newsfirstkannada.com

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

Share :

28-05-2023

  ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?

  ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

  ನಾಳೆ ದೊಡ್ಡ ಅನಾಹುತಕ್ಕೆ ಕಾರಣ ಆಗುತ್ತೆ ಹುಷಾರ.!

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ? ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಈ ಹಿಂದೆ ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಕಾಯ್ದೆಗಳನ್ನ ಬದಲಾಯಿಸುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ ಶಾಂತಿಗೆ ಭಂಗ ತಂದು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡ್ರೆ ಕ್ರಮ ಕೈಗೊಳ್ಳುವ ಸಾಮರ್ಥ್ಯ ಈ ಸರ್ಕಾರಕ್ಕಿದೆ ಎಂದು ಹೇಳಿಕೆಯನ್ನು ನೀಡಿದ್ದರು. ಪ್ರಿಯಾಂಕ್​ ಖರ್ಗೆ ನೀಡಿದ್ದ ಹೇಳಿಕೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತಾಡಿದ ಪ್ರಮೋದ್ ಮುತಾಲಿಕ್, ಭಜರಂಗದಳ ಬ್ಯಾನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟ ವ್ಯವಸ್ಥೆಯಲ್ಲಿ ತೊಡಗಿದೆಯಾ? ದೇಶಭಕ್ತ ಸಂಘಟನೆಯಾ ಬಜರಂಗದಳ? ಎಂದು ಪ್ರಶ್ನಿಸುವ ಮೂಲಕ ಕಿಡಿ ಕಾರಿದ್ದಾರೆ.

ನಂತರ ಮಾತು ಮುಂದುವರಿಸಿದ ಅವರು, ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ, ಮುಸ್ಲಿಂ ತುಷ್ಟೀಕರಣ, ಮುಸ್ಲಿಮರೆಲ್ಲ ಒಟ್ಟಾಗಿ ವೋಟ್​​ ಹಾಕಿದ್ದನ್ನ ತಲೆ ಮೇಲೆ ಇಟ್ಟುಕೊಂಡು ಕುಣಿಯೋದು ಇದೆಯಲ್ಲ ನಾಳೆ ದೊಡ್ಡ ಅನಾಹುತಕ್ಕೆ ಕಾರಣ ಆಗುತ್ತೆ. ಈ ರೀತಿಯ ಹೇಳಿಕೆಗಳನ್ನ ಕೊಡದೇ ಪ್ರಾಮಾಣಿಕವಾಗಿ ಕರ್ನಾಟಕದಲ್ಲಿ ಜನಸೇವೆ ಮಾಡಿದರೆ ಮತ್ತೆ ಮುಂದಿನ ಬಾರಿ ಮತ್ತೆ ಬರ್ತಿರಿ. ಇಲ್ಲವಾದರೆ ರಾಜ್ಯಾದ್ಯಂತ ಶ್ರೀರಾಮಸೇನೆ ಸಂಘಟನೆ ಹೋರಾಟ ಮಾಡಬೇಕಾಗತ್ತೆ ಅಂತಾ ಎಚ್ಚರಿಕೆ ಕೊಡ್ತೇನೆ ಎಂದು ಹೇಳಿದ್ದಾರೆ.

ಪ್ರಿಯಾಂಕ ಖರ್ಗೆ ಕಿಡಿ ಕಾರಿದ ಪ್ರಮೋದ್ ಮುತಾಲಿಕ್..

ಯಾರು ಸಹ ಶಾಂತಿ ಕದಡುವ ಪ್ರಕ್ರಿಯೆ ಮಾಡಲೇ ಬಾರದು. ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಬದ್ದವಾದಂತಹ ಪ್ರಕ್ರಿಯೆ ಮಾಡಬೇಕು. ಶ್ರೀರಾಮ ಸೇನೆ, ಭಜರಂಗ ದಳ, ಹಿಂದೂ ಜಾಗರಣ, ವಿಶ್ವ ಹಿಂದೂ ಪರಿಷತ್​ಗಳು ಕಾನೂನು ಬಾಹಿರ ಮಾಡಿಲ್ಲ, ಮಾಡೋದು ಇಲ್ಲಾ. ಅನಾವಶ್ಯಕವಾಗಿ ಶಾಂತಿ ಕದಡುವ ಕೆಲಸ ಮಾಡೋದಿಲ್ಲಾ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದ್ರೂ ಕಸಾಯಿಖಾನೆಗೆ ಹೋಗುತ್ತಿದೆ. ಕಾನೂನು ಬಾಹಿರವಾಗಿ ಕಸಾಯಿ ಖಾನೆಗಳಿವೆ. ಸರ್ಕಾರಕ್ಕೆ, ಪೊಲೀಸ್ ಇಲಾಖೆ, ಕಾಂಗ್ರೆಸ್​ಗೆ ಎಲ್ಲವೂ ಗೊತ್ತಿದೆ. ಗೋ ಹತ್ಯೆ ನಿಲ್ಲಿಸದೆ ಇದ್ದರೆ ಹೋರಾಟ ಮಾಡಬೇಕಾಗುತ್ತೆ. ಹೋರಾಟದ ವೇಳೆ ಸಂಘರ್ಷವಾದ್ರೆ, ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ಕಾರಣವಾಗುತ್ತೆ. ಅಜಾನ್, ಮತಾಂತರ ವಿರೋಧಿಸಿ ಹೋರಾಟ ಮಾಡುವ ವೇಳೆ ಸಂಘರ್ಷವಾದರೆ ಇದಕ್ಕೆ ಸರ್ಕಾರ ಹೊಣೆಯಾಗುತ್ತೆ ಎಂದು ಪ್ರಮೋದ್​​ ಮುತಾಲಿಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

https://newsfirstlive.com/wp-content/uploads/2023/05/krs-dam-3.jpg

Load More