newsfirstkannada.com

ಮೈಸೂರಲ್ಲೇ ‘ಗೃಹಲಕ್ಷ್ಮೀ’ ಯೋಜನೆ ಉದ್ಘಾಟನೆ ಹಿಂದಿದೆ ರಣತಂತ್ರ.. ಪ್ರತಾಪ್ ಸಿಂಹ vs ಡಾ.ಯತೀಂದ್ರ ಸಿದ್ದರಾಮಯ್ಯ..!

Share :

31-08-2023

    ಪ್ರತಾಪ್ ಸಿಂಹ ವಿರುದ್ಧ ತೊಡೆ ತಟ್ಟಲು ಡಾ.ಯತೀಂದ್ರ ತಂತ್ರ..!

    ‘ಲೋಕ’ ಸಮರಕ್ಕೆ ತಯಾರಿ ನಡೆಸ್ತಿದ್ದಾರಾ ಸಿದ್ದರಾಮಯ್ಯ ಪುತ್ರ?

    ಕೊಡಗು ಶಾಸಕರಿಗೆ ಯತೀಂದ್ರ ಕೊಟ್ಟಿದ್ದಾರಂತೆ ಬಿಗ್ ಟಾರ್ಗೆಟ್

ಮೈಸೂರು: ದೇಶದ ರಾಜಕಾರಣದಲ್ಲಿ ಲೋಕಸಭೆ ಚುನಾವಣೆ ಸಂಬಂಧ ಚರ್ಚೆಗಳು ಜೋರಾಗಿವೆ. ಪಕ್ಷದ ಮಟ್ಟದಲ್ಲಿ ಹೇಗೆ ಅಧಿಕಾರಕ್ಕೆ ಬರಬೇಕು ಅನ್ನೋ ವಿಚಾರವಾದರೆ, ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಆಕಾಂಕ್ಷಿತ ಅಭ್ಯರ್ಥಿಗಳ ಲೆಕ್ಕಚಾರವೇ ಇನ್ನೊಂದು. ಈ ಬಾರಿ ಹೇಗೆ ಗೆಲ್ಲಬೇಕು? ಎದುರಾಳಿಯನ್ನು ಯಾವಲ್ಲ ತಂತ್ರಗಳಿಂದ ಮಣಿಸಬೇಕು ಎಂಬ ಚಟುವಟಿಕೆಗಳು ಗರಿಗೆದರಿವೆ.

ಇದಕ್ಕೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಹೊರತಾಗಿಲ್ಲ. ರಾಜಕೀಯವಾಗಿ ಗುಲ್ಲೆದ್ದಿರುವ ಪ್ರಕಾರ, ಡಾ.ಯತೀಂದ್ರ ಸಿದ್ದರಾಮಯ್ಯ ಹಾಲಿ ಸಂಸದ ಪ್ರತಾಪ್ ಸಿಂಹರನ್ನು ಸೋಲಿಸಲು ರಣತಂತ್ರ ರೂಪಿಸುತ್ತಿದ್ದಾರಂತೆ. ಹೇಗಾದರೂ ಮಾಡಿ ಸೋಲಿಸಿಯೇ ತೀರಬೇಕು ಎಂದು ಪಣತೊಟ್ಟಿರುವ ಯತೀಂದ್ರ, ಪ್ಲಾನ್​ಗಳನ್ನು ಮಾಡುತ್ತಿದ್ದಾರಂತೆ.

ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸುತ್ತ ಇರುತ್ತಾರೆ. ಪದೆ ಪದೇ ಕಾಂಗ್ರೆಸ್​ ಟೀಕೆ ಮಾಡುವ ಸಿಂಹಗೆ ಸೋಲಿನ ರುಚಿ ಕಾಣಿಸಬೇಕು ಎಂದು ಯತೀಂದ್ರ ಸಿಡಿದು ನಿಂತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ತಮಗೆ (ಯತೀಂದ್ರ) ಅಥವಾ ಯಾರಿಗೇ ಟಿಕೆಟ್ ನೀಡಲಿ. ನನ್ನ ಅಭ್ಯಂತರ ಏನೂ ಇಲ್ಲ. ಆದರೆ ಪ್ರತಾಪ್ ಸಿಂಹರನ್ನು ಸೋಲಿಸಲೇಬೇಕು ಎಂದು ತೊಡೆ ತಟ್ಟಿದ್ದಾರಂತೆ.

ತಮ್ಮ ಟಾರ್ಗೆಟ್ ಗೆಲ್ಲಲು ಕೊಡಗಿನ ಇಬ್ಬರು ಶಾಸಕರಿಗೆ ಹೆಚ್ಚಿನ ಸಿದ್ಧತೆಗೆ ಯತೀಂದ್ರ ಸಲಹೆ ಕೂಡ ನೀಡಿದ್ದಾರೆ. ಕೊಡಗಿನ ಶಾಸಕರಾದ ಎಸ್.ಪೊನ್ನಣ್ಣ, ಮಂತರಗೌಡಗೆ ಲೋಕಸಭೆ ಚುನಾವಣೆಯ ತಂತ್ರಗಾರಿಕೆ ರೂಪಿಸಲು ಸೂಚನೆ ನೀಡಿದ್ದಾರಂತೆ. ಇನ್ನು ಮೈಸೂರಿನಲ್ಲಿ ಖುದ್ದು ತಾವೇ ತಂತ್ರ ರೂಪಿಸಲು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಮೈಸೂರಿನಿಂದಲೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕೊಡಲಾಗಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರಲ್ಲೇ ‘ಗೃಹಲಕ್ಷ್ಮೀ’ ಯೋಜನೆ ಉದ್ಘಾಟನೆ ಹಿಂದಿದೆ ರಣತಂತ್ರ.. ಪ್ರತಾಪ್ ಸಿಂಹ vs ಡಾ.ಯತೀಂದ್ರ ಸಿದ್ದರಾಮಯ್ಯ..!

https://newsfirstlive.com/wp-content/uploads/2023/08/PRATAP_SHIMH.jpg

Load More