newsfirstkannada.com

‘ಸಾವಿರ ದರೋಡೆ.. ಇನ್ನೂರು ಉಡುಗೊರೆ..’ ಸಿಲಿಂಡರ್ ದರ ಇಳಿಕೆ ಬೆನ್ನಲ್ಲೇ ಮೋದಿ ಕಾಲೆಳೆದ ಪ್ರಕಾಶ್ ರಾಜ್

Share :

30-08-2023

    ಸಿಲಿಂಡರ್ ದರದಲ್ಲಿ 200 ರೂಪಾಯಿ ಇಳಿಸಿರುವ ಕೇಂದ್ರ

    ಪ್ರತಾಪ್ ಸಿಂಹ ಪೋಸ್ಟ್​ಗೆ ರೀಟ್ವೀಟ್​ ಮಾಡಿ ಕೌಂಟರ್..!

    ಇತ್ತೀಚೆಗೆ ನಿರಂತರವಾಗಿ ಸುದ್ದಿಯಾಗುತ್ತಿರುವ ಪ್ರಕಾಶ್ ರಾಜ್

ಒಂದಲ್ಲಾ ಒಂದು ಹೇಳಿಕೆಗಳನ್ನ ನೀಡಿ ವಿವಾದಗಳ ಸುಳಿಗೆ ಸಿಲುಕುತ್ತಿರುವ ನಟ ಪ್ರಕಾಶ್ ​ರಾಜ್​ ಇದೀಗ ಮತ್ತೆ ಪ್ರಧಾನಿ ಮೋದಿ ಕಾಲೆಳೆದಿದ್ದಾರೆ. ಕೇಂದ್ರ ಸರ್ಕಾರ ಗೃಹ ಬಳಕೆ ಸಿಲಿಂಡರ್​ ದರದಲ್ಲಿ 200 ರೂಪಾಯಿ ಇಳಿಕೆ ಮಾಡಿದೆ.

ಎಲ್​​ಪಿಜಿ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಸೆಪ್ಟೆಂಬರ್​ 1ರ ನಂತರ ಗ್ರಾಹಕರಿಗೆ ಈ ಲಾಭ ಸಿಗಲಿದೆ. ಈ ವಿಚಾರದ ಬಗ್ಗೆ ಪೋಸ್ಟ್​ ಮಾಡಿರೋ ಪ್ರಕಾಶ್​ರಾಜ್​, ಹೊಸ ಜುಮ್ಲಾ, ಸಾವಿರ ದರೋಡೆ ಮಾಡಿ, ಇನ್ನೂರು ಉಡುಗೊರೆಯಾಗಿ ಹಿಂದಿರುಗಿಸೋ ಪರಿ ಇದು ಅಂತಾ ವ್ಯಂಗ್ಯವಾಡಿದ್ದಾರೆ.

ಕೇಂದ್ರ ಸಂಪುಟ ಸಭೆ ಬೆನ್ನಲ್ಲೇ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದರು. ಈ ವಿಡಿಯೋ ತುಣುಕನ್ನು ಸಂಸದ್ ಪ್ರತಾಪ್ ಸಿಂಹ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಇದನ್ನು ರೀಟ್ವೀಟ್ ಮಾಡಿ ಪ್ರಕಾಶ್ ರಾಜ್, ಪ್ರಶ್ನೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸಾವಿರ ದರೋಡೆ.. ಇನ್ನೂರು ಉಡುಗೊರೆ..’ ಸಿಲಿಂಡರ್ ದರ ಇಳಿಕೆ ಬೆನ್ನಲ್ಲೇ ಮೋದಿ ಕಾಲೆಳೆದ ಪ್ರಕಾಶ್ ರಾಜ್

https://newsfirstlive.com/wp-content/uploads/2023/08/MODI-9-1.jpg

Load More