newsfirstkannada.com

‘ನಾನು ಹುಟ್ಟಿದ್ದು ನನ್ನಪ್ಪ ಅಮ್ಮನಿಗೆ, ಸನಾತನ ಧರ್ಮಕ್ಕಲ್ಲ’- ಗೌರಿ ಕಾರ್ಯಕ್ರಮದಲ್ಲಿ ಪ್ರಕಾಶ್​ ರಾಜ್​​..!

Share :

05-09-2023

  ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ 6 ವರ್ಷಗಳು

  ಹಿರಿಯ ಪತ್ರಕರ್ತೆ ನೆನಪಿನಲ್ಲಿ ಇಂದು ಕಾರ್ಯಕ್ರಮ

  ಬಹುಭಾಷಾ ನಟ ಪ್ರಕಾಶ್​ ರಾಜ್​ ಅವ್ರು ಹೇಳಿದ್ದೇನು?

ಬೆಂಗಳೂರು: ಸಾಮಾಜಿಕ ಹೋರಾಟಗಾರ್ತಿ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ 6 ವರ್ಷಗಳು. ಇವರ ನೆನಪಿನ ಅಂಗವಾಗಿ ಇಂದು ನಗರದ ಟೌನ್‌ಹಾಲ್‌ ಸಮೀಪದ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ನಾನು ಗೌರಿ, ನಾವೆಲ್ಲ ಗೌರಿ ಎಂಬ ಸಮಾವೇಶ ಆಯೋಜಿಸಲಾಗಿತ್ತು.

ಇನ್ನು, ಸಮಾವೇಶದಲ್ಲಿ ಮಾತಾಡಿದ ಬಹುಭಾಷಾ ನಟ ಪ್ರಕಾಶ್​ ರಾಜ್​​, ಗೌರಿ ಲಂಕೇಶ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದರು. ನಾನು ಸನಾತನಿ ಸಂಸತ್​ ಎಂದು ಟ್ವೀಟ್​ ಮಾಡಿದ್ದೆ. ಅದಕ್ಕೆ ನಿಮ್ಮದು ಸನಾತನ ಧರ್ಮ ಅಲ್ಲವೇ ಎಂದು ಕೇಳಿದ್ದರು. ಆಗ ನಾನು ಹುಟ್ಟಿದ್ದು ನನ್ನಪ್ಪ ಅಮ್ಮನಿಗೆ, ಸನಾತನ ಧರ್ಮಕ್ಕಲ್ಲ ಎಂದೆ ಎಂದರು.

ನಾನು ಹಿಂದೂ ಧರ್ಮದ ವಿರುದ್ಧ ಇಲ್ಲ. ನಾವು ಪ್ರಧಾನಿ ನರೇಂದ್ರ ಮೋದಿ ವಿರುದ್ಧ. ಏನು ಮಾಡೋದು ಮೋದಿ ನೂತನ ಸಂಸತ್​ ಭವನದ ಉದ್ಘಾಟನೆಗೆ ಹೋಮ ಹವನ ಮಾಡಿಸುತ್ತಾರೆ. ಸಂಸತ್​​ನಲ್ಲಿ ಹೋಮ ಹವನ ಮಾಡಿಸಬಾರದು. ಅದಕ್ಕೆ ಸನಾತನ ಸಂಸತ್​ ಎಂದು ಟ್ವೀಟ್​ ಮಾಡಿದ್ದೀನಿ ಎಂದು ವಿವರಣೆ ಕೊಟ್ಟರು.

ನಮ್ಮನ್ನ ಕೊಲ್ಲುತ್ತೇನೆ ಎನ್ನುವವರು ಹೇಡಿಗಳು. ಯಾವುದನ್ನೂ ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ, ಮೋದಿಯವರಿಂದ ಅದು ಆಗುತ್ತಿದೆ. ಅದಕ್ಕೆ ನಮ್ಮ ವಿರೋಧ ಇದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಾನು ಹುಟ್ಟಿದ್ದು ನನ್ನಪ್ಪ ಅಮ್ಮನಿಗೆ, ಸನಾತನ ಧರ್ಮಕ್ಕಲ್ಲ’- ಗೌರಿ ಕಾರ್ಯಕ್ರಮದಲ್ಲಿ ಪ್ರಕಾಶ್​ ರಾಜ್​​..!

https://newsfirstlive.com/wp-content/uploads/2023/09/Prakash-Raj_123.jpg

Load More