/newsfirstlive-kannada/media/post_attachments/wp-content/uploads/2023/08/Prakash-Raj.jpg)
ಬೆಂಗಳೂರು: ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿ ನಡೆದಿದೆ. ಎರಡು ತಿಂಗಳ ಹಿಂದೆ ಜುಲೈ 14ನೇ ತಾರೀಕಿನಂದು ಆಂಧ್ರದ ಶ್ರೀಹರಿಕೋಟಾದಲ್ಲಿರೋ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಮಿಷನ್ ಯಶಸ್ವಿಯಾಗಿ ಟೇಕಾಫ್ ಆಗಿದೆ. ಇದು ಕೇವಲ ವಿಜ್ಞಾನಿಗಳು ಮಾತ್ರವಲ್ಲ ಇಡೀ ಭಾರತೀಯರು ಹೆಮ್ಮೆಪಟ್ಟ ಸಂದರ್ಭ.
ಇನ್ನು, ಒಂದೆಡೆ ಚಂದ್ರಯಾನ-3 ಬಗ್ಗೆ ಇಡೀ ದೇಶವೇ ಹೆಮ್ಮೆಪಡುತ್ತಿದೆ. ಮತ್ತೊಂದೆಡೆ ಚಂದ್ರಯಾನ-3 ಮಿಷನ್ ಬಗ್ಗೆ ಬಹುಭಾಷಾ ನಟ ಪ್ರಕಾಶ್​ ರಾಜ್​​ ವ್ಯಂಗ್ಯವಾಡಿದ್ದು, ಇವರ ಮಾಡಿದ ಟ್ವೀಟ್​ವೊಂದು ವೈರಲ್​ ಆಗಿತ್ತು. ವ್ಯಕ್ತಿಯೋರ್ವ ಟೀ ಮಾಡುವ ವ್ಯಕ್ತಿಯೋರ್ವನ ಫೋಟೋ ಪೋಸ್ಟ್​ ಮಾಡಿದ್ದರು. ಈಗಷ್ಟೇ ಚಂದ್ರಯಾನದಿಂದ ಬಂದ ಮೊದಲ ಫೋಟೋ ಎಂದು ಕ್ಯಾಪ್ಶನ್​​ ಕೊಟ್ಟಿದ್ದರು. ಈ ಟ್ವೀಟ್​ ವೈರಲ್​ ಆಗಿ ಜನ ಪ್ರಕಾಶ್​ ರಾಜ್​ ಅವರನ್ನು ಟ್ರೋಲ್​ ಮಾಡಿದ್ದರು. ಮೋದಿಯನ್ನು ಬೇಕಾದ್ರೆ ಟೀಕಿಸಿ, ದೇಶದ ವಿರುದ್ಧ ಯಾಕೆ ಟ್ವೀಟ್​ ಮಾಡುತ್ತೀರಿ? ಎಂದು ಪ್ರಶ್ನಿಸಿದ್ದರು. ಸಾವಿರಾರು ಜನ ಪ್ರಕಾಶ್​ ರಾಜ್​ಗೆ ಟ್ವಿಟರ್​ನಲ್ಲಿ ಕ್ಲಾಸ್​ ತೆಗೆದುಕೊಂಡಿದ್ದಾರೆ.
Hate sees only Hate.. i was referring to a joke of #Armstrong times .. celebrating our kerala Chaiwala .. which Chaiwala did the TROLLS see ?? .. if you dont get a joke then the joke is on you .. GROW UP #justaskinghttps://t.co/NFHkqJy532
— Prakash Raj (@prakashraaj) August 21, 2023
ಇನ್ನು, ಮತ್ತೆ ಈಗ ಟ್ವೀಟ್​ ಮಾಡಿರೋ ಪ್ರಕಾಶ್​ ರಾಜ್​​, ಟ್ರೋಲ್​ ಮಾಡಿದವರಿಗೆ ಕೌಂಟರ್​​ ಕೊಟ್ಟಿದ್ದಾರೆ. ದ್ವೇಷ ಮಾಡೋರಿಗೆ ದ್ವೇಷ ಮಾತ್ರ ಕಾಣಿಸುತ್ತದೆ. ನನ್ನ ಜೋಕ್​​​ ಆರ್ಮ್ಸ್ಟ್ರಾಂಗ್ ಕಾಲಕ್ಕೆ ಸಂಬಂಧಿಸಿದ್ದು. ನಮ್ಮ ಕೇರಳ ಚಾಯ್​ವಾಲಾ ಸಲೆಬ್ರೇಷನ್​ ಇದು. ನೀವು ನನ್ನನ್ನು ಟ್ರೋಲ್​ ಮಾಡಿದ್ರೆ ಯಾವ ಚಾಯ್​ವಾಲಾ ನೋಡ್ತಾರೆ. ನಿಮಗೆ ಇದು ಕೂಡ ಜೋಕ್​ ಅನಿಸಲಿಲ್ಲ ಅಂದರೆ ಈ ಜೋಕ್​ ನಾನು​ ನಿಮ್ಮ ಮೇಲೆ ಹಾಕಿದ್ದು ಎಂದರ್ಥ ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us