newsfirstkannada.com

ವಿವಾದದ ನಡುವೆ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ತಯಾರಿ.. ಸುತ್ತಮುತ್ತಲೂ ಪೊಲೀಸ್ ಬಂದೋಬಸ್ತ್

Share :

19-09-2023

    ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ

    ಮೂರು ದಿನಗಳ ಕಾಲ ನಡೆಯಲಿದೆ ಧಾರ್ಮಿಕ ಕಾರ್ಯಕ್ರಮಗಳು

    ಮೈದಾನದಲ್ಲಿ ಸುತ್ತಲೂ ಸಿಸಿ ಕ್ಯಾಮರಾಗಳ ಅಳವಡಿಕೆ

ಈದ್ಗಾ ಮೈದಾನದಲ್ಲಿ ಇಂದು ಗಣೇಶನ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮೈದಾನದ ಸುತ್ತಮುತ್ತಲೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಸಾಕಷ್ಟು ವಿವಾದದ ನಡುವೆ ಗಣಪತಿ ಪ್ರತಿಷ್ಠಾಪನೆಗೆ ತಯಾರಿ ಮಾಡಿಕೊಳ್ಳಲಾಗಿದೆ.

ಈದ್ಗಾ ಮೈದಾನದಲ್ಲಿ ನಿನ್ನೆ ಅಂತರಗಂಬ ಪೂಜೆ, ಮೈದಾನ ಶುದ್ಧಿ ಪೂಜೆ ಮಾಡಿ, ಮಂಟಪ ಸಿದ್ಧಪಡಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ಅನುಮತಿಗೆ ಶಾಸಕ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ‌ ಸೇರಿದಂತೆ ಬಿಜೆಪಿ ಮುಖಂಡರು, ಹಿಂದೂಪರ ಸಂಘಟನೆ ಹೋರಾಟ ಮಾಡಿದ್ರು.

ಇಂದು ಬೆಳಗ್ಗೆ 9.30 ಕ್ಕೆ ನಗರದ ಮೂರು ಸಾವಿರ ಮಠದಿಂದ ಗಣೇಶ ಮೂರ್ತಿಯ ಮೆರವಣಿಗೆ ಹೊರಟು ಬೆಳಿಗ್ಗೆ 10.30 ಕ್ಕೆ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಲ್ಲಿದ್ದಾರೆ. ನಂತರ ಹೋಮ, ಹವನ ಜೊತೆಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಮಾಡಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಿದ್ದಾರೆ.

ಮೂರು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶಾಂತಿಯುತವಾಗಿ ಹಬ್ಬ ಆಚರಣೆಗೆ ಪೊಲೀಸ್ ಇಲಾಖೆ ಸಹ ಸಕಲ ಸಿದ್ಧತೆ ಮಾಡಿದ್ದು, ಮೈದಾನದಲ್ಲಿ ಸುತ್ತಲೂ ಸಿಸಿ ಕ್ಯಾಮರಾಗಳನ್ನು ಅಳವಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿವಾದದ ನಡುವೆ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆಗೆ ತಯಾರಿ.. ಸುತ್ತಮುತ್ತಲೂ ಪೊಲೀಸ್ ಬಂದೋಬಸ್ತ್

https://newsfirstlive.com/wp-content/uploads/2023/09/WhatsApp-Image-2023-09-19-at-8.13.54-AM-1.jpeg

Load More