ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ಆರೋಪಗಳ ಬೆನ್ನಲ್ಲೆ ಹೊಸ ಬೆಳವಣಿಗೆ
ದೇವರ ನೈವೇದ್ಯಕ್ಕೆ ಸಿಹಿ ಪದಾರ್ಥಗಳನ್ನು ತರದಂತೆ ಭಕ್ತಾದಿಗಳಿಗೆ ಮನವಿ
ಪ್ರಯಾಗರಾಜ್ನ ಎಲ್ಲಾ ದೇವಾಲಯಗಳಲ್ಲಿ ಇನ್ಮುಂದೆ ಸಿಹಿ ತಿಂಡಿಗಳು ಬ್ಯಾನ್
ತಿರುಪತಿ ಪ್ರಸಾದ ಲಡ್ಡು ವಿಚಾರದಲ್ಲಿ ನೂರಾರು ವಿವಾದಗಳು ಸುತ್ತಿಕೊಂಡ ಬಳಿಕ ಈಗ ದೇಶದ ಎಲ್ಲಾ ದೇವಸ್ಥಾನಗಳು ಪ್ರಸಾದದ ಪರಿಶುದ್ಧತೆ ಕಾಪಾಡುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿವೆ. ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಮಿಶ್ರಣದ ವಿಚಾರದ ಇಡೀ ದೇಶದ ಜನರ ಭಕ್ತಿಯೇ ಅಶುದ್ಧಗೊಂಡಂತ ಭಾವನೆಯನ್ನು ಹುಟ್ಟಿಸಿತ್ತು. ಹೀಗಾಗಿ ಪ್ರಯಾಗರಾಜ್ ಎಲ್ಲಾ ದೇವಸ್ಥಾನದ ಅರ್ಚಕರು ಈಗ ಭಕ್ತರಿಗೆ ಒಂದು ಹೊಸ ಮನವಿ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕೆ ದೇವರಿಗೆ ಅರ್ಪಿಸಲು ಸ್ವೀಟ್ ತರುವ ಬದಲು ಡ್ರೈಫ್ರೂಟ್ಸ್ ಇಲ್ಲವೇ ತೆಂಗಿನಕಾಯಿ ಮಾತ್ರ ತರುವಂತೆ ಮನವಿ ಮಾಡಿಕೊಂಡಿವೆ.
ಇದನ್ನೂ ಓದಿ: 11 ವರ್ಷದ ಹಿಂದೆ ನಾಪತ್ತೆ! ಬಲ ಕೈಯಲ್ಲಿ ನಾಯಿ ಕಚ್ಚಿದ ಗುರುತು, ಎಡ ಕೈಯಲ್ಲಿ ಮಂಗ ಕಚ್ಚಿದ ಗುರುತು ನೋಡಿ ಪತ್ತೆ
ಪ್ರಯಾಗರಾಜ್ನಲ್ಲಿರುವ ಪ್ರಮುಖ ಮಂದಿರಗಳಾದ ಅಲೋಪ ಶಂಕರಿದೇವಿ ಮಂದಿರ, ಬಡೇ ಹನುಮಾನ್ ಮಂದಿರ, ಮಂಕಮೇಶ್ವರ ಮಂದಿರ ಹಾಗೂ ಲಲಿತಾದೇವಿ ಪ್ರಧಾನ ಅರ್ಚಕರು ಈ ರೀತಿಯ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಲಲಿತಾದೇವಿ ಮಂದಿರದ ಪ್ರಧಾನ ಅರ್ಚಕರಾದ ಶಿವಮೂರತ್ ಮಿಶ್ರಾ ಅವರು ಮಂದಿರದ ಆಡಳಿತ ಮಂಡಳಿ ಎಲ್ಲಾ ಸೇರಿ ಒಂದು ಸಭೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ, ಮಂದಿರದಲ್ಲಿ ಸಿಹಿ ಪದಾರ್ಥಗಳನ್ನು ದೇವರಿಗೆ ನೈವೇದ್ಯವಾಗಿ ಪಡೆಯುವುದನ್ನು ನಿಷೇಧಿಸಲಾಗಿದೆ. ಆದ್ರೆ ಭಕ್ತಾದಿಗಳಿಗೆ ತೆಂಗಿನಕಾಯಿ, ಹಣ್ಣು ಹಾಗೂ ಡ್ರೈಫ್ರೂಟ್ಸ್ಗಳನ್ನು ನೈವೇದ್ಯಕ್ಕಾಗಿ ತರುವಂತೆ ಮನವಿ ಮಾಡಿಕೊಂಡಿದ್ದೇವೆ ಎಂದು ಮಿಶ್ರಾ ಹೇಳಿದ್ದಾರೆ.
ಇದನ್ನೂ ಓದಿ: ಪುಣ್ಯಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ 43 ಮಂದಿ ನಾಪತ್ತೆ.. 37 ಮಕ್ಕಳು ಮಿಸ್ಸಿಂಗ್
ಇನ್ನು ಮಂಕೇಶ್ವರ ಮಂದಿರದ ಪ್ರಧಾನ ಅರ್ಚಕರಾದ ಮಹಾಂತ್ ಶ್ರೀಧರಾನಂದ ಬ್ರಹ್ಮಚಾರಿ ಮಂದಿರದಿಂದ ಪ್ರಾಂಗಣದಲ್ಲಿ ಮಾರಲಾಗುವ ಲಡ್ಡು, ಪೇಡಾ ಸೇರಿದಂತೆ ಉಳಿದ ಸಿಹಿ ತಿಂಡಿಗಳ ಶುದ್ಧತೆಯನ್ನು ಪರೀಕ್ಷಿಸುವಂತೆ ನಾವು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಪತ್ರ ಬರೆದಿದ್ದೇವೆ. ಎಲ್ಲಿಯವರೆಗೆ ಆ ಸಿಹಿ ತಿಂಡಿಗಳ ಶುದ್ಧತೆಯ ಪ್ರಮಾಣತೆಯೂ ನಮಗೆ ಸಿಗುವುದಿಲ್ಲವೋ ಅಲ್ಲಿಯವರೆಗೆ ದೇವಸ್ಥಾನದಲ್ಲಿ ಆಚೆ ಮಾರು ಸಿಹಿ ತಿಂಡಿಗಳನ್ನು ನೈವೇದ್ಯಕ್ಕಾಗಿ ಪಡೆಯುವುದಿಲ್ಲ. ಅದರ ಬದಲು ಹಣ್ಣುಗಳನ್ನು ತೆಗೆದುಕೊಂಡು ಬರಲು ಭಕ್ತಾದಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ