newsfirstkannada.com

ಕಾಂಗ್ರೆಸ್​ ಸೋಲಿಸಲು ಒಂದಾದ ಬಿಜೆಪಿ, ಜೆಡಿಎಸ್​​; ಈ ಬಗ್ಗೆ ಸಂಸದ ಪ್ರಜ್ವಲ್​​ ರೇವಣ್ಣ ಹೇಳಿದ್ದೇನು?

Share :

03-07-2023

    ಲೋಕಸಭಾ ಚುನಾವಣೆಗೆ ಜೆಡಿಎಸ್​​, ಬಿಜೆಪಿ ಮೈತ್ರಿ ವಿಚಾರ

    ಕಾಂಗ್ರೆಸ್​​ ಸೋಲಿಸಲು ಒಂದಾದ ಬಿಜೆಪಿ, ಜೆಡಿಎಸ್​​ ಪಕ್ಷಗಳು

    ಈ ಬಗ್ಗೆ ಹಾಸನ ಜೆಡಿಎಸ್​​ ಸಂಸದ ಪ್ರಜ್ವಲ್​​ ರೇವಣ್ಣ ಏನಂದ್ರು?

ಹಾಸನ: ಮುಂದಿನ ಲೋಕಸಭಾ ಚುನಾವಣೆಗೆ ಜೆಡಿಎಸ್​​​​​, ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಾ? ಎಂಬ ಪ್ರಶ್ನೆಗೆ ಸಂಸದ ಪ್ರಜ್ವಲ್​​ ರೇವಣ್ಣ ಮಾತಾಡಿದ್ದಾರೆ. ಈ ಸಂಬಂಧ ಮಾತಾಡಿದ ಪ್ರಜ್ವಲ್​​ ರೇವಣ್ಣ, ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಜೆಡಿಎಸ್​ ಹೋಗುವುದಿಲ್ಲ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಒಬ್ಬ ಜೆಡಿಎಸ್​​​ ಸಂಸದನಾಗಿ ಹೇಳುವುದಾದರೆ ನಾವು ಇಂಡಿಪೆಂಡೆಂಟ್​​ ಆಗಿ ಸ್ಪರ್ಧೆ ಮಾಡುತ್ತೇವೆ ಎಂದರು.

ಲೋಕಸಭಾ ಚುನಾವಣೆಗೆ ಒಂಭತ್ತು ತಿಂಗಳು ಇದೆ. ನಾನು ಎಲ್ಲಾ ಸಂದರ್ಭದಲ್ಲೂ‌ ಜನರ ಜೊತೆ ಇದ್ದವನೇ. ಕ್ಷೇತ್ರ ಬಿಟ್ಟು ಎಲ್ಲೂ ಹೋಗಿಲ್ಲ. ಕೋರ್ಟ್​​ ಕೇಸ್​ ಇತ್ತು ಎಂದು ಆರು ತಿಂಗಳು ಹೊರಗೆ ಇದ್ದೆ. ಆಗ ಬಿಟ್ಟರೆ ಮತ್ತೆ ಯಾವತ್ತು ಕ್ಷೇತ್ರ ಬಿಟ್ಟು ಹೋಗಿಲ್ಲ ಎಂದರು.

ಮೊದಲಿನಿಂದ ಜನರ ಒಡನಾಟ ಇಟ್ಟುಕೊಂಡು ಬೆಳೆದು ಬಂದವನು ನಾನು. ಸಂಸದನಾಗಿ ಇಡೀ ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡಿದ್ದೇನೆ. ನನ್ನ ಕೈಲಾದಷ್ಟು ಮಾಡಿದ್ದೇನೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಎಂಎಲ್​ಎ ಎಲೆಕ್ಷನ್​​ ರಿಸಲ್ಟ್​​ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲ್ಲ. ವಿಧಾನಸಭೆ, ಲೋಕಸಭೆ ಎರಡು ಬೇರೆ. ರೇವಣ್ಣ 47 ಸಾವಿರ ಓಟು ತೆಗೆದುಕೊಂಡಿದ್ದರು. ನಾನು 75 ಸಾವಿರ ತೆಗೆದುಕೊಂಡಿದ್ದೆ ಎಂದರು ಪ್ರಜ್ವಲ್​​ ರೇವಣ್ಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​ ಸೋಲಿಸಲು ಒಂದಾದ ಬಿಜೆಪಿ, ಜೆಡಿಎಸ್​​; ಈ ಬಗ್ಗೆ ಸಂಸದ ಪ್ರಜ್ವಲ್​​ ರೇವಣ್ಣ ಹೇಳಿದ್ದೇನು?

https://newsfirstlive.com/wp-content/uploads/2023/07/Prajwal-Revanna.jpg

Load More