ಸ್ಯಾಂಡಲ್ವುಡ್ ಅಭಿಮಾನಿಗಳ ಮನಗೆದ್ದ ಹಾಸ್ಟೆಲ್ ಹುಡುಗರು
ಸಿನಿಮಾ ನೋಡಿ ಇದು ಕಿರಿಕ್ ಪಾರ್ಟಿಯ ಹಾಸ್ಟೆಲ್ ವರ್ಷನ್ ಎಂದ ನಟ!
ಹಾಸ್ಟೆಲ್ ಹುಡುಗರು ಅವತಾರ ಕಂಡು ಬಿದ್ದು ಬಿದ್ದು ನಕ್ಕ ತಾರೆಯರು
ಸದ್ಯ ಸ್ಯಾಂಡಲ್ವುಡ್ನಲ್ಲಿ ಹಾಸ್ಟೆಲ್ ಹುಡುಗರೇ ಕೀಟಲೆ ಕೊಡ್ತಾ ಇದ್ದಾರೆ. ಹೊಸ ತರಹದ ಸಿನಿಮಾವನ್ನು ತೆರೆಗೆ ತರುವ ಮೂಲಕ ಮನೆಯಲ್ಲಿ ಕುಂತವರನ್ನು ಥಿಯೇಟರ್ನತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದಾರೆ. ಅಷ್ಟು ಮಾತ್ರವಲ್ಲದೆ, ನಗದೇ ಇದ್ದವರನ್ನು ನಗಿಸುವ ಕಾಯಕಕ್ಕೆ ಇಳಿದಿದ್ದಾರೆ. ಹಾಗಾಗಿ ನವ ಯುವಕರ ತಂಡ ಮಾಡಿದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸದಾ ಹೌಸ್ ಫುಲ್ ಜೊತೆಗೆ ಸಕ್ಸಸ್ ಕೂಡ ಕಾಣಿಸುತ್ತಿದೆ.
ಇನ್ನು ಈ ಸಿನಿಮಾವನ್ನು ಕಂಡ ಸ್ಯಾಂಡಲ್ವುಡ್ ತಾರೆಯರು ಸಿನಿಮಾ ಬಗ್ಗೆ ಬಗೆ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಅದರಲ್ಲೂ ಬಹುತೇಕರು ಸಿನಿಮಾ ಬಗ್ಗೆ ಸಕಾರಾತ್ಮಕ ಕಾಮೆಂಟ್ ಮಾಡಿದ್ದಾರೆ. ನಟ ಪ್ರಮೋದ್ ಶೆಟ್ಟಿ ಮತ್ತು ಮಡದಿ ಸುಪ್ರಿತಾ ಶೆಟ್ಟಿ ಕೂಡ ಈ ಸಿನಿಮಾ ನೋಡಿ ಮಾತನಾಡಿದ್ದಾರೆ. ಸಿನಿಮಾದ ಕುರಿತು ಹಾಡಿ ಹೊಗಳಿದ್ದಾರೆ. ಇದರ ನಡುವಲ್ಲಿ ಸುಪ್ರಿತಾ ಶೆಟ್ಟಿ ‘ನಾನಂತೂ ನನ್ನ ಮಕ್ಕಳನ್ನ ಹಾಸ್ಟೆಲ್ ಸೇರಿಸಲ್ಲ’ ಎಂದು ಹೇಳಿದ್ದಾರೆ.
ಇದು ಕಿರಿಕ್ ಪಾರ್ಟಿದ ಹಾಸ್ಟೆಲ್ ವರ್ಷನ್ ಆಗುತ್ತೆ
ನಟ ಪ್ರಮೋದ್ ಶೆಟ್ಟಿ ಮಾತನಾಡಿ, ನಾನು ಟ್ರೈಲರ್ ಲಾಂಚ್ ದಿನವೇ ಹೇಳಿದ್ದೆ ಇದು ಕಿರಿಕ್ ಪಾರ್ಟಿಯ ಹಾಸ್ಟೆಲ್ ವರ್ಷನ್ ಆಗುತ್ತೆ ಅಂತ. ಕಿರಿಕ್ ಪಾರ್ಟಿಗಿಂತ ಒಂದು ಹೆಜ್ಜೆ ಮೇಲೆ ಸಕ್ಸಸ್ ಕಾಣಲಿ ಅಂತ ಹಾರೈಸುತ್ತಾ ಇದ್ದೀನಿ. ನಾನೇನು ಸಿನಿಮಾ ಬಗ್ಗೆ ಹೇಳಬೇಕಾಗಿಲ್ಲ. ಆಡಿಯನ್ಸ್ ಹೇಳಿದ್ದಾರೆ. ಜನ ಬುಕ್ಕಿಂಗ್ ಮೂಲಕ ಸಕ್ಸಸ್ ತೋರಿಸಿಕೊಟ್ಟಿದ್ದಾರೆ. ಈ ಹುಡುಗರು ಹಿಂಗೆ ದೊಡ್ಡ ಸಕ್ಸಸ್ ಆಗಲಿ. ಬೇರೆ ಭಾಷೆಗೂ ಡಬ್ ಆಗಲಿ. ಬೇರೆ ಭಾಷಿಗರು ಈ ಸಿನಿಮಾವನ್ನು ನೋಡುವಂತಾಗಲಿ ಎಂದು ಹಾರೈಸುತ್ತೇನೆ. ಆಲ್ ದಿ ಬೆಸ್ಟ್ ಎಲ್ಲರಿಗೂ ಎಂದು ಹೇಳಿದ್ದಾರೆ.
ನಾನಂತು ನನ್ನ ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸಲ್ಲ
ಫ್ರೆಶರ್ಸ್ ಸಿನಿಮಾ ಮಾಡ್ತಾರೆ ಎಂದು ಎಲ್ಲಾರೂ ಹೇಳ್ತಾರೆ. ಆದರೆ ಹೊಸೊಬ್ಬರು ಎಚ್ಚು ಚೆನ್ನಾಗಿ ಸಿನಿಮಾ ಮಾಡಿದ್ದಾರೆ ಅನ್ನೋದನ್ನ ಹೌಸ್ ಫುಲ್ ಸಿನಿಮಾ ಓಡ್ತಾ ಇದೆ. ಇನ್ನು ಅದು 100 ಡೇಸ್ ಆಗಲಿ, ಸಕ್ಸಸ್ ಸಿಗ್ಲಿ. ಇನ್ನು ಇಂತಹ ಅದ್ಭುತ ಸಿನಿಮಾಗಳನ್ನ ನಿಮ್ಮ ತಂಡ ಕೊಡಲಿ ಅಂದ ಹೇಳೋಕೆ ಇಷ್ಟಪಡ್ತೀನಿ. ಅದರ ಜೊತೆಗೆ ಯಾರ ಬಗ್ಗೆ ಮಾತನಾಡಬೇಕು ಅಂತ ಗೊತ್ತಾಗುತ್ತಿಲ್ಲ. ಪ್ರತಿಯೊಬ್ಬ ಆ್ಯಕ್ಟರ್, ಡೈರೆಕ್ಟರ್, ಸಿನಿಮಾಟೋಗ್ರಾಫರ್ ಇರ್ಬೋದು ಬೆಸ್ಟ್ ಅನ್ನು ನೀಡಿದ್ದಾರೆ. ಅಮೇಜಿಂಗ್ ಆಗಿದೆ. ಹಾಸ್ಟೆಲ್ ಹೀಗಿರತ್ತಾ ಅಂತ ಕಲ್ಪನೆ ಇತ್ತು. ಹಾಸ್ಟೆಲ್ ಒಳಗೆ ಹೋಗಿ ಬಂದಂತಹ ಒಂದು ಅನುಭವನ ಕೊಟ್ಟಿದ್ದಾರೆ. ಅಮೇಜಿಂಗ್ ಮೂವಿ, ನಾನಂತು ನನ್ನ ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸಲ್ಲ. ಯಾಕಂದ್ರೆ ಅಷ್ಟು ನಕ್ಕಿದ್ದೀವಿ. ಸಿನಿಮಾ ಶುರು ಆದಾಗಿನಿಂದ ಕೊನೆಯವರೆಗೆ ನಗುತ್ತಲೇ ಇದ್ದೆವು. ಎಲ್ಲರು ಖಂಡಿತವಾಗಿ ಕಾಲೇಜು ಸ್ಟೂಡೆಂಟ್ ಆಗಿರಬಹುದು ಎಲ್ಲಾರು ಬಂದು ಸಿನಿಮಾವನ್ನು ನೋಡಿ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಜೈ ಎಂದು ಹೇಳಿದ್ದಾರೆ.
ಪ್ರಮೋದ್ ಶೆಟ್ಟಿ ದಂಪತಿ ತಮ್ಮ ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸಲ್ವಂತೆ.. #HostelHudugaruBekagiddare #Pramodshetty @UrsPramodShetty pic.twitter.com/bheLHOEqlt
— NewsFirst Kannada (@NewsFirstKan) July 25, 2023
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ