newsfirstkannada.com

×

ಹಿಂದಿ ಹೇರಿಕೆ ವಿರುದ್ಧ ನಟ ಪ್ರಕಾಶ್​ ರಾಜ್​ ಟ್ವೀಟ್; ಅಮಿತ್​ ಶಾಗೆ ಕೊಟ್ರು ಟಾಂಗ್​​​​

Share :

Published September 14, 2023 at 9:07pm

Update September 14, 2023 at 9:12pm

    ಇಡೀ ದೇಶಾದ್ಯಂತ ಬಿಜೆಪಿಯಿಂದ ಹಿಂದಿ ದಿವಸ್​ ಆಚರಣೆ

    ಹಿಂದಿ ದಿವಸ್​ ವಿರುದ್ಧ ನಟ ಪ್ರಕಾಶ್​ ರಾಜ್ ಭಾರೀ ಆಕ್ರೋಶ

    ನಟ ಪ್ರಕಾಶ್​ ರಾಜ್​ ಮಾಡಿದ ಟ್ವೀಟ್​​ನಲ್ಲಿ ಏನಿದೆ ಗೊತ್ತಾ..?​

ಬೆಂಗಳೂರು: ಇಂದಿಡೀ ದೇಶಾದ್ಯಂತ ಬಿಜೆಪಿಯಿಂದ ಹಿಂದಿ ದಿನಾಚರಣೆ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹೀಗೆ ಆಯೋಜಿಸಲಾಗಿದ್ದ ‘ಹಿಂದಿ ದಿವಸ್’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಅಮಿತ್​ ಶಾ ಅವರು, ಹಿಂದಿ ಭಾಷೆ ಬಗ್ಗೆ ಮಾತಾಡಿದರು.

ಹಿಂದಿ ಎಂದಿಗೂ ಯಾವುದೇ ಸ್ಥಳೀಯ ಭಾಷೆಯೊಂದಿಗೆ ಸ್ಪರ್ಧೆಗೆ ಇಳಿದಿಲ್ಲ. ಹೀಗಾಗಿ ಹಿಂದಿ ಯಾವಾಗಲೂ ದೇಶದ ಇತರ ಭಾಷೆಗಳ ಒಂದುಗೂಡಿಸುತ್ತದೆ. ದೇಶದ ಎಲ್ಲಾ ಭಾಷೆಗಳನ್ನು ಬಲಪಡಿಸಿದಾಗ ಮಾತ್ರ ಭಾರತ ಉಳಿಯಲು ಸಾಧ್ಯ. ಎಲ್ಲಾ ಸ್ಥಳೀಯ ಭಾಷೆಗಳನ್ನ ಸಶಕ್ತಗೊಳಿಸಲು ಹಿಂದಿ ಒಂದು ಮಾಧ್ಯಮ ಎಂದಿದ್ದರು. ಇದಕ್ಕೆ ಬಹುಭಾಷಾ ನಟ ಪ್ರಕಾಶ್​​ ರಾಜ್​ ಕೌಂಟರ್​ ಕೊಟ್ಟಿದ್ದಾರೆ.

ಈ ಸಂಬಂಧ ಟ್ವೀಟ್​ (X) ಮಾಡಿರೋ ಪ್ರಕಾಶ್​ ರಾಜ್​​, ನೀವು ಹಿಂದಿ ಮಾತನಾಡುತ್ತೀರಿ. ಕಾರಣ ನಿಮಗೆ ಹಿಂದಿ ಮಾತ್ರ ಗೊತ್ತು. ನಮ್ಮನ್ನ ಹಿಂದಿಯಲ್ಲಿ ಮಾತಾಡಿ ಎಂದು ಒತ್ತಾಯಿಸುತ್ತೀರಿ, ಏಕೆಂದರೆ ನಿಮಗೆ ಹಿಂದಿ ಮಾತ್ರ ಗೊತ್ತು ಎಂದು ಟಾಂಗ್​​ ಕೊಟ್ಟಿದ್ದಾರೆ. ಜತೆಗೆ ಹಿಂದಿ ಹೇರಿಕೆ ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.

ಹಿಂದಿ ದಿವಸ್​ಗೆ ಭಾರೀ ವಿರೋಧ

ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲಿ ಹಿಂದಿ ದಿವಸ್​ಗೆ ಭಾರೀ ವಿರೋಧ ಇದೆ. ಪ್ರತೀ ವರ್ಷ ಸೆಪ್ಟೆಂಬರ್​​ ಆಚರಿಸೋ ಹಿಂದಿ ದಿವಸ್​ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಲೇ ಇರುತ್ತದೆ. ಕನ್ನಡದ ಮೇಲೂ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಕನ್ನಡಿಗರು ಆಕ್ರೋಶ ಹೊರಹಾಕುತ್ತಲೇ ಇದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂದಿ ಹೇರಿಕೆ ವಿರುದ್ಧ ನಟ ಪ್ರಕಾಶ್​ ರಾಜ್​ ಟ್ವೀಟ್; ಅಮಿತ್​ ಶಾಗೆ ಕೊಟ್ರು ಟಾಂಗ್​​​​

https://newsfirstlive.com/wp-content/uploads/2023/08/Prakash-Raj_1.jpg

Load More