newsfirstkannada.com

ಸಣ್ಣ ಸುಳಿವು ಇಲ್ಲದೆ ಅಧಿಕಾರಿಯ ಬರ್ಬರ ಹತ್ಯೆ; ಒಬ್ಬಂಟಿ ಮಹಿಳೆಯನ್ನು ಟಾರ್ಗೆಟ್​ ಮಾಡಿದ ಹಂತಕರಿಗಾಗಿ ಪೊಲೀಸರು ಬಲೆ

Share :

05-11-2023

    ಕುವೆಂಪುನಗರದ ಮನೆಯಲ್ಲಿ​ ನಡೆದ ಘಟನೆ

    ಸರ್ಕಾರಿ ಮಹಿಳಾ ಅಧಿಕಾರಿಯನ್ನು ಚಾಕು ಇರಿದು ಕೊಲೆ

    ಕಳೆದ ಎಂಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸ

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪ್ರತಿಮಾ ಕೊಲೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ದೊಡ್ಡ್ ಕಲ್ಲ್ ಸಂದ್ರದ ಬಳಿ ಇರುವ ಕುವೆಂಪುನಗರದ ಮನೆಯೊಂದರಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಲಾಗಿದ್ದು, ಇದರ ವಿಚಾರವಾಗಿ ಸಾಕಷ್ಟು ಅನುಮಾನ ಹುಟ್ಟಿಕೊಂಡಿದೆ.

ಶಿವಮೊಗ್ಗದ ತಿರ್ಥಹಳ್ಳಿ ಮೂಲದವರಾಗಿದ್ದ ಪ್ರತಿಮಾ ನಿನ್ನೆ ರಾತ್ರಿ 8.30ಕ್ಕೆ ಕೊಲೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಚಾಕು ಇರಿದು ಕೊಲೆ ಮಾಡಲಾಗಿದೆ. ಆರೋಪಿ ಯಾವುದೇ ಸಣ್ಣ ಕ್ಲೂ ಸಿಗದಂತೆ ಕತ್ತು ಸೀಳಿ ಎಸ್ಕೇಪ್ ಆಗಿದ್ದಾನೆ. ಪ್ರತಿಮಾ ಕುಟುಂಬಸ್ಥರಿಗೆ ಇಂದು ಬೆಳಗ್ಗೆ ಈ ವಿಚಾರ ಗೊತ್ತಾಗಿದ್ದು, ಪ್ರತಿಮಾ ಮೃತದೇಹದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಎಸಿಪಿ ಪವನ್, ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿದ್ದಾರೆ.

ಪ್ರತಿಮಾ ಬೆಂಗಳೂರು ದಕ್ಷಿಣ ಸೀನಿಯರ್ ಜಿಯೋಲಜಿಸ್ಟ್ ಆಗಿದ್ದರು. ಕಳೆದ ಎಂಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮಹಿಳಾ ಅಧಿಕಾರಿ ವಾಸವಿದ್ದ ಮನೆಗೆ ಯಾವುದೇ ಸಿಸಿಟಿವಿ ಇರಲಿಲ್ಲ. ಆದರೀಗ ಪೊಲೀಸರು ಅಕ್ಕ ಪಕ್ಕದ ಮನೆಯ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿ ಯಾರೆಂದು ಹುಡುಕಾಟ ನಡೆಸುತ್ತಿದ್ದಾರೆ. ಎಫ್.ಎಸ್.ಎಲ್ ಹಾಗೂ ಡಾಗ್ ಸ್ಕ್ವಾಡ್ ನಿಂದ ಪ್ರತಿಮಾ ನಿವಾಸದ ತಪಾಸಣೆ ನಡೆಯುತ್ತಿದೆ.

ಪ್ರತಿಮಾ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ರಾತ್ರಿ ಅಣ್ಣ ಕರೆಮಾಡಿದಾಗ ಪ್ರತಿಮಾ ಕರೆ ಸ್ವೀಕರಿಸಿಲ್ಲ. ಬೆಳಿಗ್ಗೆ ಮನೆ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇನ್ನು ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕ ಕೊಲೆ ನಡೆದಿದೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಸುಬ್ರಹ್ಮಣ್ಯಪುರ ಪೊಲೀಸರು ಮನೆ ಕೆಲಸದಾಕೆ, ಕುಟುಂಬಸ್ಥರು, ಡ್ರೈವರ್ ಹಾಗೂ ನೆರೆಹೊರೆಯವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಣ್ಣ ಸುಳಿವು ಇಲ್ಲದೆ ಅಧಿಕಾರಿಯ ಬರ್ಬರ ಹತ್ಯೆ; ಒಬ್ಬಂಟಿ ಮಹಿಳೆಯನ್ನು ಟಾರ್ಗೆಟ್​ ಮಾಡಿದ ಹಂತಕರಿಗಾಗಿ ಪೊಲೀಸರು ಬಲೆ

https://newsfirstlive.com/wp-content/uploads/2023/11/Prathima-2.jpg

Load More