newsfirstkannada.com

ಉಚಿತ ಯೋಜನೆಗಳು ಒಂಥರಾ ಗಂಡನ ದರೋಡೆ ಮಾಡಿ ಪತ್ನಿಗೆ ಕೊಟ್ಟಂತಾಗಿದೆ; ಸಂಸದ ಪ್ರತಾಪ್​ ಸಿಂಹ ವ್ಯಂಗ್ಯ

Share :

Published June 19, 2023 at 1:30pm

Update June 19, 2023 at 1:34pm

    ವಿದ್ಯುತ್ ದರ ಏರಿಕೆ ಕುರಿತು ಪ್ರತಾಪ್​ ಸಿಂಹ ಟಾಕ್​

    ಕರ್ನಾಟಕ ಬಂದ್​​ಗೆ ಕೈ ಜೋಡಿಸಿ ಎಂದ ಸಂಸದ

    ನಿಮ್ಮದು ದೋಖಾ ಸರಕಾರ ಎಂಬುದು ಸಾಬೀತು ಮಾಡಿದ್ರಿ

ಮೈಸೂರು: ಉಚಿತ ಯೋಜನೆಗಳು ಒಂಥರಾ ಗಂಡನ ದರೋಡೆ ಮಾಡಿ, ಪತ್ನಿಗೆ ಕೊಟ್ಟಂತಾಗಿದೆ. ಗಂಡನ ಜೇಬಿಗೆ ಕತ್ತರಿ ಹಾಕಿ ಪತ್ನಿಗೆ ಕೊಡುವುದರಲ್ಲಿ ಏನು ಅರ್ಥ ಇದೆ ಹೇಳಿ? ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮೈಸೂರಿನಲ್ಲಿ  ಮಾತನಾಡಿದ ಅವರು, ವಿದ್ಯುತ್ ದರ ಯದ್ವತದ್ವಾ ಏರಿಕೆಯಾಗಿದೆ. ಜನರಿಗೆ ಕರೆಂಟ್ ಶಾಕ್ ಹೊಡೆದಿದೆ. ಕೈಗಾರಿಕಾ ಉದ್ಯಮಿಗಳು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿವೆ ಎಂದು ಹೇಳಿದ್ದಾರೆ.

ವಿದ್ಯುತ್ ದರ ಏರಿಕೆ ಖಂಡಿಸಿ ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿದ ಪ್ರತಾಪ್​ ಸಿಂಹ, ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳಿಗೆ ಬರೆ ಹಾಕುವ ಕೆಲಸ ನಡೆಯುತ್ತಿದೆ. 200 ಯೂನಿಟ್ ಫ್ರೀ ಅಂತಾ ಹೇಳಿದ್ದಿರಿ. ನಿಮ್ಮ ಮನೆಯಲ್ಲಿ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬ ಅರಿವು ನಿಮಗೆ ಇಲ್ವಾ?. ನಿಮ್ಮದು ದೋಖಾ ಸರಕಾರ ಅಲ್ವಾ?. ನಿಮ್ಮ ಮನೆಯಲ್ಲೇ ಎಷ್ಟು ವಿದ್ಯುತ್ ಖರ್ಚಾಗುತ್ತದೆ ಎಂಬುದು ನಿಮಗೆ ಗೊತ್ತಿರಲಿಲ್ವಾ?. ನಿಮ್ಮದು ದೋಖಾ ಸರಕಾರ ಎಂಬುದು ಸಾಬೀತು ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ರಾಜ್ಯದ ಜನರು ಕೈಗಾರಿಕೋದ್ಯಮಿಗಳು ಕರೆ ಕೊಟ್ಟ ಕರ್ನಾಟಕ ಬಂದ್​ಗೆ ಕೈ ಜೋಡಿಸಿ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಚಿತ ಯೋಜನೆಗಳು ಒಂಥರಾ ಗಂಡನ ದರೋಡೆ ಮಾಡಿ ಪತ್ನಿಗೆ ಕೊಟ್ಟಂತಾಗಿದೆ; ಸಂಸದ ಪ್ರತಾಪ್​ ಸಿಂಹ ವ್ಯಂಗ್ಯ

https://newsfirstlive.com/wp-content/uploads/2023/06/Prathap-Simha.jpg

Load More