newsfirstkannada.com

ನನ್ನ ಮಗಳು ಸಿನಿಮಾ ಇಂಡಸ್ಟ್ರಿಗೆ ಹೋದಾಗ ಭಯ ಆಗಿತ್ತು.. ದೀಪಿಕಾ ಪಡುಕೋಣೆ ತಂದೆ ಹೇಳಿದ್ದೇನು..?

Share :

22-06-2023

    ನ್ಯೂಸ್​ಫಸ್ಟ್​ ನಡೆಸಿದ ವಿಶೇಷ ಸಂದರ್ಶನದಲ್ಲಿ ದೀಪಿಕಾ ತಂದೆ ಮಾತು

    ಅತಿ ಹೆಚ್ಚು​ ಸಂಭಾವನೆ ತೆಗೆದುಕೊಳ್ಳೋ ನಟಿಯ ಲೈಫ್​ ಸ್ಟೈಲ್​ ಹೀಗಿದೆ!

    ದೀಪಿಕಾ ಪಡುಕೋಣೆ ಬಗ್ಗೆ ತಂದೆ ಪ್ರಕಾಶ್ ಪಡುಕೋಣೆ ಹೇಳಿದ್ದೇನು..?

ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್​ನ ನಂಬರ್ 1 ನಟಿ. ಅತಿ ಹೆಚ್ಚು​ ಸಂಭಾವನೆ ತೆಗೆದುಕೊಳ್ಳೋ ನಟಿ. ಆದ್ರೆ ದೀಪಿಕಾ ಬಾಲಿವುಡ್​ಗೆ ಹೋದಾಗ ಅವರ ತಂದೆಗೆ ಭಯ ಕಾಡಿತ್ತಂತೆ. ಇಂಡಸ್ಟ್ರಿ ಗೊತ್ತಿಲ್ಲ. ಹೊಸ ಜಾಗ ಏನೋ ಹೇಗೋ ಅನ್ನೋ ಟೆನ್ಷನ್ ಇತ್ತಂತೆ. ಈ ಬಗ್ಗೆ ಎಕ್ಸ್​ಕ್ಲೂಸಿವ್​ ಆಗಿ ಫಿಲ್ಮಿಫಸ್ಟ್​ ತಂಡದ ಜೊತೆ ಪ್ರಕಾಶ್ ಪಡುಕೋಣೆ ಮಾತಾಡಿದ್ದಾರೆ.

ಇನ್ನು, ದೀಪಿಕಾ ಪಡುಕೋಣೆ ತಮ್ಮ ಸಿನಿಮಾ ಜರ್ನಿ ಆರಂಭಿಸಿದ್ದೇ ಕನ್ನಡ ಇಂಡಸ್ಟ್ರಿಯಿಂದ. ಉಪೇಂದ್ರ ನಟನೆಯ ‘ಐಶ್ವರ್ಯ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮೊದಲ ಸಲ ನಾಯಕಿಯಾಗಿ ನಟಿಸಿದ್ರು. ಬಳಿಕ ಅಲ್ಲಿಂದ ಬಾಲಿವುಡ್​ ವಿಮಾನ​ ಹತ್ತಿದ ದೀಪಿಕಾ ಪಡುಕೋಣೆ ಈಗ ಇಡೀ ವಿಶ್ವವೇ ತನ್ನ ತಿರುಗಿ ನೋಡೋ ರೀತಿ ಬೆಳೆದು ನಿಂತಿದ್ದಾರೆ. ದೀಪಿಕಾ ಪಡುಕೋಣೆ ಬೆಂಗಳೂರಿಂದ ಬಾಲಿವುಡ್​ಗೆ ಹೋದಾಗ ಅವರ ತಂದೆ ಪ್ರಕಾಶ್ ಪಡುಕೋಣೆ ಅವರಿಗೆ ಭಯ ಕಾಡಿತ್ತಂತೆ. ಹೊಸ ಜಾಗ.. ಹೊಸ ಇಂಡಸ್ಟ್ರಿ ಏನೋ ಹೇಗೋ ಅನ್ನೋ ಆತಂಕ ಇತ್ತಂತೆ.. ಈ ಬಗ್ಗೆ ಸ್ವತಃ ಪ್ರಕಾಶ್ ಪಡುಕೋಣೆ ಹೇಳಿಕೊಂಡಿದ್ದಾರೆ.

ಮೊದಲನೇ ಸಿನಿಮಾ ಕನ್ನಡದಲ್ಲೇ ಮಾಡಿದ್ರು.. ಮೂಲತಃ ಕನ್ನಡದವರೇ. ಆದ್ರೆ ಬಾಲಿವುಡ್​ಗೆ ಹೋದ್ಮೇಲೆ ಬೇರೆ ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ. ದೀಪಿಕಾ ಪಡುಕೋಣೆ ಅವರನ್ನ ಮತ್ತೆ ಸ್ಯಾಂಡಲ್​ವುಡ್​ ಬೆಳ್ಳಿ ಪರದೆ ಮೇಲೆ ನೋಡ್ಬೇಕು ಅನ್ನೋದು ಬಹಳಷ್ಟು ಕನ್ನಡಿಗರ ಆಶಯ. ರಣವೀರ್​​ ಸಿಂಗ್ ಕೈ ಹಿಡಿದ ಮೇಲೆ ಗಂಡನ ಮನೆಯಲ್ಲಿ ಸೆಟಲ್ ಆಗಿರೋ ದೀಪಿಕಾ ಸಮಯ ಸಿಕ್ಕಾಗೆಲ್ಲಾ ತವರು ಮನೆಗೆ ಬಂದು ಹೋಗ್ತಾ ಇರ್ತಾರೆ. ಅಪ್ಪನ ಜೊತೆ ಬ್ಯಾಡ್ಮಿಟನ್​​​ ಆಡ್ತಿದ್ದ ದೀಪಿಕಾ ಪಡುಕೋಣೆಗೆ ಮಾಡೆಲಿಂಗ್ ಕ್ಷೇತ್ರವೇ ಮೊದಲ ಆಯ್ಕೆಯಾಗಿತ್ತು. ಇವತ್ತು ಮಾಡೆಲಿಂಗ್ ಜೊತೆಗೆ ಸಿನಿಮಾರಂಗದಲ್ಲಿ ದೊಡ್ಡ ಸ್ಟಾರ್​ ಆಗಿ ಬೆಳೆದಿದ್ದಾರೆ. ಕನ್ನಡದ ಹುಡುಗಿಯ ಈ ಸಕ್ಸಸ್​ ಯಾವಾಗಲೂ ಖುಷಿ ಕೊಡುತ್ತೆ. ಕೊನೆಯದಾಗಿ ಕನ್ನಡದಲ್ಲೀ ಆದಷ್ಟೂ ಬೇಗ ಸಿನಿಮಾ ಮಾಡುವಂತಾಗಲಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ನನ್ನ ಮಗಳು ಸಿನಿಮಾ ಇಂಡಸ್ಟ್ರಿಗೆ ಹೋದಾಗ ಭಯ ಆಗಿತ್ತು.. ದೀಪಿಕಾ ಪಡುಕೋಣೆ ತಂದೆ ಹೇಳಿದ್ದೇನು..?

https://newsfirstlive.com/wp-content/uploads/2023/06/deepika-5.jpg

Load More