newsfirstkannada.com

ಹಿಂದಿನ ಸರ್ಕಾರಕ್ಕೆ ಇಸ್ರೋ ಮೇಲೆ ನಂಬಿಕೆ ಇರಲಿಲ್ಲ; ಕಾಂಗ್ರೆಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದ ನಂಬಿ ನಾರಾಯಣನ್ ಸ್ಟೇಟ್​​ಮೆಂಟ್!

Share :

28-08-2023

    ಚಂದ್ರಯಾನ-3 ಸಕ್ಸಸ್ ಬೆನ್ನಲ್ಲೇ ಕ್ರೆಡಿಟ್ ವಾರ್

    ಇಸ್ರೋ ಮಾಜಿ ವಿಜ್ಞಾನಿಯಿಂದ ಸ್ಫೋಟಕ ಹೇಳಿಕೆ

    ‘ಫಂಡ್ ಕೂಡ ನೀಡುತ್ತಿರಲಿಲ್ಲ’ ಎಂದ ಮಾಜಿ ವಿಜ್ಞಾನಿ

ಚಂದ್ರಯಾನ ಸಕ್ಸಸ್ ಬೆನ್ನಲ್ಲೇ ದೇಶದಲ್ಲಿ ಕ್ರೆಡಿಟ್ ವಾರ್ ಜೋರಾಗಿ ನಡೆಯುತ್ತಿದೆ. ಇಸ್ರೋ ವಿಜ್ಞಾನಿಗಳಿಗೆ ನೀಡಬೇಕೇ? ತಿರುಪತಿ ತಿಮ್ಮಪ್ಪನಿಗೆ ನೀಡಬೇಕೇ? ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೇ..? ಅನ್ನೋ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇದೀಗ ಇಸ್ರೋದ ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ನೀಡಿರುವ ಸ್ಟೇಟ್​​ಮೆಂಟ್ ಕಾಂಗ್ರೆಸ್​ ನಾಯಕರ ಬಾಯಿ ಕಟ್ಟಿಹಾಕಿದೆ.

ಅದು ಇಸ್ರೋದ ಆರಂಭದ ದಿನಗಳು ಆಗಿದ್ದವು. ಕೇಂದ್ರದಲ್ಲಿದ್ದ ಹಿಂದಿನ ಕಾಂಗ್ರೆಸ್​ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಹೆಚ್ಚಿನ ಹಣವನ್ನು ಮಂಜೂರು ಮಾಡಲಿಲ್ಲ. ಏಕೆಂದರೆ ಸರ್ಕಾರಕ್ಕೆ ಇಸ್ರೋದ ಮೇಲೆ ‘ನಂಬಿಕೆ ಇರಲಿಲ್ಲ’ ಎಂದಿದ್ದಾರೆ. ನಂಬಿ ನಾರಾಯಣನ್ ಮಾತನಾಡಿರುವ ಈ ವಿಡಿಯೋ ತುಣುಕನ್ನು ಬಿಜೆಪಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಾಂಗ್ರೆಸ್​ಗೆ ತಿರುಗೇಟು ನೀಡಿದೆ. ಯಾವಾಗ ವಿಶ್ವಾಸರ್ಹತೆಯನ್ನು ಇಸ್ರೋ ಪ್ರೂವ್ ಮಾಡಿತೋ ಅಂದಿನಿಂದ ಕೇಂದ್ರ ಸರ್ಕಾರ ಸಂಸ್ಥೆಗೆ ಹಣವನ್ನು ಬಿಡುಗಡೆ ಮಾಡಿತು. ಅಂದು ನಮ್ಮ ಹತ್ತಿರ ಜೀಪ್ ಇರಲಿಲ್ಲ. ಕಾರೂ ಇರಲಿಲ್ಲ. ನಮ್ಮ ಬಳಿ ಏನೂ ಇರಲಿಲ್ಲ. ಅಂದರೆ, ನಮಗೆ ಬಜೆಟ್ ಹಂಚಿಕೆ ಆಗಿರಲಿಲ್ಲ. ಇವೆಲ್ಲ ಇಸ್ರೋದ ಆರಂಭ ದಿನಗಳು ಆಗಿದ್ದವು ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ ಸಕ್ಸಸ್​ ಅನ್ನು ತಾವು ಪಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ವಿಜ್ಞಾನಿ, ಹಾಗಾದರೆ ಈ ಕ್ರೆಡಿಟ್ ಯಾರಿಗೆ ಸಲ್ಲಬೇಕು ಎಂದಿದ್ದಾರೆ. ನೀವು ರಾಷ್ಟ್ರೀಯ ಪ್ರಾಜೆಕ್ಟ್​​​ಗಳನ್ನು ಕೈಗೆತ್ತಿಕೊಂಡಾಗ ಯಾರಿಗೆ ಕ್ರೆಡಿಟ್ ಸಲ್ಲಿಸಬೇಕು. ಅದು ಪ್ರಧಾನಮಂತ್ರಿಗೆ. ನಿಮಗೆ ಪ್ರಧಾನಮಂತ್ರಿ ಇಷ್ಟ ಆಗದಿದ್ದರೆ, ಅದರು ನಿಮ್ಮ ಸಮಸ್ಯೆ. ಇದೇ ವೇಳೆ ಇಸ್ರೋ ವಿಜ್ಞಾನಿಗಳಿಗೆ ಸ್ಯಾಲರಿ ಸರಿಯಾಗಿ ಆಗುತ್ತಿರಲಿಲ್ಲವಂತೆ ಹೌದೇ ಎಂದು ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ನಾರಾಯಣನ್, ಸ್ಯಾಲರಿ ವಿಳಂಬ ಆಗುತ್ತಿರಲಿಲ್ಲ. ಪೆನ್ಷನ್ ಹಣದಲ್ಲೂ ಯಾವುದೇ ಮೋಸ ಇಲ್ಲ. ನನಗೆ ಪ್ರತಿ ತಿಂಗಳ 29ಕ್ಕೆ ಪೆನ್ಷನ್ ಹಣ ಬರುತ್ತದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿಂದಿನ ಸರ್ಕಾರಕ್ಕೆ ಇಸ್ರೋ ಮೇಲೆ ನಂಬಿಕೆ ಇರಲಿಲ್ಲ; ಕಾಂಗ್ರೆಸಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದ ನಂಬಿ ನಾರಾಯಣನ್ ಸ್ಟೇಟ್​​ಮೆಂಟ್!

https://newsfirstlive.com/wp-content/uploads/2023/08/NAMBI_NARAYANA.jpg

Load More