newsfirstkannada.com

ಲೋಕಸಭಾ ಸ್ಥಾನದಿಂದ ಅನರ್ಹ; ಕುತೂಹಲ ಮೂಡಿಸಿದ ಪ್ರಜ್ವಲ್​ ಮುಂದಿನ ನಡೆಯೇನು?

Share :

Published September 1, 2023 at 6:35pm

    ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅನರ್ಹ

    ಹೈಕೋರ್ಟ್​​ ವಿರುದ್ಧ ಸುಪ್ರೀಂಗೆ ಹೋಗ್ತಾರಾ ಪ್ರಜ್ವಲ್​ ರೇವಣ್ಣ!

    ಪ್ರಜ್ವಲ್​​ ರೇವಣ್ಣಗೆ ಕಾನೂನಿನಲ್ಲಿ ಇರೋ ಅವಕಾಶಗಳೇನು?

ಬೆಂಗಳೂರು: ಮಹತ್ವದ ಬೆಳವಣಿಗೆ ಒಂದರಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಮಾಜಿ ಸಚಿವ ಹೆಚ್.ಡಿ ರೇವಣ್ಣ ಬೇಸರ ಹೊರಹಾಕಿದ್ದಾರೆ. ಜತೆಗೆ ನಾವು ಹೈಕೋರ್ಟ್​ ತೀರ್ಪಿಗೆ ತಲೆ ಬಾಗುತ್ತೇವೆ ಎಂದಿದ್ದಾರೆ. ಇನ್ನೊಂದೆಡೆ ಈ ಬಗ್ಗೆ ರಿಯಾಕ್ಟ್​ ಮಾಡಲು ಪ್ರಜ್ವಲ್​​​ ರೇವಣ್ಣ ನಕಾರ ತೋರಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ದರು. ಈ ವೇಳೆ ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಮಾಡಿರೋ ಆರೋಪ ಪ್ರಜ್ವಲ್‌ ರೇವಣ್ಣ ವಿರುದ್ಧ ಕೇಳಿ ಬಂದಿತ್ತು. ಆದಾಯ ತೆರಿಗೆ ವಿವರಗಳ ಸಂಬಂಧ ನಕಲಿ ದಾಖಲೆ ಸಲ್ಲಿಸಿರೋ ಗಂಭೀರ ಆರೋಪ ಮಾಡಿದ್ದರು.

ಇನ್ನು, ಪ್ರಜ್ವಲ್‌ ಆಯ್ಕೆಯನ್ನು ಅಸಿಂಧು ಮಾಡಿ ಎಂದು ಹೈಕೋರ್ಟ್​​ನಲ್ಲಿ ಎ. ಮಂಜು ಮತ್ತು ದೇವರಾಜೇಗೌಡ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಮುಂದಿನ 6 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಂತೆ ಆದೇಶ ಹೊರಡಿಸಿದೆ. ಇತ್ತ ಪ್ರಜ್ವಲ್​​ ರೇವಣ್ಣ ಪರ ವಕೀಲರು ಹೈಕೋರ್ಟ್​​​ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಹೀಗಿರುವಾಗ ಪ್ರಜ್ವಲ್​ ರೇವಣ್ಣ ಮುಂದಿನ ನಡೆಯೇನು ಅನ್ನೋ ಕುತೂಹಲ ಮೂಡಿಸಿದೆ.

ಪ್ರಜ್ವಲ್​ ರೇವಣ್ಣ ಮುಂದಿನ ನಡೆಯೇನು..?

ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ. 6 ವರ್ಷ ಚುನಾವಣೆ ನಿಲ್ಲಬಾರದು ಎಂದು ಆದೇಶಿಸಲಾಗಿದೆ. ಆದೇಶ ಆದ ಕೂಡಲೇ ಮನವಿ ಮಾಡಬಹುದಿತ್ತು. 30 ದಿನಗಳ ಕಾಲ ಆದೇಶ ಅಮಾನತ್ತಿನಲ್ಲಿ ಇಡುವಂತೆ ಅರ್ಜಿ ಸಲ್ಲಿಸಬಹುದಿತ್ತು. ಆದರೆ ಪ್ರಜ್ವಲ್ ಪರ ವಕೀಲರು ಇಂದು ಮಾಡಲಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣ ಸುಪ್ರೀಂ ಮೊರೆ ಹೋಗಬೇಕು. ಮೊದಲು ಹೈಕೋರ್ಟ್ ಆದೇಶದ ಪ್ರತಿ ಪಡೆದುಕೊಳ್ಳಬೇಕು. ಅದರ ಮೇಲೆ ಮೇಲ್ಮನವಿ ಸಲ್ಲಿಕೆ ಮಾಡಬೇಕು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿ ಹೈಕೋರ್ಟ್ ಆದೇಶಕ್ಕೆ ರದ್ದು ಕೋರಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭಾ ಸ್ಥಾನದಿಂದ ಅನರ್ಹ; ಕುತೂಹಲ ಮೂಡಿಸಿದ ಪ್ರಜ್ವಲ್​ ಮುಂದಿನ ನಡೆಯೇನು?

https://newsfirstlive.com/wp-content/uploads/2023/09/prajavl-revanna-1.jpg

Load More