newsfirstkannada.com

ಇಂದು ಹುಟ್ಟೂರಲ್ಲಿ ಪ್ರತಿಮಾ ಅಂತ್ಯಕ್ರಿಯೆ.. ಕೊಲೆಯ ಹಿಂದಿನ ಆರೋಪಿಗಳ ಪತ್ತೆಗೆ ಪೊಲೀಸರಿಂದ 3 ತಂಡ ರಚನೆ

Share :

06-11-2023

    ಕೊಲೆ ನಡೆದ ಸ್ಥಳದಲ್ಲಿ ಪ್ರತಿಮಾ ಮೊಬೈಲ್ ಪತ್ತೆ, ವಶಕ್ಕೆ ಪಡೆದ ಪೊಲೀಸರು

    ದಕ್ಷ ಅಧಿಕಾರಿಯ ಮೊಬೈಲ್​ನಲ್ಲಿ ಏನಿತ್ತು? ಅವ್ರು ಯಾರಿಗಾದ್ರೂ ಕರೆ ಮಾಡಿದ್ರಾ?

    ಕರೆಗಳು, ಮೆಸೇಜ್‌, ಚಾಟಿಂಗ್‌ ಕಲೆ ಹಾಕಲು ಮುಂದಾದ ಸುಬ್ರಮಣ್ಯಪುರ ಪೊಲೀಸರು

ಮನೆಯಲ್ಲಿ ಒಂಟಿಯಾಗಿದ್ದ ಅಧಿಕಾರಿಯನ್ನ ಅಟ್ಯಾಕ್ ಮಾಡಿದ್ದ ದುಷ್ಕರ್ಮಿಗಳು ಆಕೆಯ ಉಸಿರನ್ನೇ ನಿಲ್ಲಿಸಿದ್ರು. ಕೊಲೆಯ ಜಾಡು ಕಂಡು ಹಿಡಿಯೋಕೆ ತನಿಖೆಗಾಗಿ 3 ತಂಡ ಕೂಡ ರಚನೆಯಾಗಿದ್ದು. ಅದರ ಡಿಟೇಲ್ಸ್ ಇಲ್ಲಿದೆ.

ಪ್ರತಿಮಾ. ಖಡಕ್ ಆಫೀಸರ್. ಕೆಲಸದ ವಿಚಾರದಲ್ಲಿ ಇವರಿಗೆ ಕಾಂಪ್ರಮೈಸ್‌ ಅನ್ನೋದೇ ಇರ್ಲಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪ-ನಿರ್ದೇಶಕಿಯಾಗಿ ಸೇವೆ ಸಲ್ಲಿಸ್ತಿದ್ದ ಪ್ರತಿಮಾ ಭೀಕರವಾಗಿ ಹತ್ಯೆಯಾಗಿದ್ದು, ಮಹಿಳಾ ಅಧಿಕಾರಿಯನ್ನ ದುಷ್ಕರ್ಮಿಗಳು ಕೊಲೆ ಮಾಡಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಧಿಕಾರಿ ಕೊಲೆ ತನಿಖೆಗಾಗಿ ಮೂರು ತಂಡ ರಚನೆ

ಪ್ರತಿಮಾ ಅವ್ರ ಕೊಲೆ ಕೇಸ್‌ ತನಿಖೆಯನ್ನ ಕೈಗೆತ್ತಿಕೊಂಡಿರೋ ಪೊಲೀಸ್ರು ತನಿಖೆ ಚುರುಕುಗೊಳಿಸಿದ್ದಾರೆ. ಈಗಾಗಲೇ ಕೊಲೆಯಾದ ಮಹಿಳಾ ಅಧಿಕಾರಿಯ ಮೊಬೈಲ್‌ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆಗಾಗಿ ಮೂರು ತಂಡಗಳನ್ನ ರಚಿಸಲಾಗಿದೆ.

ಐಫೋನ್ ಅನ್ಲಾಕ್‌ ಹಾಗೂ ರಿಟ್ರೀವ್‌ಗೆ ಸಿದ್ಧತೆ

ಅಧಿಕಾರಿ ಪ್ರತಿಮಾ ಕೊಲೆಯಾದ ಸ್ಥಳದಲ್ಲಿ ಮೊಬೈಲ್‌ ಪತ್ತೆಯಾಗಿದ್ದು, ಪರಿಶೀಲನೆ ವೇಳೆ ಐಫೋನ್‌ ಲಾಕ್ ಆಗಿತ್ತು. ಹೀಗಾಗಿ ಐಫೋನ್‌ ಅನ್ಲಾಕ್‌ ಹಾಗೂ ರಿಟ್ರೀವ್‌ಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಕರೆಗಳು, ಮೆಸೇಜ್, ವಾಟ್ಸಪ್ ಚಾಟಿಂಗ್ ಕಲೆ ಹಾಕಲು ಮುಂದಾಗಿದ್ದಾರೆ. ಪ್ರತಿಮಾ ಅವರಿಗೆ ಯಾರ್ಯಾರು ಕರೆ ಮಾಡಿದ್ದರು ಅಥವಾ ಅವರು ಯಾರಿಗಾದ್ರೂ ಕರೆ ಮಾಡಿದ್ರಾ ಅಂತಾ ಪರಿಶೀಲನೆ ನಡೆಸಲಾಗ್ತಿದೆ. ಐಫೋನ್ ಲಾಕ್‌ ಆಗಿದ್ದರಿಂದ ಟೆಕ್ನಿಕಲ್ ಸೆಲ್‌ಗೆ ರವಾನಿಸಿ, ಸುಬ್ರಮಣ್ಯಪುರ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.

ಮೃತ ಪ್ರತಿಮಾ ಅಂತಿಮ ದರ್ಶನವನ್ನ ಬಾಲ್ಯದ ಸ್ನೇಹಿತೆ ಸುಮಾ ಕಾಮತ್‌ ಪಡೆದಿದ್ದು, ಒಳ್ಳೆಯವರನ್ನ ಕೊಲೆ ಮಾಡುವ ಮನಸ್ಸು ದೇವ್ರು ಹೇಗ್ ಕೊಡ್ತಾನೋ ಗೊತ್ತಾಗ್ತಿಲ್ಲ ಎಂದು ಹೇಳುತ್ತಾ ಗದ್ಗದಿತರಾದರು.

ಇವತ್ತು ಮೃತ ಪ್ರತಿಮಾ ಅಂತ್ಯಕ್ರಿಯೆ ಅನ್ನು ತೀರ್ಥಹಳ್ಳಿಯಲ್ಲಿ ನೆರವೇರಿಸಲಾಗುವುದು ಅಂತ ಕುಟುಂಬಸ್ಥರು ತಿಳಿಸಿದ್ದಾರೆ.

ಕೊಲೆ ಕೇಸ್..ಬೇಜವಾಬ್ದಾರಿ ಹೇಳಿಕೆ ಕೊಟ್ರಾ ಸಚಿವರು?

ಇನ್ನು, ಕೊಲೆಗೆ ಇಲಾಖೆಯಿಂದ ಅಂತಹ ಯಾವ್ದೇ ಮೇಜರ್ ಇಸ್ಯೂ ಇರ್ಲಿಲ್ಲ. ಅಕ್ರಮ ಗಣಿಗಾರಿಕೆ ಕೊಲೆಗೆ ಕಾರಣ ಅನ್ನೋದು ಇದೆ ಅಂತಾ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ಹೇಳಿದ್ರು. ಅಷ್ಟೇ ಅಲ್ಲದೇ ಅಧಿಕಾರಿಗಳಿಗೆ ಭದ್ರತೆ ಸಿಕ್ತಿಲ್ವಾ ಎಂಬ ಪ್ರಶ್ನೆಗೆ ಪ್ರತಿಯೊಬ್ಬರಿಗೆ ಭದ್ರತೆ ಕೊಡೋಕೆ ಆಗುತ್ತಾ ಅಂತಾ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದಾರೆ.

‘ಪ್ರತಿಯೊಬ್ಬರಿಗೂ ಭದ್ರತೆ ಕೊಡೋಕೆ ಆಗುತ್ತಾ’ 

ಒಟ್ಟಿನಲ್ಲಿ ದಕ್ಷ ಅಧಿಕಾರಿ ದಾರುಣ ಅಂತ್ಯ ಕಂಡಿದ್ದಾರೆ. ಕೊಲೆ ಹಿಂದೆ ಅಕ್ರಮ ಗಣಿಗಾರಿಕೆ ವಾಸನೆ ಇದ್ಯೋ ಅಥವಾ ಕಾಣದ ಕೈಗಳ ಶಕ್ತಿ ಇದ್ಯೋ ಅನ್ನೋದು ತನಿಖೆ ನಂತ್ರವಷ್ಟೇ ಗೊತ್ತಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಹುಟ್ಟೂರಲ್ಲಿ ಪ್ರತಿಮಾ ಅಂತ್ಯಕ್ರಿಯೆ.. ಕೊಲೆಯ ಹಿಂದಿನ ಆರೋಪಿಗಳ ಪತ್ತೆಗೆ ಪೊಲೀಸರಿಂದ 3 ತಂಡ ರಚನೆ

https://newsfirstlive.com/wp-content/uploads/2023/11/Prathima-1.jpg

Load More