newsfirstkannada.com

‘ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು..’ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್​ ರಾಜ್​

Share :

11-09-2023

  ಪ್ರಪಂಚದ ಯಾವ ಧರ್ಮವೂ ಇನ್ನೂಬ್ಬನ ಕೊಲ್ಲೊಕೆ ಹೇಳೊದಿಲ್ಲ

  ವಿಶ್ವ ಗುರುಗಳು ಪಾರ್ಲಿಮೆಂಟ್​​ನಲ್ಲಿ ಹೋಮ ಮಾಡ್ತಾರಂತೆ

  ಚಂದ್ರಯಾನದ ಬಗ್ಗೆ ಒಬ್ಬ ನಟನ ಹಾಸ್ಯವನ್ನ ಪ್ರಶ್ನಿಸುತ್ತೀರಾ?

ಕಲಬುರಗಿ: ನಟ ಪ್ರಕಾಶ್ ರೈ ಸನಾತನ ಧರ್ಮದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುವ ಮೂಲಕ ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು ಸೇರಿಕೊಂಡಿದ್ದವಂತೆ ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ನಟ ಪ್ರಕಾಶ್ ರೈ, ಸನಾತನ ಅಂದ್ರೆ ಬದಲಾದದ್ದು ಕಾಲಾನು ಕಾಲಕ್ಕೆ. ಬದಲಾಗಲ್ಲ ನಾನು ಎನ್ನುವುದು ಈ ಪ್ರಕೃತಿಯ ಕ್ರಿಯೆಗೆ ವಿರುದ್ಧವೇ. ನಾನು ಬದಲಾಗೋದಿಲ್ಲ , ನಾನೇ ಶ್ರೇಷ್ಠ ನಾನೇ ಸತ್ಯ ಅಂತಾರೋ ಸುಳ್ಳು. ಪ್ರಪಂಚದ ಯಾವ ಧರ್ಮವೂ ಇನ್ನೂಬ್ಬನ ಕೊಲ್ಲೊಕೆ ಹೇಳೊದಿಲ್ಲ. ಅದನ್ನ ಉಪಯೋಗಿಸಿಕೊಂಡು ಇನ್ನೊಬ್ಬ ಕೊಲ್ತಾನೆ ಎಂದು ಹೇಳಿದ್ದಾರೆ.

ಯಾವ ಧರ್ಮ, ಧರ್ಮ ಮಾನವೀಯ ಧರ್ಮ ಅಸ್ಪ್ರಶ್ಯತೆ ಹೇಳುತ್ತಾ?. ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು ಸೇರಿಕೊಂಡಿದ್ದವಂತೆ. ಕಾಗೆಗಳು ಸೇರಿಕೊಂಡು ನಾವೇ ಜಾಸ್ತಿ ಇದ್ದಿವಿ ಕೋಗಿಲೆ, ನವೀಲು ನಮ್ಮ ಮಾತು ಕೇಳಬೇಕು ಅಂದ್ರೆ ಹೆಂಗೆ ?. ಕ್ರೌರ್ಯಕ್ಕೆ ಕರುಣೆ ಇಲ್ಲ , ಹಾಗಾಗಿ ಅದಕ್ಕೆ ಧರ್ಮ ಇಲ್ಲ. ಕರುಣೆ ಇಲ್ಲದ್ದು ಹೇಗೆ ಧರ್ಮ ಆಗುತ್ತೆ. ನಿನ್ನೆಯವರೆಗೂ ಹಿಂದುತ್ವ ಹಿಂದೂ ಧರ್ಮ ಅಂತಿದ್ದವರು ಸನಾತನ ಅಂತಿದ್ದಾರೆ ಎಂದಿದ್ದಾರೆ.

ಬಳಿಕ ಮಾತನಾಡಿದ ಪ್ರಕಾಶ್​ ರೈ, ನಮ್ಮ ವಿಶ್ವ ಗುರುಗಳು ಪಾರ್ಲಿಮೆಂಟ್​​ನಲ್ಲಿ ಹೋಮ ಮಾಡ್ತಾರಂತೆ ಅದನ್ನ ತಪ್ಪು ಅಂತಾ ಹೇಳಿದ್ದೀವಿ. ಪ್ರಜಾಪ್ರಭುತ್ವದಲ್ಲಿ ನಿನ್ನ ಮನೆಯಲ್ಲಿ, ದೇವಸ್ಥಾನದಲ್ಲಿ ಯಾವ ಹೋಮ ಬೇಕಾದ್ರು ಮಾಡಿಕೋ. ನಮ್ಮ ವಿರೋಧ ಇಲ್ಲ. 140 ಕೋಟಿ ಜನ ಇರುವ ಬೇರೆ ಬೇರೆ ಭಾಷೆ ಧರ್ಮ ಪಾಲಿಸುವ ಜನರು ಇದ್ದಾರೆ. ಪಾರ್ಲಿಮೆಂಟ್ ನ ಒಳಗಡೆ ನೀನು ಮಾಡೋದಕ್ಕೆ ಆಗೋದಿಲ್ಲ ಅಂತಾ ಉಗಿಬೇಕು.ಅದು ಧರ್ಮವೆ ಅಲ್ಲ , ಅಧರ್ಮ ಅದು. ತಪ್ಪು ಅಂತಾ ಹೇಳ್ತಿದ್ದೇವೆ ಎಂದಿದ್ದಾರೆ.

ಸುಳ್ಳು ಯಾರಿಗೂ ಹೇಳಿದ್ರು ಸುಳ್ಳು ತಾನೆ. ಚಂದ್ರಯಾನದ ಬಗ್ಗೆ ಒಬ್ಬ ನಟನ ಹಾಸ್ಯವನ್ನ ಪ್ರಶ್ನಿಸುತ್ತೀರಾ?. ಆದರೆ ನಿಮ್ಮ ದೇಶದ ಪ್ರಧಾನಿ ಹೇಳಿದ ಸುಳ್ಳು ಪ್ರಶ್ನಿಸುತ್ತೀರಾ ಯೋಚನೆ ಮಾಡಿ. ಸನಾತನ ಧರ್ಮ ದಾರಿ ತಪ್ಪಿಸೋದಕ್ಕೆ ತರ್ತಿದ್ದಾರೆ ಇವರು. ಧರ್ಮದಲ್ಲಿ ಆಯಾ ಕಾಲಕ್ಕೆ ಕೆಲವು ವಿಕೃತ ಮನುಷ್ಯರು ಬಂದು ತಮ್ಮ ಕೈಗೆ ತೆಗೆದುಕೊಳ್ಳುತ್ತಾರೆ. ತಮ್ಮ ಕೈಗೆ ತೆಗೆದುಕೊಂಡು ಅವರನ್ನ ಪ್ರಶ್ನೆ ಮಾಡದಂತೆ ಮಾಡ್ತಾರೆ. ಸನಾತನ ಧರ್ಮದ ಬಗ್ಗೆ ಹಿಂದೂತ್ವದ ಬಗ್ಗೆ ಮಾತಾಡುತ್ತಿರುವವರು ಯಾರು ಹಿಂದುಗಳೇ ಅಲ್ಲ. ಇವರು ಗುತ್ತಿಗೆ ತೆಗೆದುಕೊಂಡು ಬರ್ತಾರೆ ಆವಾಗ ನಾವು ಹೇಳಬೇಕು ಅಷ್ಟೆ. ಇವೆಲ್ಲವುಗಳು ರಾಜಕೀಯ ದುರುದ್ದೇಶ ಅಷ್ಟೆ, ಜನ ಅರ್ಥ ಮಾಡಿಕೊಳ್ಳಬೇಕು ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

ಚಂದ್ರನ ಮೇಲೆ ಉಪಗ್ರಹ ಹೊದ್ರೆ ಸೆಲೆಬ್ರೇಟ್ ಮಾಡ್ತಾರಂತೆ

ಅಮವಾಸ್ಯೆ ಅಂದ್ರೆ ಒಳ್ಳೆಯದಲ್ಲವಂತೆ, ಆದರೆ ಚಂದ್ರನ ಮೇಲೆ ಉಪಗ್ರಹ ಹೊದ್ರೆ ಸೆಲೆಬ್ರೇಟ್ ಮಾಡ್ತಾರಂತೆ. ವೈಜ್ಞಾನಿಕ ಚಿಂತನೆ ಇವರಿಗೆ ಇಲ್ಲ , ಇವರೆಲ್ಲ ಕ್ಲೈಮರ್ಸ್ ಅಷ್ಟೇ. ವೈಜ್ಞಾನಿಕ ಚಿಂತನೆ ಅನ್ನೋದು ನಮ್ಮ ನಮ್ಮ ನಂಬಿಕೆಗಳು. ವೈಜ್ಞಾನಿಕ ಚಿಂತನೆ ನಾವು ಮಕ್ಕಳಲ್ಲಿ ಬೆಳೆಸಬೇಕು. ಆದರೆ ಅದಕ್ಕಿಂತ ಮುಂಚೆ ಫೇಕ್ ನೆಸ್ ಹೊಡೆಯಬೇಕು. ಸಮಾನ ಶಿಕ್ಷಣದ ಬಗ್ಗೆ ಇವರು ಮಾತಾಡೋದಿಲ್ಲ. ಮಕ್ಕಳು ಕಲಿತರೆ ಬುದ್ದಿವಂತರಾಗ್ತಾರೆ ಅಂತಾ. ಅವರ ಬಡತನ ನಿವಾರಿಸಿದ್ರೆ ಅದರಿಂದ ಅವರು ಹೊರ ಬಂದು ಪ್ರಶ್ನೆ ಕೇಳ್ತಾರಂತ ಹೇಳಿ ನಿವಾರಿಸೋದಿಲ್ಲ. ಎಲ್ಲರೂ ಗೋತ್ತಿದ್ದೋ ಗೋತ್ತಿಲ್ಲದೆಯೋ ಅಧಿಕಾರದ ದಾಹಕ್ಕೆ ಮಾಡಿರೋದು ಇದು. ಈ ಸೂಕ್ಷ್ಮತೆಯನ್ನು, ಆತಂಕವನ್ನ ನಾವು ಹರಡಬೇಕಾಗಿದೆ. ಭೂಮಿಯನ್ನ ಫಲವತ್ತತ್ತೆಯನ್ನಾಗಿ ಮಾಡುವ ಕೆಲಸ ಮಾಡಬೇಕಾಗಿದೆ.

ಧರ್ಮ ಯುದ್ದ ಕಾಡ್ಗಿಚ್ಚು ಇದ್ದ ಹಾಗೆ

ಧರ್ಮ ಯುದ್ದ ಒಳಗೊಳಗೊಳಗೆ ಇರುತ್ತೆ ಅದನ್ನ ಮುಗಿಸೋದಕ್ಕೆ ಆಗೋದಿಲ್ಲ. ನಿಮ್ಮ ಅಸ್ತಿತ್ವದ ಬುಡಕ್ಕೆ ಪೆಟ್ಟು ಬಿಳುತ್ತೆ ಅನ್ನೋ ಲೆಕ್ಕಾಚಾರದಲ್ಲಿ ಬ್ರೈನ್ ವಾಶ್ ಮಾಡ್ತಾರೆ. ಇದು ಕ್ಲಿಯರ್ ಆಗಿ ಬ್ಲಾಕ್ ಮೇಲ್ ಇದ್ದ ಹಾಗೆ. ಧರ್ಮ ಯುದ್ದ ಕಾಡ್ಗಿಚ್ಚು ಇದ್ದ ಹಾಗೆ, ಅದಕ್ಕೆ ಮೂಲ ಗೋತ್ತಾಗೋದಿಲ್ಲ ಕೊನೆನೂ ಗೋತ್ತಾಗೊದಿಲ್ಲ. ಭೂಮಿ ಸುಟ್ಟಿರೋದು ಮತ್ತೆ ಫಲವತ್ತತೆ ಆಗೋದು ತುಂಬಾ ವರ್ಷಗಳ ನಂತರ. ಅಷ್ಟು ಡೇಂಜರಸ್ ಧರ್ಮ ಅನ್ನೋದು. ಪ್ರಪಂಚದ ಎಲ್ಲಾ ವಾರ್ ಗಳು ನೋಡಿ, ಒಂದು ಲಕ್ಷ ಸೈನಿಕರು ಇದ್ದರು ಅಂತಾ ಹೇಳ್ತಾನೆ. ಆದರೆ ಅವನು ಊಟ ಹಾಕೋದು 15 ಸಾವಿರ ಜನಕ್ಕಷ್ಟೆ ಮಾತ್ರ. ಉಳಿದವರು ಬಾಡಿಗೆ ಗುಂಡಾಗಳು ತೆಗೆದುಕೊಳ್ಳುತ್ತಾರೆ. ಯುದ್ದ ಆದ ಮೇಲೆ ನಿಮಗೆ ದುಡ್ಡು ಕೊಡೊದಕ್ಕೆ ಆಗೋದಿಲ್ಲ. ನೀವು ಸಿಕ್ಕಿರೋದನ್ನ ಬಾಚಿಕೊಂಡು ಲೂಟಿ ಮಾಡಿಕೊಂಡು ಹೋಗಿ ಅಂತಾ ಹೇಳ್ತಾನೆ. ಅದನ್ನೆ ಇಲ್ಲಿ ಮಾಡ್ತಿರೋದು ಇವರು. ಯಾಕೆ ರೌಡಿಗಳನ್ನ ಇವರ ಪಾರ್ಟಿಗೆ ಸೇರಿಸಿಕೊಂಡರು ?. ರೌಡಿಗಳನ್ನ ಯಾಕೆ ಎಮ್ ಪಿ ಗಳನ್ನಾಗಿ ಮಾಡ್ತಿದ್ದಾರೆ ಇವರು. ಇವರಿಗೆ ಯಾವ ಧರ್ಮ ಸನಾತನ ಅನ್ನೋದು ಏನಿಲ್ಲ. ಅವನು ಬೆಳೆಯೋದಕ್ಕೆ ಅವನು ದುಡ್ಡು ಮಾಡೋದಕ್ಕೆ ಅವನು ಅತ್ಯಾಚಾರ ಮಾಡೋದಕ್ಕೆ, ಕೊಲ್ಲದೊಕ್ಕೆ ಆಸ್ಪದ ಕೊಟ್ಟರೆ ಇವರಿಗೆ ಹೇದರಿಸೋದಕ್ಕೆ ಆಗುತ್ತೆ. ಇವರೆಲ್ಲ ಪೈಡ್ ಗುಂಡಾಸ್. ಅವರು ಧರ್ಮಕ್ಕೊಸ್ಕರ ಹೋರಾಡ್ತಿದ್ದಾರೆ ಅಂತಾ ಅಂದುಕೊಳ್ಳುತ್ತಿದ್ದಾರೆ ನಾವು ಅದನ್ನ ಅರ್ಥ ಮಾಡಿಕೊಳ್ಳಬೇಕು. ಎಲ್ಲಾ ಯುದ್ಧ ರಾಜರು ಮಾಡೋದು ಹೀಗೆನೆ. ಎಲ್ಲಾ ರಾಜಕಾರಣಿಗಳು ಮಾಡೋದು ಹೀಗೆನೆ. ಎಲ್ಲಾ ಪಕ್ಷಗಳಲ್ಲಿಯು ರೌಡಿಗಳನ್ನ , ರೌಡಿ ಶೀಟರ್ ಸಾಕಿಕೊಂಡಿದ್ದಾರೆ. ಅವರಲ್ಲಿ ಆಯುಧ ಇರುತ್ತೆ, ಅಧಿಕಾರ ಇರುತ್ತೆ ದೋಚುತ್ತಾರೆ ಎಂದು ಪ್ರಕಾಶ್ ರೈ ಹೇಳಿದ್ದಾರೆ.

ಇವನ ಬಿಲ್ಡಿಂಗ್ ನಲ್ಲಿ ಅವನ ಬಾಲ್ ಇದೆ.

ನಾನು ಯಾರನ್ನು ನಂಬೋ ಸ್ಥಿತಿಯಲ್ಲಿ ಇಲ್ಲ. ಈ ಐದಾರು ವರ್ಷಗಳ ರಾಜಕಾರಣದಲ್ಲಿ ಅರ್ಥ ಆಗೋಯ್ತು. ಇವನ ಬಿಲ್ಡಿಂಗ್ ನಲ್ಲಿ ಅವನ ಬಾಲ್ ಇದೆ. ಅವನ ಮದುವೆ ಮಂಟಪದಲ್ಲಿ ಇವನ ಮದುವೆ ನಡೆಯುತ್ತೆ. ನಾನು ಜನರನ್ನ ಮಾತ್ರ ನಂಬಿಕೊಂಡಿದ್ದೇನೆ. ಲಾವಿದರು ಎಲ್ಲಾ ಯಾಕೆ ಮಾತಾಡ್ತಿಲ್ಲ ಅಂತಾ ಕೇಳಿದರಲ್ಲ. ಲ್ಲಾ ಪ್ರಶ್ನೆಗೆ ಒಂದೆ ಉತ್ತರ. ಚಡ್ಡಿ ಹಾಕೊಂಡವರಿಗೆ ದೇಶ ಕಾಣಿಸೋದಿಲ್ಲ. ವರೆಲ್ಲ ಚಡ್ಡಿ ಹಾಕೊಂಡಿದ್ದಾರೆ ಅಂತಾ ಇವಾಗ ಗೋತ್ತಾಯ್ತು ಇಷ್ಟು ವರ್ಷ ಗೋತ್ತಿರಲಿಲ್ಲ. ಇವರು ಬಂದಿದ್ದರಿಂದ ಒಂದೇಒಂದು ಒಳ್ಳೆ ಕೆಲಸ ಆಯ್ತು ನನಗೆ. ಸಾಧ್ಯತೆಗಳಿದ್ದಾಗ ಇವರು ಚೆಡ್ಡಿ ಹಾಕೊಂಡಿದ್ದಾರೆ ಅಂತಾ ಗೋತ್ತಾಯ್ತು. ಗೆಳೆಯರು, ಆತ್ಮೀಯರನ್ನ ಕಳೆದುಕೊಂಡಿದ್ದೇನೆ ನೋವಾಗುತ್ತೆ. ನನಗೆ ಹೇಳ್ತಾರೆ ಯಾಕೆ ಮಾತಾಡ್ತಿಯಾ ಮೌನವಾಗಿರಬೇಕು ಅಂತಾ ನಿನ್ನ ಕರಿಯರ್ ನೋಡಿಕೊಳ್ಳಬೇಕು ಅಂತಾ. ನನ್ನ ಒಬ್ಬನ ಕರಿಯರ್ ಗಿಂತ ದೇಶದ ಭವಿಷ್ಯ ಮುಖ್ಯ ನನಗೆ ಎಂದು ಸಂವಾದ ಕಾರ್ಯಕ್ರಮದಲ್ಲಿ ಪ್ರಕಾಶ್​ ರೈ ಮಾತನಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಧರ್ಮ ಅನ್ನೋ ಕಥೆ ಹೇಗಂದ್ರೆ ಕಾಗೆಗಳು ಎಲ್ಲವು..’ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್​ ರಾಜ್​

https://newsfirstlive.com/wp-content/uploads/2023/08/Prakash-Raj_News.jpg

Load More