಸಾಧ್ಯವಾಗಲಿದೆ. ಬಳಿಕ ಚಂದ್ರನಲ್ಲಿ -200 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ತಾಪಮಾನ ಉಂಟಾಗೋದ್ರಿಂದ ವಿಕ್ರಮ್​ ಮತ್ತು ಪ್ರಗ್ಯಾನ್​ ನಿಷ್ಕ್ರಿಯಗೊಳ್ಳಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Chandrayaan-3: ಸ್ಮೈಲ್ ಪ್ಲೀಸ್!! ವಿಕ್ರಮ್ ಲ್ಯಾಂಡರ್‌ನ ಮೊದಲ ಫೋಟೋ ಕ್ಲಿಕ್ಕಿಸಿದ ಪ್ರಗ್ಯಾನ್ ರೋವರ್

https://newsfirstlive.com/wp-content/uploads/2023/08/Vikram-Lander-2.jpg

Load More