newsfirstkannada.com

2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ದಂಪತಿ; ಹೇಗಿತ್ತು ಪ್ರೇರಣಾ ಸೀಮಂತ ಕಾರ್ಯಕ್ರಮ..?

Share :

Published September 11, 2023 at 8:46pm

    ಶಾಸ್ತ್ರೋಕ್ತವಾಗಿ ನಡೆಯಿತು ಪ್ರೇರಣಾ ಸೀಮಂತ ಕಾರ್ಯಕ್ರಮ

    ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದ ಪ್ರೇರಣಾ ಸೀಮಂತ

    ಮಗಳಿಗೆ ಚಿರು ಫೋಟೋ ತೋರಿಸಿ ದೊಡ್ಡಪ್ಪ ಎಂದ ಧ್ರುವ..!

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ತಿಂಗಳು ಈ ಸಿಹಿ ಸುದ್ದಿ ಹಂಚಿಕೊಂಡಿದ್ದ ಧ್ರುವಾ ಈಗ ಶಾಸ್ತ್ರೋಕ್ತವಾಗಿ ಪತ್ನಿ ಪ್ರೇರಣಾ ಅವರ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ.

ಪ್ರೇರಣಾ ಸದ್ಯ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಬೆಂಗಳೂರಿನ ಕನಕಪುರ ರಸ್ತೆಯ ನೆಲಗುಳಿಯಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಈ ಸೀಮಂತ ಕಾರ್ಯಕ್ರಮದಲ್ಲಿ ಕೆಲವೇ ಕೆಲವು ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದು, ಅರ್ಜುನ್ ಸರ್ಜಾ, ಮೇಘನಾ ರಾಜ್ ಭಾಗಿಯಾಗಿಲ್ಲ ಎನ್ನಲಾಗಿದೆ.

ಈ ವಿಶೇಷ ಸಂದರ್ಭದಲ್ಲಿ ಧ್ರುವ ತಮ್ಮ ಅಣ್ಣ ಚಿರು ಸರ್ಜಾ ಅವರನ್ನ ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ. ತಮ್ಮ ಮಗಳಿಗೆ ಚಿರು ಫೋಟೋ ತೋರಿಸಿ ದೊಡ್ಡಪ್ಪ ಅನ್ನು ಅಂತ ಹೇಳಿಕೊಡ್ತಿದ್ದ ದೃಶ್ಯ ಹೃದಯ ಸ್ಪರ್ಶಿಸುವಂತಿತ್ತು.

ಇನ್ನು 2019ರಲ್ಲಿ ಪ್ರೇರಣಾ ಜೊತೆ ಹೊಸ ಜೀವನ ಆರಂಭಿಸಿದ್ದ ಧ್ರುವಾ ಸರ್ಜಾಗೆ ಈಗಾಗಲೇ ಒಂದು ಮುದ್ದಾದ ಹೆಣ್ಣು ಮಗು ಇದೆ. 2022 ಅಕ್ಟೋಬರ್ 2ರಂದು ಮನೆಗೆ ಭಾಗ್ಯಲಕ್ಷ್ಮಿಯನ್ನ ಬರಮಾಡಿಕೊಂಡಿದ್ರು. ಇದೀಗ ಎರಡನೇ ಮಗುವಿನ ಆಗಮನವಾಗ್ತಿದ್ದು, ಈ ಸಲ ಕೃಷ್ಣನ ನಿರೀಕ್ಷೆಯಲ್ಲಿದ್ದಂತೆ ಧ್ರುವ ಸರ್ಜಾ ದಂಪತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ ದಂಪತಿ; ಹೇಗಿತ್ತು ಪ್ರೇರಣಾ ಸೀಮಂತ ಕಾರ್ಯಕ್ರಮ..?

https://newsfirstlive.com/wp-content/uploads/2023/09/Simanta.jpg

Load More