newsfirstkannada.com

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಮಿಲನ ಸೀರಿಯಲ್​​ ನಟ; ಪ್ರಶಾಂತ್ ಭಾರದ್ವಾಜ್ ಹೃದಯ ಕದ್ದ ಹುಡುಗಿ ಯಾರು?

Share :

10-09-2023

  ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟ ನಟ ಪ್ರಶಾಂತ್ ಭಾರದ್ವಾಜ್

  ಗುರು-ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ಆದ ‘ಮಿಲನ’ ಹೀರೋ

  ಮಿಲನ್​ ಸೀರಿಯಲ್​ ಮೂಲಕ ಅಭಿಮಾನಿಗಳನ್ನು ಗಳಿಕೊಂಡ ನಟ

ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಕೆಲವೊಂದು ಇನ್ನೂ ಹಚ್ಚ ಹಸಿರಾಗಿವೆ. ಅಂತಹ ದಾಖಲೆ ಬರೆದು ಮೈಲಿಗಲ್ಲು ಸೃಷ್ಟಿಸಿದ ಧಾರಾವಾಹಿಗಳಲ್ಲಿ ಸುವರ್ಣ ವಾಹಿನಿಯ ಪ್ರಸಾರವಾಗುತ್ತಿದ್ದ ಮಿಲನ ಸೀರಿಯಲ್​ ಕೂಡ ಒಂದು. ಈ ಧಾರಾವಾಹಿ ಒಂದು ಕಾಲದಲ್ಲಿ ತನ್ನ ಕಥೆಗೆ ಸಾಕಷ್ಟು ಅಭಿಮಾನಿಗಳನ್ನ ಹೊಂದಿತ್ತು. ಈ ಧಾರಾವಾಹಿಯ ನಾಯಕ ನಟ ಪ್ರಶಾಂತ್ ಭಾರದ್ವಾಜ್, ಸಮರ್ಥ್ ಪಾತ್ರವನ್ನ ನಿರ್ವಹಿಸಿದ್ದರು. ಅದೆಷ್ಟೋ ಜನರು ಅವರ ನಟನೆಗೆ ಇಂದಿಗೂ ಕನ್ನಡ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್‌ ಫಾಲೋಯಿಂಗ್ ಇದೆ.

ಸದ್ಯ ಈಗ ನಟ ಪ್ರಶಾಂತ್ ಭಾರದ್ವಾಜ್ ತಮ್ಮ ಅಭಿಮಾನಿಗಳೊಟ್ಟಿಗೆ ಒಂದು ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ನಟ ಪ್ರಶಾಂತ್ ಅವರು ವೈಷ್ಣವಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರು-ಹಿರಿಯರ ಸಮ್ಮುಖದಲ್ಲಿ ಎಂಗೇಜ್ ಆಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ ಈ ಜೋಡಿ.

ಇನ್ನೂ, ಈ ಇಬ್ಬರ ಜೋಡಿಗೆ ಶುಭ ಹಾರೈಸಲು ಮಿಲನ ಧಾರಾವಾಹಿಯ ಮೂಲಕ ತಮ್ಮ ನಟನೆ ಶುರು ಮಾಡಿದ ನಟ ಹಾಗೂ ನಿರೂಪಕ ನಿರಂಜನ್ ದೇಶ್​ಪಾಂಡೆ ಕೂಡ ತಮ್ಮ ಪತ್ನಿ ಯಶಸ್ವಿನಿಯೊಟ್ಟಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಈ ಸಿಹಿ ಸುದ್ದಿಯನ್ನು ಪ್ರಶಾಂತ್ ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಪ್ರಶಾಂತ್ ಬೇರೆ ಭಾಷೆಗಳ ಕಿರುತೆರೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆಗಿ ತಮ್ಮ ನಟನೆಯನ್ನ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಮಿಲನ ಸೀರಿಯಲ್​​ ನಟ; ಪ್ರಶಾಂತ್ ಭಾರದ್ವಾಜ್ ಹೃದಯ ಕದ್ದ ಹುಡುಗಿ ಯಾರು?

https://newsfirstlive.com/wp-content/uploads/2023/09/kannada.png

Load More