newsfirstkannada.com

ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ; ಮಠದಿಂದಲೇ ಹೊರ ಹಾಕಲು ತೀರ್ಮಾನ!

Share :

13-09-2023

    ನ್ಯೂಸ್​ ಫಸ್ಟ್​ ಬ್ರೇಕ್​ ಮಾಡಿದ್ದ ಸುದ್ದಿಯಲ್ಲಿ ಮಹತ್ವದ ಬೆಳವಣಿಗೆ

    ಪ್ರಸನ್ನಾನಂದಪುರಿ ಶ್ರೀ ವಿರುದ್ಧ ಕೇಳಿ ಬಂತು ಗಂಭೀರ ಆರೋಪ

    ಮಠದಿಂದಲೇ ಸ್ವಾಮೀಜಿಯನ್ನು ಹೊರ ಹಾಕಲು ತೀರ್ಮಾನ..!

ದಾವಣಗೆರೆ: ವಾಲ್ಮೀಕಿ ಮಠದ ಪೀಠಾಧ್ಯಕ್ಷರ ಬಗ್ಗೆ ಎದ್ದಿರುವ ಅಪಸ್ವರದ ಬಗ್ಗೆ ನ್ಯೂಸ್​ ಫಸ್ಟ್ ಹಲವು ದಿನಗಳಿಂದ​ ಸುದ್ದಿ ಬ್ರೇಕ್‌ ಮಾಡ್ತಿದೆ. ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಸಮಾಜದ ಮುಖಂಡರೇ ಸಿಡಿದೆದ್ದಿದ್ದಾರೆ. ಅವರ ವಿರುದ್ಧ ಆರೋಪಗಳನ್ನ ಮಾಡ್ತಿದ್ದಾರೆ. ವಾಲ್ಮೀಕಿ ಸಮಾಜ ಸದ್ಯ ಮಠದಿಂದಲೇ ಅವರನ್ನ ಹೊರ ಹಾಕಲು ಮುಂದಾಗಿದೆ.

ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಸಮಾಜದ ಮುಖಂಡರೇ ಅಸಮಾಧಾನಗೊಂಡಿದ್ದಾರೆ. ಅವರ ವಿರುದ್ಧ ಆರೋಪಗಳ ಮೇಲೆ ಆರೋಪ ಮಾಡ್ತಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್ ಆಗಸ್ಟ್​ 13ರಂದೇ ಸುದ್ದಿ ಬ್ರೇಕ್​ ಮಾಡಿತ್ತು. ಇದೀಗ ಈ ಹಗ್ಗಜಗ್ಗಾಟ ಮತ್ತೊಂದು ಮಜಲು ಪಡೆದಿದೆ. ಸ್ವಾಮೀಜಿಯನ್ನೇ ಮಠದಿಂದ ಹೊರ ಹಾಕಲು ಸಮಾಜದ ಮುಖಂಡರು ನಿರ್ಣಯ ಕೈಗೊಂಡಿದ್ದಾರೆ.

ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ!

ವಾಲ್ಮೀಕಿ ಮಠದಲ್ಲೇ ವ್ಯಕ್ತಿಯೊಬ್ಬ ಮಹಿಳೆಯರ ಜೊತೆ ಇರುವುದನ್ನ ನಾವು ಕಣ್ಣಾರೆ ಕಂಡಿದ್ದೇವೆ. ಮಠದಲ್ಲಿ ಇಂತಹ ಅಸಹ್ಯ ಕೃತ್ಯಗಳಿಗೆ ಯಾಕೆ ಅವಕಾಶ ಕೊಟ್ಟಿದ್ದೀರಾ ಅಂತ ಈ ಹಿಂದೆ ಸಮಾಜದ ಮುಖಂಡರು ಸಿಡಿದ್ದೆದ್ದಿದ್ರು. ಬಳಿಕ ಪ್ರಸನ್ನಾನಂದಪುರಿ ಸ್ವಾಮೀಜಿ ಪೋನ್​ ಕರೆಯಲ್ಲಿ ಮತ್ತೋರ್ವ ಸ್ವಾಮೀಜಿ ಬಳಿ ಅಸಭ್ಯವಾಗಿ ಮಾತನಾಡಿರೋ ಆಡಿಯೋ ಕ್ಲಿಪ್‌ ಕೂಡಾ ಹರಿದಾಡಿತ್ತು. ಇದೆಲ್ಲದರ ನಂತರ ಪ್ರಸನ್ನಾನಂದಪುರಿ ಸ್ವಾಮೀಜಿಯ ಪೀಠ ತ್ಯಾಗಕ್ಕೆ ಆಗ್ರಹ ಜೋರಾಗಿದೆ.

ಪ್ರಸನ್ನಾನಂದಪುರಿ ಸ್ವಾಮೀಜಿ ಪೀಠ ತ್ಯಾಗಕ್ಕೆ ಪಟ್ಟು!

ಬೆಂಗಳೂರು ಗಾಂಧಿ ಭವನದಲ್ಲಿ ಸಭೆ ನಡೆಸಿದ ಮಹರ್ಷಿ ವಾಲ್ಮೀಕಿ ಗುರುಪೀಠ ಸಂರಕ್ಷಣಾ ಹೋರಾಟ ಸಮಿತಿ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಅಸಮಾಧಾನ ಹೊರಹಾಕಿದೆ. ಮಠದ ಗೌರವ ಹಾಳು ಮಾಡುತ್ತಿರುವ ಪ್ರಸನ್ನಾನಂದಪುರಿ ಸ್ವಾಮೀಜಿ ಹೊರಹಾಕಿ ಮಠದ ಉಳಿವಿಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ಪ್ರಮುಖವಾಗಿ 5 ನಿರ್ಧಾರಗಳನ್ನ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಪೀಠ ತ್ಯಾಗಕ್ಕೆ ಪಟ್ಟು!

ಸಭೆಯಲ್ಲಿ ಮಠದ ಗೌರವ ಹಾಳು ಮಾಡುತ್ತಿರುವ ಸ್ವಾಮೀಜಿಯನ್ನ ಹೊರ ಹಾಕಬೇಕು. ಗುರು ಪೀಠದ 28 ಟ್ರಸ್ಟಿಗಳು ರಾಜೀನಾಮೆ ನೀಡಬೇಕು. ಟ್ರಸ್ಟ್​ಗೆ ವಿದ್ಯಾವಂತರನ್ನ ಮತ್ತು ಸಮರ್ಥರನ್ನ ಆಯ್ಕೆ ಮಾಡಬೇಕು. ಟ್ರಸ್ಟ್​ನಲ್ಲಿ ಇರುವ ಅನ್ಯ ಸಮಾಜದವರನ್ನ ಹೊರ ಹಾಕಬೇಕು ಹಾಗೂ ಚಾಲಕ ನಾಗರಾಜ್​ನನ್ನ ಮಠದಿಂದ ಹೊರ ಹಾಕಬೇಕು ಎಂಬ 5 ನಿರ್ಣಯಗಳನ್ನ ಕೈಗೊಳ್ಳಲಾಗಿದೆ.

ಸಮಾಜದ ಮುಖಂಡರೇ ಶ್ರೀಗಳ ವಿರುದ್ದ ಆರೋಪಗಳನ್ನ ಮಾಡ್ತಿದ್ದಾರೆ. ಇಂತಹ ಕಳಂಕಗಳನ್ನ ಹೊತ್ತಿರೋ ಸ್ವಾಮೀಜಿ ನಮ್ಮ ಸಮಾಜಕ್ಕೆ ಬೇಡವೇ ಬೇಡ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ.

ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ; ಮಠದಿಂದಲೇ ಹೊರ ಹಾಕಲು ತೀರ್ಮಾನ!

https://newsfirstlive.com/wp-content/uploads/2023/09/valmiki-1.jpg

Load More